ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೃಂದಾವನಿ ಜನನಿ ವಂದಿಸುವೆ ಸತತ ಜ ಲಂಧರನ ರಾಣಿ ಕಲ್ಯಾಣಿ | ಕಲ್ಯಾಣಿ ಶ್ರೀ ತುಲಸಿ ನಿಜ ಮಂದಿರೆ ಎನಗೆ ದಯವಾಗೆ 1 ಜಲಜಾಕ್ಷನಮಲ ಕಜ್ಜಲ ಬಿಂದು ಪೀಯೂಷ ಕಲಶದಲಿ ಬೀಳೆ ಜನಿಸಿದಿ | ಜನಿಸಿದಿ ಹರಿಯಿಂದ ಶ್ರೀ ತುಲಸಿ ನೀನೆಂದು ಕರೆಸೀದಿ2 ಶ್ರೀ ತರುಣಿವಲ್ಲಭನ ಪ್ರೀತಿ ವಿಷಯಳೆ ನಿನ್ನ ಕೈ ಮುಗಿವೆ ಎನ್ನಯ ಮಹ ಪಾತಕವ ಕಳೆದು ಪೊರೆಯಮ್ಮ 3 ತುಲಸಿ ನಿನ್ನಡಿಗೆ ನಾ ತಲೆವಾಗಿ ಬಿನ್ನೈಪೆ ಕಲುಷ ಕರ್ಮಗಳ ಎಣಿಸದೆ | ಎಣಿಸದೆ ಸಂಸಾರ ಜಲಧಿಯಿಂದೆಮ್ಮ ಕಡೆ ಹಾಯ್ಸು 4 ದುರಿತ ಈಡಾಡಿದವ ನಿನ್ನ ಕೊಂ ನಿತ್ಯ ಹರಿಪಾದ | ಹರಿಪಾದ ಕಮಲಗಳ ಕೂಡಿಸುವೆ ಸತ್ಯವೆಂದೆಂದು 5 ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿ ವಂದಿಸಿದ ಜನರು ಸುರರಿಂದ | ಸುರರಿಂದ ನರರಿಂದ ವಂದ್ಯರಾಗುವರು ಎಂದೆಂದು 6 ಕಲುಷವರ್ಜಿತ ನಿನ್ನ ದಳಗಳಿಂದಲಿ ಲಕ್ಷ್ಮೀ ಪೂಜಿಪರಿಗೆ ಪರಮಮಂ ಗಳದ ಪದವಿತ್ತು ಸಲಹೂವಿ 7 ಶ್ರೀ ತುಲಸಿದೇವಿ ಮನ್ಮಾತೆ ಲಾಲಿಸು ಜಗ ಎನ್ನ ಹೃತ್ಪದ್ಮದಲಿ ನೀ ತೋರೆ ಕೃಪೆಯಿಂದ 8
--------------
ಜಗನ್ನಾಥದಾಸರು
ಈಡಾಡಿದ್ಯಾ ಪಾಪಂಗಳ ಆಹಾ ಪ ಮನಸಿಲಿ ನೋಡಿದ್ಯಾ ಯತಿಗಳನ್ನ ನಾಡಿನೊಳಗೆ ಈಡಿಲ್ಲದಿಹ ಈ ಗುರುಗಳಾ ಅ.ಪ. ಹೊದ್ದ ಕಾವಿಶಾಠಿಯಲ್ಲಿ ಶ್ರೀ ಮುದ್ರೆ ಹಚ್ಚಿದ ದೇಹಕಾಂತಿಯು ಆಹಾ ತಿದ್ದಿದ ಅಂಗಾರದ ನಡುವೆ ಅಕ್ಷತೆಯು ಎದ್ದು ಬರುವಂಥ ಈ ಮುದ್ದು ಗುರುಗಳಾ 1 ನಿಂತ ಎದುರಲ್ಲಿ ಮುಖ್ಯಪ್ರಾಣಾ ಬೇಡಿ- ದಂಥ ವರಗಳ ಕೊಡುವ ಜಾಣಾ ಆಹಾ ಜಗದಂತರದೊಳಗೆ ಪ್ರವೀಣಾ ಸೀತಾ- ಕಾಂತರೊಳಗೆ ಅತಿಪ್ರಾಣಾ2 ಮಂತ್ರಾಲಯದಲ್ಲಿರುವ ಮುದ್ದು ಬೃಂದಾವನದ ನೋಟ ನಮ್ಮಲಿದ್ದ ಪಾಪಗಳೆಲ್ಲ ಓಟಾ ಅಲ್ಲಿ ವಿದ್ವಾಂಸರ ಜಗ್ಯಾಟ ಆಹಾ ಮುದ್ದುವಾಹನನೆ ನೀನು ನರಸಿಂಹವಿಠ್ಠಲ ದೂತ ದಾರಿದ್ರ್ಯಗಳೆಲ್ಲವ ಪರಿಹರಿಸುವಂಥಾ 3
--------------
ನರಸಿಂಹವಿಠಲರು
ಭೀಮನೆಂಬುವಂಗೆ ಯಾತರ ಭಯವಿಲ್ಲ ಭೀಮರಾಯ ಪ ಕಾಮಿತ ಫಲಗಳ ಕೊಟ್ಟು ನೀ ಸಲಹಯ್ಯ ಭೀಮರಾಯಅ ಅಗಣಿತ ಬಲವಂತ ಭೀಮರಾಯಕಂಜನಾಭನ ದೂತ ಕರುಣಿಸೊ ಬಲವಂತ ಭೀಮರಾಯ 1 ಕಟ್ಟಿದ ಪೂಮಾಲೆ ಕಸ್ತೂರಿ ನಾಮದ ಭೀಮರಾಯ - ಪೊಂಬಟ್ಟೆ ಪೀತಾಂಬರವನುಟ್ಟು ಮೆರೆವಂಥ ಭೀಮರಾಯ2 ವಾರಿಧಿಯನು ದಾಟಿ ಸೀತೆಗುಂಗುರವಿತ್ತ ಭೀಮರಾಯಸೂರಿವೆಗ್ಗಳತನ ಕಿತ್ತು ಈಡಾಡಿದ ಭೀಮರಾಯ3 ರಾಮರಾಯರಿಗೆ ನೀ ಪ್ರೇಮದ ಬಂಟನು ಭೀಮರಾಯಕಾಮಿತ ಫಲವಿತ್ತು ಕರುಣದಿ ಸಲಹಯ್ಯ ಭೀಮರಾಯ 4 ಛಪ್ಪನ್ನ ದೇಶಕ್ಕೆ ಒಪ್ಪುವ ಕಾಗಿನೆಲೆಯ ಭೀಮರಾಯತಪ್ಪದೆ ಕನಕಗೆ ವರಗಳ ಕೊಡುವಂಥ ಭೀಮರಾಯ 5
--------------
ಕನಕದಾಸ