ಭಾವದ ಪೊಂಬ್ಹರಿವಾಣ ಭಕುತಿಯಾ |
ತೀವಿದಾರತಿ ಜ್ಞಾನಜ್ಯೋತಿಯಾರುತಿಯಾ ಪ
ಆರುತಿ ಬೆಳಗುವೆನಾ | ನಮ್ಮಯ್ಯಗೆ ಆರುತಿ
ಬೆಳಗುವೆನಾ | ಶ್ರೀ ಗುರುವಿಗೆ ಆರುತಿ ಬೆಳಗುವೆನಾ 1
ಮುಖದಲಿ ನುಡಿಯುತ ನಾಮಾವಳಿಯಾ |
ಸಕಲರು ಪ್ರೇಮದಿ ಹಾಕಿ ಚಪ್ಪಾಳೆಯಾ 2
ನಯನದಿ ನೋಡಿ | ಶರಣವ ಮಾಡಿ |
ಭಯವ ನೀಡಾಡಿ | ಶೃುತಿಗಳಪಾಡಿ3
ಇಂದಿನದಿನದಾನಂದವು ನಮಗೆ |
ಹಿಂದಿನ ಪುಣ್ಯ ಇದಿರಿಟ್ಟಿತು ಈಗ4
ಒಡಲ್ಹೊಕ್ಕು ಮಹೀಪತಿ ನಂದ ನೊಡೆಯನಾ |
ಪಡೆವ ಬನ್ನಿರೋ ಬೇಗ ಮುಕುತಿಯ ಸದನಾ5