ಈಚೆಗೆ ದೊರೆತ ಹಾಡುಗಳು
ಸರಸಿಜನಾಭನ ನಿರುಕಿಸಲೀಕ್ಷಣ ಪ.
ಮನದಣಿಯಾ ನೋಡಿರೈ
ಮನಮೊರೆಯಾ ಬೇಡಿರೈ ಅ.ಪ.
ತರಳ ಪ್ರಲ್ಹಾದನ ಮೊರೆಯನು ಕೇಳಿ
ನರಮೃಗ ರೂಪವ ತಾಳಿ
ದುರುಳ ಹಿರಣ್ಯಕಶ್ಯಪನನು ಸೀಳಿದ
ಪರಿಯ ನೋಡಿರೈ 1
ಭವಪಿತ ಭವನುತ ಭವತಾಡರಹಿತ
ಭವನಾಮಾಂಕಿತ ಭವಭವ ವಂದಿತ
ನವ ಮನ್ಮಥ ಶತಧೃತನ ಮೃತನೊಳ
ಮಿತ ಸಿರಿಯಾ ಬೇಡಿರೈ 2
ಸುರನರ ಕಿನ್ನರನುತ ವಿಶ್ವಂಭರ
ಮುರಹರ ವಂದಿತ ವಳಲಂಕಾಪುರ
ವರ ಲಕ್ಷ್ಮೀನಾರಾಯಣ ನರ ಕೇ-ಸರಿಯಾ ನೋಡಿರೈ 3