ಕಾದಿರುವೆನೋ ಕೃಷ್ಣ ಕಾದಿರುವೆನೋ ಪ
ಮೋದಕ ನಿನ್ನ ನೆನಪಿನ ದೇಗುಲದಲ್ಲಿ
ಆದಿನ ಕಾದಿದ್ದ ರಾಧೆ ಶಬರಿಯೊಲು ಅ.ಪ
ಹಗಲಿರುಳೂ ನಿನ್ನ ಸ್ಮರಣೆಯ ಮಾಡುತ
ಬಗೆಬಗೆಯಲು ನಿನ್ನ ಬಾಹ್ಯದಲೂ ನಿನ್ನ
ನಗಧರ ಕಾಣಲು ಕಾದಿಹೆನೋ ಚ-
ನ್ನಿಗ ನಿನ್ನ ನೆನೆನೆನೆದು ಹಾಡುವೆನೋ 1
ನನ್ನೀ ಸ್ಮರಣೆಯ ನುಡಿ ನುಡಿಯಲ್ಲೂ
ಚಿನ್ಮಯ ನೀ ಕುಣಿದಾಡುತಿಹೆ
ನನ್ನಯ ಪೂಜೆಯ ಆಡಿ ಅಡಿಯಲ್ಲೂ
ಎನ್ನಯ್ಯ ಸಾಮೀಪ್ಯವಾಗಿರುವೆ 2
ಜಾಜಿಪುರಿಯ ಚೆನ್ನಕೇಶವ ನಿನ್ನ
ಮೋಜಿನ ಚಿತ್ರವ ಚಿತ್ತದಿ ನಿಲಿಸಿಹೆ
ಈಜಿಸಬೇಡಯ್ಯ ಸಾಕು ಸಂಸಾರ
ಪಾದ ತೋರೊ ಪವಡಿಸುವೆ3