ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೃಂದಾವನಿ ಜನನಿ ವಂದಿಸುವೆ ಸತತ ಜ ಲಂಧರನ ರಾಣಿ ಕಲ್ಯಾಣಿ | ಕಲ್ಯಾಣಿ ಶ್ರೀ ತುಲಸಿ ನಿಜ ಮಂದಿರೆ ಎನಗೆ ದಯವಾಗೆ 1 ಜಲಜಾಕ್ಷನಮಲ ಕಜ್ಜಲ ಬಿಂದು ಪೀಯೂಷ ಕಲಶದಲಿ ಬೀಳೆ ಜನಿಸಿದಿ | ಜನಿಸಿದಿ ಹರಿಯಿಂದ ಶ್ರೀ ತುಲಸಿ ನೀನೆಂದು ಕರೆಸೀದಿ2 ಶ್ರೀ ತರುಣಿವಲ್ಲಭನ ಪ್ರೀತಿ ವಿಷಯಳೆ ನಿನ್ನ ಕೈ ಮುಗಿವೆ ಎನ್ನಯ ಮಹ ಪಾತಕವ ಕಳೆದು ಪೊರೆಯಮ್ಮ 3 ತುಲಸಿ ನಿನ್ನಡಿಗೆ ನಾ ತಲೆವಾಗಿ ಬಿನ್ನೈಪೆ ಕಲುಷ ಕರ್ಮಗಳ ಎಣಿಸದೆ | ಎಣಿಸದೆ ಸಂಸಾರ ಜಲಧಿಯಿಂದೆಮ್ಮ ಕಡೆ ಹಾಯ್ಸು 4 ದುರಿತ ಈಡಾಡಿದವ ನಿನ್ನ ಕೊಂ ನಿತ್ಯ ಹರಿಪಾದ | ಹರಿಪಾದ ಕಮಲಗಳ ಕೂಡಿಸುವೆ ಸತ್ಯವೆಂದೆಂದು 5 ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿ ವಂದಿಸಿದ ಜನರು ಸುರರಿಂದ | ಸುರರಿಂದ ನರರಿಂದ ವಂದ್ಯರಾಗುವರು ಎಂದೆಂದು 6 ಕಲುಷವರ್ಜಿತ ನಿನ್ನ ದಳಗಳಿಂದಲಿ ಲಕ್ಷ್ಮೀ ಪೂಜಿಪರಿಗೆ ಪರಮಮಂ ಗಳದ ಪದವಿತ್ತು ಸಲಹೂವಿ 7 ಶ್ರೀ ತುಲಸಿದೇವಿ ಮನ್ಮಾತೆ ಲಾಲಿಸು ಜಗ ಎನ್ನ ಹೃತ್ಪದ್ಮದಲಿ ನೀ ತೋರೆ ಕೃಪೆಯಿಂದ 8
--------------
ಜಗನ್ನಾಥದಾಸರು