ನಿನ್ನ ಸ್ವಹಿತ ಮಾಡೋ ಪ್ರಾಣಿ |
ನಿನ್ನ ಸ್ವಹಿತ ಮಾಡೋ ಪ
ಶರಣರ ಕೂಡಿ ಸ್ಥಿರ ಮನಮಾಡಿ |
ಹರಿಯ ಕೊಂಡಾಡಿ ಪರಗತಿ ಬೇಡಿ |
ಮರೆದು ಈಡ್ಯಾಡೀ 1
ಹಳೆಯ ದುಃಸಂಗಾ ಕಳೆದಂತರಂಗಾ |
ದೊಳು ಧ್ಯಾನದಂಗಾ ಬಲಿಯಲು ರಂಗಾ |
ಹೊಳೆವ ಕೃಪಾಂಗಾ 2
ಸಂದೇಹಲಿಂದು ಧರೆಯೊಳು ಬಂದು |
ಮರೆವದು ಕಂಡು ಗುರುಮಹಿಪತೆಂದು
ಗುರುತಕ ಹೊಂದು 3