ಮಾಯಾ ಜೀವಾ ಪ
ಕಳವಳಿಸುತ ನಿನ ಕುಲಹಂಕಾರವ
ನಳಿದಿರೆ ಯಾಗುವುದಲ್ಲದೆಯಹುದೇ ಅ.ಪ
ಮಾನಾ ಅವಮಾನ ಶವಸಮಾನಾ
ಈ ನರಕುರಿಗಳು ನಿನಗೇನು ಹೊರಿಕಾರ ಪರಬೊಮ್ಮ
ಜ್ಞಾನದೊಳಗೆ ತಾನಿಲ್ಲದೆ ಘನವಾ 1
ನೋಡಿ ಹೋದೆಲ್ಲೋ ಮರೆತಂತಾಡಿ ಓ ಮಾಯ ಜೀವಾ
ಮೂಢ ಬುದ್ಧಿಗಳೇ ನೀ ಸಮನಾಡೀ
ಆಡಬಾರದಂತಾಟಗಳಾಡುವೆ
ಈಡಾಗಿಹುದಿದು ಮುಂದಿನ ಜನ್ಮಕೆ2
ಮಾಯಾ ಜೀವ
ನೂಕೋ ಎಂಟಾರರೊಳಗೆ ನೀ ಜೋಕೆ
ಠಾಕೂರನು ಶ್ರೀ ತುಲಸಿರಾಮನು
ಏಕಾನಂದನಕಂದನೊಳಿಹಪರ 3