ಒಟ್ಟು 5 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಗಿದ್ದ ಇರವೇ ಮನುಜರಿಗೆ ಈಗಿದ್ದ ಇರವೇ ? ಪ ಮಾಯಾಪ್ರಪÀಂಚದ ಬಲೆಯ ಪಾಶಕ್ಕೆ ಸಿಕ್ಕಿ ಕಾಯದೊಳಿಹ ಪರಮಾತ್ಮನನರಿಯದೆ ಅ.ಪ. ನರರ ಯೋನಿಗೆ ಬಂದು ನಡತೆ ಸಜ್ಜನರೆಂದು ಬರಿಯ ಬನ್ನಣೆಯೊಳು ಬೆರೆತಿಹರಲ್ಲದೆ ಶರೀರ ಸುಖವನ್ನೆಲ್ಲ ಮರೆತು ತನ್ನಾತ್ಮನೊಳಿರುವ ಸುಖವು ತಾನು ಬಯಸಬೇಕಲ್ಲದೆ ಈಗಿದ್ದ 1 ಮಂದಮತಿಗಳಾಗಿ ಮಮತೆಮಾರ್ಗಕೆ ತಾಗಿ ಅಂದಣದೈಶ್ವರ್ಯ ಬಯಸುವವರಲ್ಲದೆ ಹೊಂದಿಸಿ ಸಚ್ಚಿದಾನಂದ ಬ್ರಹ್ಮದಿಮನ ಬಂದಾಗಿ ನಲಿಸಿ ವಿರಕ್ತಿಯ ಬಂದಿಯೊಳ್ಬಲಿಸಿ ನಿಂದು ನಿಜದ ನಿರುಪಮನೆ ನಿತ್ಯಾತ್ಮನೆ ಎಂದು ಕುಂದದೆ ಸಹಜಾನಂದನಾಗದ ಮೇಲೆ ಈಗಿದ್ದ 2 ಪರಮಪುರುಷರಾದ ಪ್ರಹುಢ ಸಂತರ ಪಾದ ಸ್ಮರಣೆಯ ನಿರುತ ಮಾಡಿರಬೇಕಲ್ಲದೆ ಪರತತ್ವಮಯನಾದ ಗುರುಮಹಾರಾಯನ ಕರುಣವ ಪಡೆದು ಕಣ್ಣಿನೊಳು ಶ್ರೀ ಚರಣವ ಪಿಡಿದು ಬರಿಯಮಾತಲ್ಲವೆಂದರಿತು ಪೂರ್ಣ ಬ್ರಹ್ಮ ಗುರುವಿಮಲಾನಂದ ಭರಿತನಾಗದ ಮೇಲೆ ಈಗಿದ್ದ 3
--------------
ಭಟಕಳ ಅಪ್ಪಯ್ಯ