ಕುತ್ಸ್ಸಿತರೊಲ್ಲದ ಮತ್ಸರವಿಲ್ಲದ
ಸತ್ಸಭೆ ಕೇಳಲೀ ಕೃತಿಯ ಪ.
ಈ ಯುಗದವರಿಗೆ ಕಲಹ ಮಂಡಿಸಿದಗೆ
ಆ ಯುಗದವರುಕ್ತಿ ಬೇಕು
ನ್ಯಾಯದವರ ಕೇಳು ಪೂರ್ವಶಾಸನ ಸಾಕ್ಷಿ
ಹೇಯವೆಂದಾರು ಪೇಳುವರು1
ನಿಮ್ಮವರಾಗಮ ನಮ್ಮವರಿಗೆ ಸಲ್ಲ
ನಮ್ಮೋಕ್ತಿ ನಿಮಗೆ ಮೆಚ್ಚಲ್ಲ
ಇಮ್ಮನದವರಿಗೆ ಇನ್ನೊಬ್ಬ ಹಿರಿಯರ
ಸಮ್ಮತಿ ಬೇಕು ನಿರ್ಣಯಕೆ2
ಯುಕ್ತಿ ಮಾತ್ರವ ನಂಬಿ ನಡೆವುದುಚಿತವಲ್ಲ
ಯುಕ್ತಿ ಸರ್ವತ್ರ ಬಂದಿಹುದು
ಕುತ್ಸಿತ ದೇಹಬಂಧವ ಬಿಡಿಸುವ ನರ-
ರುತ್ತಮರೆಂದರೇನೆಂಬೆ 3
ಹಿಂಸೆ ಸಲ್ಲದು ಗಡ ಕರದ ಚಿಮುಟಿಯಿಂದ
ಏಸು ಕೂದಲ ಕೀಳುತಿರಲು
ಏಸೋ ಜೀವಗೆ ನೋವು ಅದು ಹಿಂಸೆ
ದೋಷದ ಒಂದಂಶಕ್ಕೆ ಸರಿ ಬಂದಿಹುದೆ 4
ಕೇಶ ಆಚ್ಛಾದನ ಸಂಕಟದಿಂದೆಂದ ಕ್ಲೇಶ
ಸೂಸುವ ನಯನಾಂಬುಧಾರೆ
ಆ ಸಮಯದಿ ಪರಮಸುಖವೆಂಬ ಮಾತು
ಸತ್ಯವ್ರತಕೆ ಎಂತೊಪ್ಪಿಹುದೊ 5
ವೇದಶಾಸ್ತ್ರವ ಬಲ್ಲ ಹಾರವನಲ್ಲ ಹು-
ಟ್ಟಿದ ದಿವಸ ಮೊದಲಾಗಿ
ಪಾತಕಿ ತಮ್ಮೊ -
ಳಾದನೆಂಬುದು ಬಲು ಚೋದ್ಯ6
ಪಾಪ ಸಲ್ಲದು ಗಡ ಪರನಿಂದೆಯಿಂದಾದ
ಪಾಪವೆ ತಾವು ಶುದ್ಧರೆಂಬ
ಪರಿ ಆತ್ಮಸ್ತುತಿಯಿಂದೊಂದಾ ಪಾಪ
ಲೇಪಿಸದಿಹುದೆ ತಮ್ಮವರ 7
ಸ್ಥಾವರಜೀವರ ಸಾವಿರ ಕೋಟಿಯ
ಆವಾಗ ಕೊಂದು ತತ್ತನುವ
ಜೀವಿಪೆನೆಂದು ಬೇಯಿಸಿ ತಿಂಬ ಪಾಪವ
ಆವ ನಿಮಗೆ ಅಹುದೆಂದ 8
ಇಂದ್ರಿಯಹತ್ತಿಲ್ಲದವರ ಕೊಲ್ಲುವುದಕ್ಕೂ ಹಾ-
ಗೆಂದ ಗುರುವ ನಾನೇನೆಂಬೆ
ಅಂದಚೆಂದಗಳ ಮೂಕರ ಪಕ್ಷ್ಷಿಯಂಡದ
ನಿಂದ್ಯ ಹಿಂಸೆಯ ಸಲಿಸುವರೆ 9
ಸಂಗೀತಶ್ರವಣದಿ ಧೂಪಾಘ್ರಾಣದಿ ಮೂಲ
ಹಿಂಗೂಡಿದುದಕ ಸ್ವಾದನಾದಿ
ಅಂಗನೆ ಈಕ್ಷಣ ಸ್ಪರ್ಶನದಿಂ ಸ್ಥಾವ-
ರಂಗಳು ಜಂಗಮದಂತೆ 10
ತಮ್ಮ ಕರ್ಮದಿ ತಾವೆ ಸಾವರೆಂಬ ಮತದಿ
ಕಮ್ಮಿಯಾದ ವ್ರಣಕ್ಕೆ ಮದ್ದನಿಕ್ಕಲು
ನಿರ್ಮಾಯನದೊಳಗೇಸೊ ಹಿಂಸೆ 11
ಅಕ್ಕಿಯ ಕುಟ್ಟಲು ಬಕ್ಕು ಜೀವರ ಹಿಂಸೆ
ಮಕ್ಕಳುಂಬುದು ಮಾಂಸ ಪ್ರಿಯಳ ಚೆಂದುಟಿ ಮಾಂಸ
ಇಕ್ಕು ಬಾಯೊಳು ದಂತದೆಲುವೆ 12
ಕರದ ತುಂಬವಿದೇನು ಕೊರಳ ಹಾರವಿದೇನು
ಚರಣದ ನಖಪಂಕ್ತಿಯಿದೇನು
ಖರ ಭೂತಪಂಚಕ ಅನ್ನ ಮಾಂಸಗಳೊಳು
ಬರಿದೆ ನಿಂದಿಸಲೇಕೆ ಪರರ 13
ಉಪ್ಪಿನೊಳಗೆ ತೋರ್ಪ ಚಿಪ್ಪ ನೋಡದೆ ಪರ-
ರಲ್ಪ ದೋಷಗಳರಸುವರೆ
ಒಪ್ಪುವುದೆಂತೊ ಶತ್ರುಗಳ ನಿಂದನೆ ಕೊಲು-
ತಿಪ್ಪ ನೃಪಗೆ ಜಿನಮಾರ್ಗ 14
ಬಸ್ತಿಯ ಕಟ್ಟಲು ಭೂಸ್ಥ ಜೀವರ ಹಿಂಸೆ
ಸುತ್ತ ಯಾತ್ರೆಯ ಮಾಡಲೇಸೊ
ತತ್ತಜ್ಜೀವರ ಹಿಂಸೆ ತೈಲಸ್ನಾನದಿ ಹಿಂಸೆ
ವಸ್ತ್ರ ಒಗೆಯಲೇಸೋ ಹಿಂಸೆ 15
ಸಲ್ಲದ ಹಿಂಸೆಯ ಸಲಿಸಿದರೆಂಬರ
ಬಲ್ಲವಿಕೆಯ ನಾನೇನೆಂಬೆ
ಬಲ್ಲಿದ ಹಿಂಸೆಗೆ ಒಳಗಾದರು ಎಲ್ಲ ತಾ-
ಕೈವಲ್ಯ ಸಾಧಕರು 16
**** ತೊಳೆಯದ ಬಲುಹಿರಿಯರ
ನಾತಕ್ಕೆ ಸೋತು ಬೆಂಬಿಡದೆ
ಆತುರದಿಂ ಬಪ್ಪನೊಣಗಳ ಗೀತವ-
ನೋತು ಕೇಳುವ ಶಿಷ್ಯ ಧನ್ಯ 17
ಮೂತ್ರ ದ್ವಾರದ ಮಲ ಶ್ರೋತ್ರನೇತ್ರದ ಮಲ
ಗಾತ್ರ ನಾಸಿಕದ ಮಲ
ಯಾತ್ರೆಯ ಮಾಡುವರಕ್ಷಿಗೆ ಕೌತುಕ
ಪಾತ್ರವಾಯಿತು ಬಲು ಚಿತ್ರ 18
******************* 19
ಏಕ ಭಾಗದೊಳು ಸ್ತ್ರೀ ವಾಸ
ಏಕಾಂತದಿಪ್ಪುದು ಲೋಕಸಲ್ಲದೆಂಬರ
ಈ ಕಾಮನೆಂತು ಬಿಟ್ಟಿಹನು 20
ಬಸ್ತಿಯ ಪ್ರತಿಮೆಯಲಿಪ್ಪ ದೇವನದಾರು
ಮುಕ್ತರಿಗೀಭೋಗ ಸಲ್ಲ
ಮುಕ್ತರÀಲ್ಲದ ಜೀವ ದೇವರೆಂತಹರೆಂದು
ವ್ಯರ್ಥವಾಯಿತು ನಿನ್ನುತ್ಸಾಹ 21
ನೋಡುವ ನಯನಕ್ಕೆ ಮಾಡುವ ಪೂಜೆಗೆ
ಕೂಡಿದ ಬಹುವಿತ್ತ ವ್ಯಯಕ್ಕೆ
ಈಡಾಯಿತಂಶ ಕೇವಲ ಬೊಂಬೆ ಶಿವಶಿವ
ಆಡುವ ಶಿಶುಗಳ್ಪೇಳಿದರೆ 22
ಹೆಂಡಿರೆ ಸಂಸಾರವಾದರೆ ಹಸಿತೃಷೆ
ಉಂಡು ಮಲಗುವುದು ಮುಕ್ತರಿಗೆ
ಮಂಡೆಯ ಬೋಳಿಸಿ ದೇಹದಂಡನೆ ಮಾಡಿ ಕೈ-
ಕೊಂಡ ಮಾತ್ರದಿ ಮುಕ್ತರಹರೆ 23
ಮತ್ರ್ಯ ದೇಹವಿರಲು ಮುಕ್ತರೊಬ್ಬರು ಅಲ್ಲ
ಸತ್ತಮೇಲೇನಾದರೆಂತೊ
ಅತ್ತು ಕಾಡುವ ಶಿಷ್ಯರೆಂತರು ಕಾಂಬರು ಸರ್ವ-
ಕರ್ತೃ ಶ್ರೀಹರಿ ತಾನೆ ಬಲ್ಲ 24
ದುಃಖವೆ ಸಂಸಾರ ದುಃಖವಿಲ್ಲದ ಸುಖ
ಮುಕ್ತಿಯೆಂಬುದು ಬುಧರ್ಗೆ ಮಾತ್ರ
ಮಿಕ್ಕದೆ ದುಃಖವಿತ್ತರೆ ಭವವೆನಿಪುದು
ದುಃಖವೆ ದೂರ ಮುಕ್ತರಿಗೆ 25
ಪುನರ್ಭವವೆÉನ್ನೆ ಶ್ರುತಿ ಅಮೃತವುಂಡರೆ ಮೋಕ್ಷ
ಜನನ ಮರಣವಿಲ್ಲದಖಿಳ
ಜನರ ದುಃಖವನವತರಿಸಿ ಕಳೆವ ನಾರಾ-
ಯಣನೆ ನಿರ್ದೋಷ ನಿತ್ಯಸುಖಿ 26
ಪಾತಕ ವ್ರತವ ಕೈಗೊಂಡ ಸ್ತ್ರೀ-
ಜಾತಿಯ ಮುಟ್ಟಲ್ಲೆಂಬುವನು
ಖ್ಯಾತ ಶ್ರೀಹರಿಗೆ ಪಾತಕಮುಟ್ಟದೆಂಬರ
ಮಾತನದೇಕೆ ಮನ್ನಿಸನು 27
ಕೆಸರ ತೊಳೆದ ನೀರು ಕೆಸರ ಬಾಧಿಪುದೆ ತಾ-
ವೈರಿ ಸೂರ್ಯನೊಳು ತಮವೆ
ವಿಷಹರ ಗರುಡಗೆ ವಿಷ ಲೇಪಿಸುವುದೆ ಕ-
ಲುಷ ಮುಟ್ಟುವುದೆ ಪಾಪಾಂತಕನ 28
ಸುಡುವಗ್ನಿ ಕಡಿವಸ್ತ್ರ ಕಡುಕೋಪಿ ಸರ್ಪನ
ತಡೆಯಬಲ್ಲರೆ ತುಡುಕುವರೆ
ಬಿಡು ಮನಭ್ರಾಂತಿಯ ಹಯವದನನೆ ಜಗ-
ದೊಡೆಯ ಸರ್ವತ್ರ ನಿರ್ದೊಷ 29