ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತನಾಗೋ ಹರಿಗೆ ಓ ಮನುಜ ಪ ನಾಲಗೆಯಲಿ ಶ್ರೀಲೋಲನ ನಿಜಗುಣ ಜಾಲವ ಕೊಂಡಾಡೋ ಓ ಮನುಜ 1 ಮಾನಸದಲಿ ಸದಾ ಜಾನಕಿ ರಮಣನ ಧ್ಯಾನವ ಮಾಡುತಿರೋ ಓ ಮನುಜ2 ಕರಯುಗಳಗಳಿಂ ವರಗೋಪಾಲನ ಚರಣ ಪೂಜೆಮಾಡೋ ಓ ಮನುಜ 3 ರವಿಕುಲ ತಿಲಕನ ಸುವಿಮಲ ಚರಿತೆಯ ಕಿವಿಯಲಿ ಕೇಳುತಿರೋ ಓ ಮನುಜ4 ಶ್ರೀಹರಿಯ ಜಗನ್ಮೋಹನ ಮೂರ್ತಿಯ ಊಹಿಸಿ ನೋಡುತಿರೋ ಓ ಮನುಜ 5 ಶಾಸ್ತ್ರ ಸಿದ್ಧವಹ ಕ್ಷೇತ್ರತೀರ್ಥಗಳ ಯಾತ್ರೆಯ ನೀಮಾಡೋ ಓ ಮನುಜ 6 ಶ್ರೀಶಗರ್ಚಿಸಿದ ಸುವಾಸಿತ ತುಲಸಿಯ ನಾಸಿಕದಲಿ ಮೂಸೊ ಓ ಮನುಜ7 ಸಾಧುಜನಗಳಿಗೆ ಮೋದವೀವ ಶ್ರೀ ಪಾದಗಳಿಗೆ ನಮಿಸೋ ಓ ಮನುಜ 8 ಭೋಗಿಶಯನಗನುರಾಗದಿಂದ ಶಿರ ಬಾಗಿ ಸತತ ನಡೆಯೋ ಓ ಮನುಜ 9 ಈಜಗದಲಿ ತಾ ಜಾಜಿ ಶ್ರೀಶನು ರಾಜಿಪುದನು ಕಾಣೋ ಓ ಮನುಜ 10
--------------
ಶಾಮಶರ್ಮರು