(ಕ) ಷಣ್ಮುಖ
ಶುಭ ಕಾಯಾ |
ಶುಭ ಕಾಯಂಗಜ ನೀನೆ ||
ನಿಬ್ಬರ ಮಹಿಮಾ ದಯಾಂಬುಧಿ ಸ್ಕಂದಾ ಪ
ಮಾರಾ ಭರತನೆ ಶಂಬ | ರಾರಿ ಸನತ್ಕುಮಾರ ಕು |
ಮಾರಾ ಸಾಂಬಾ ||
ಸಾರಿದೆ ನಿನ್ನವತಾರ ಮೂಲರೂಪ ||
ಸಾರಿಸಾರಿಗೆ ಸಂಸಾರಮನ ವಿ ||
ಸ್ತಾರವಾಗದಂತೆ
ಹಾರಿಸುದುರವ್ಯಾಪಾರ ಗುಣ ಪಾರಾವಾರಾ 1
ಮಾಡುವೆ ವಂದನೆ ಸತತ | ಸಜ್ಜನರೊಳ |
ಗಾಡಿಸು ಭಕ್ತ ಪ್ರೀತಾ ||
ಪಾಡಿದವರ ಕಾ | ಪಾಡುವ ರತಿ-ಪತಿ |
ಈಡಾರು ನಿನಗೇ ನಾಡಿನೊಳಗೆಲ್ಲ |
ಬೇಡುವೆ ದಯವನ್ನು | ಮಾಡುವಿರಕುತಿಯ |
ನೀಡು ಬಿಡದಲೆ ನೋಡು2
ಬೊಮ್ಮ |
ಮುಕ್ಕಣ್ಣಗಳ ತನಯ ||
ಸೊಕ್ಕಿದ ತಾರಕ ರಕ್ಕಸ ಹರ ದೇ |
ವಕ್ಕಳ ನಿಜ ದಳಕೆ ನಾಯಕನಾದೆ ||
ಸಿರಿ ವಿಜಯವಿಠ್ಠಲನ |
ಚಕ್ರ ಐದೊಂದು ವಕ್ರಾ 3