ಜಯದೇವ ಜಯದೇವ ಜಯದೀನದಯಾಳಾ
ಜಯಜಯ ಶ್ರೀಗುರು ಮಹಿಪತಿ ಭವತಾರಕ ಲೀಲಾ ಪ
ಮರವಿನ ಕತ್ತಲಿಯೊಳಗೆ ಮುಂದುಗಾಣದಲಿರಲಿ
ಅರವಿನದೀಪವ ಹೆಚ್ಚಿ ದೋರುತಲೀ
ಸ್ಥಿರವನು ಗೊಳ್ಳದ ಚಿತ್ತವ ಭಜನಿಗೆಲಿಸುತಲಿ
ಹರಿಸಿದ ವಿದ್ಯದಗೃಂಥಿಯ ಸಂಶಯ ಬಿಡಿಸುತಲಿ 1
ಪರಿಪರಿಯಿಂದಲಿಗರದು ಬೋಧನಾಮೃತನುಡಿಯಾ
ಅರಹಿಸಿಯೋಗದ ಮಾರ್ಗವ ಸಾಂಖ್ಯದನಿಲ್ಲ ಕಡಿಯಾ
ಕರಣೀಂದ್ರಿಯಗಳ ವಡದಾಸ್ವಾನಂದದಯಡಿಯಾ
ಕರುಣಿಸಿ ವಿಶ್ವಂಭರಿತದ ತೋರಿದೆ ಇತ್ಥಡಿಯಾ 2
ನಿನಗುತ್ತೀರ್ಣವಕಾಣದೇ ತನುವಾರತಿ ಮಾಡೀ
ಮನವೇದೀಪವು ಸದ್ಭಾವನೆ ಆಜ್ಯನೀಡಿ
ಅನುದಿನ ಬೆಳಗುವ ನಂದನುಮಹಿಮೆಯ ಕೊಂಡಾಡಿ
ಚಿನುಮಯಸುಖದೊಳು ಬೆರೆದಾಹಂಭ್ರಮ ಈಡಾಡಿ3