ಬೃಂದಾವನಿ ಜನನಿ ವಂದಿಸುವೆ ಸತತ ಜ
ಲಂಧರನ ರಾಣಿ ಕಲ್ಯಾಣಿ | ಕಲ್ಯಾಣಿ ಶ್ರೀ ತುಲಸಿ ನಿಜ
ಮಂದಿರೆ ಎನಗೆ ದಯವಾಗೆ 1
ಜಲಜಾಕ್ಷನಮಲ ಕಜ್ಜಲ ಬಿಂದು ಪೀಯೂಷ
ಕಲಶದಲಿ ಬೀಳೆ ಜನಿಸಿದಿ | ಜನಿಸಿದಿ ಹರಿಯಿಂದ ಶ್ರೀ
ತುಲಸಿ ನೀನೆಂದು ಕರೆಸೀದಿ2
ಶ್ರೀ ತರುಣಿವಲ್ಲಭನ ಪ್ರೀತಿ ವಿಷಯಳೆ ನಿನ್ನ
ಕೈ ಮುಗಿವೆ ಎನ್ನಯ ಮಹ
ಪಾತಕವ ಕಳೆದು ಪೊರೆಯಮ್ಮ 3
ತುಲಸಿ ನಿನ್ನಡಿಗೆ ನಾ ತಲೆವಾಗಿ ಬಿನ್ನೈಪೆ
ಕಲುಷ ಕರ್ಮಗಳ ಎಣಿಸದೆ | ಎಣಿಸದೆ ಸಂಸಾರ
ಜಲಧಿಯಿಂದೆಮ್ಮ ಕಡೆ ಹಾಯ್ಸು 4
ದುರಿತ ಈಡಾಡಿದವ ನಿನ್ನ ಕೊಂ
ನಿತ್ಯ ಹರಿಪಾದ | ಹರಿಪಾದ ಕಮಲಗಳ
ಕೂಡಿಸುವೆ ಸತ್ಯವೆಂದೆಂದು 5
ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿ
ವಂದಿಸಿದ ಜನರು ಸುರರಿಂದ | ಸುರರಿಂದ ನರರಿಂದ
ವಂದ್ಯರಾಗುವರು ಎಂದೆಂದು 6
ಕಲುಷವರ್ಜಿತ ನಿನ್ನ ದಳಗಳಿಂದಲಿ ಲಕ್ಷ್ಮೀ
ಪೂಜಿಪರಿಗೆ ಪರಮಮಂ
ಗಳದ ಪದವಿತ್ತು ಸಲಹೂವಿ 7
ಶ್ರೀ ತುಲಸಿದೇವಿ ಮನ್ಮಾತೆ ಲಾಲಿಸು ಜಗ
ಎನ್ನ ಹೃತ್ಪದ್ಮದಲಿ
ನೀ ತೋರೆ ಕೃಪೆಯಿಂದ 8