ಹೇ ಮುರಾರೆ ಹೇ ಮುಕುಂದ ಪ
ಪ್ರೇಮ ವೀಕ್ಷಣದಿಂದ ಪೊರೆಯೊಅ.ಪ
ಈ ಮಹಾ ಕುತಾಪಗಳಲಿ
ನಾಮ ಕೀರ್ತನೆಯೊಂದೆ ಎನಗೆ
ಕ್ಷೇಮಕರವೆಂದರಿತು ವದನದಿ
ರಾಮ ರಾಮನೆಂದು ಕೂಗುವೆ 1
ನೋಡಿದೆನೋ ಈ ಭವದ ಭೋಗವ
ಬೇಡದಾಯಿತೊ ನಿನ್ನ ದಯದಿ
ಈಡನರಿಯೆನೊ ನಿನ್ನ ಗುಣಗಳ
ಪಾಡಿ ಹಿಗ್ಗುತ ಕುಣಿಯುವುದಕೆ 2
ಆಸೆ ಎನ್ನನು ಮೋಸ ಮಾಡಿತೊ
ಕ್ಲೇಶ ಬಿಡದೊ
ಈಶ ನಿನ್ನಯ ಭಜನೆಯೊಂದೆ
ಲೇಸೊ ಲೇಸೊ ಹೇ ಪ್ರಸನ್ನ 3