ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ಪುಣ್ಯ ಮಾಡೀ ಕಂಬ ವಿಠ್ಠಲನ್ನ ಗುಡಿ ಸೇರಿತೋ ಪ. ಪುರಂದರ ದಾಸರನ್ನು ಕಟ್ಟಿಸಿಕೊಂಡು ತಾ ಪೂಜೆಗೊಂಡಿತೊ ಅ. ಎಲ್ಲಾ ಕಂಬಗಳಿದ್ದರೂ ಇಂತು ಇಲ್ಲೀ ಇದಕೆ ಈ ಖ್ಯಾತಿಯು ಬಂತು ಸುಜನ ವಂದಿಪರಿ ಪುಲ್ಲನಾಭನ್ನ ಕೃಪೆಯ ಪಡೆದಿತು 1 ಮಾಯಾಕಾರನು ನೀರನು ತಂದು ಈಯಲು ಪುರಂದರದಾಸರಿಗಂದು ನೋಯಿಸೆ ತಿಳಿಯದೆ ಮನಕದ ತಂದು ನ್ಯಾಯದಿ ಕಟ್ಟಿಸಿ ಹೊಡೆಸಿದನಂದು 2 ದಾಸರಂತೆ ತಾನು ವೇಷವ ಧರಿಸಿ ವೇಶ್ಯೆಗೆ ತನ್ನ ಕಂಕಣವನ್ನೆ ಕೊಡಿಸಿ ತಾಸೊತ್ತಿನಾ ರಾತ್ರೆ ಹೊಡೆದದ್ದ ನೆನಸಿ ವಾಸುದೇವ ಬೈಲಿಗೆಳೆಸಿದ ಬಿಗಿಸಿ 3 ಜ್ಞಾನ ಪುಟ್ಟಲು ಹರಿಮಾಯವಿದೆಂದು ಶ್ರೀನಿವಾಸ ತಾ ವಲಿದನು ಅಂದು ಆನಂದದಿಂದೊಂದು ಕವನ ಗೈದು ಶ್ರೀನಿಧೆ ಮುಟ್ಟಿತು ಮುಯ್ಯವಿದೆಂದು4 ದಾಸರ ಅಂಗವು ಸೋಕಿದ್ದರಿಂದ ಶ್ರೀಶನು ಹಗ್ಗದಿ ಬಿಗಿಸಿದ್ದರಿಂದ ದಾಸರ ಪೆಸರಲಿ ಮೆರೆವುದರಿಂದ ಭವ ಬಂಧ5 ಹಿಂದೆ ಕಂಬದಿ ನರಹರಿ ಅವತರಿಸೆ ಅಂದಿನ ಕಂಬವೆ ಈಗಿಲ್ಲ್ಲಿ ಉದಿಸೆ ಸಿಂಧುಶಯನನ್ನ ದಾಸತ್ವ ವಹಿಸೆ ಬಂದಿತು ವಿಠಲನ್ನ ಗುಡಿಯನಾಶ್ರೈಸೆ6 ಕರ್ಮ ಕಳೆವುದು ದಾಸರ ವಾಕ್ಶ್ರವಣ ಜ್ಞಾನವೀಯುವುದು ದಾಸರ ಉಪದೇಶ ಹರಿಯ ತೋರುವುದು ದಾಸರ ಸ್ಪರ್ಶವು ಮುಕ್ತಿಗೊಯ್ಯವುದು7 ಕಂಭವೆ ಸಾಕ್ಷಿಯು ಈ ಕಲಿಯುಗದಿ ಡಾಂಭಿಕ ಜನರಿಗೆ ತಿಳಿಯದು ಹಾದಿ ಬೆಂಬಿಡದೆ ಹರಿ ಕಾಯುವ ಭರದಿ ಇಂಬುಗೊಟ್ಟು ತನ್ನ ನಿಜ ದಿವ್ಯ ಪುರದಿ 8 ದಾಸರ ಮಾರ್ಗವೆ ಸುಲಭವೆಂತೆಂದು ದಾಸರ ಕೃಪೆ ದ್ವಾರ ವಲಿಯುವೆನೆಂದು ದಾಸರ ದೂಷಿಸೆ ಗತಿ ಇಲ್ಲೆಂದು ಶ್ರೀಶ ತಾನಿಲ್ಲೀ ನಿಂತನು ಬಂದು 9 ಶ್ರೀ ರಮಾಪತಿ ಓಡಿ ಬಂದ ನಿಲ್ಲೆಂದೂ ದ್ವಾರಕ ಪುರದೊಂದು ಕಂಭವೆ ಬಂದು ಸೇರಿತೊ ವಿಠಲನ ಮಂದಿರವಂದು ಸೂರೆಗೈದರೊ ಖ್ಯಾತಿ ದಾಸರು ಬಂದು 10 ನಿಜದಾಸರಂಗಸಂಗದ ಫಲದಿ ರಜತದ ಕಟ್ಟಿನಿಂ ಮೆರೆದಿತು ಜಗದಿ ಸುಜನರ ಸಂಗದಿ ಮುಕುತಿಯ ಹಾದಿ ಭುಜಗಶಯನ ತೋರುವ ನಿರ್ಮಲದಿ 11 ತತ್ವವನಿದರಿಂದ ತಿಳಿವುದು ಒಂದು ಉತ್ತಮತ್ವ್ವವು ಜಡಕಾಯಿತು ಬಂದು ಪಾದ ಸೋಂಕಲು ಅಂದು ವ್ಯರ್ಥವಾಗದು ಹರಿಭಕ್ತರೆ ಬಂಧು12 ಪಾಪ ನಿರ್ಲೇಪವಾಗೋದು ವಿಠ್ಠಲನ್ನ ಆಪಾದ ಮೌಳಿಯ ರೂಪ ದರುಶನ್ನ ಪರಿ ಖ್ಯಾತಿ ಪೊಂದಿತು ಕಂಬ ಘನ್ನ ಗೋಪಾಲಕೃಷ್ಣವಿಠ್ಠಲ ಸುಪ್ರಸನ್ನ 13
--------------
ಅಂಬಾಬಾಯಿ