ಹರಿಯಾ ಪಾದಕ ಶರಣೆನ್ನಿ |
ಸ್ಮರಣೆಗೆ ಹರಿಯನು ಕರೆತನ್ನಿ ಪ
ಅವನ ನಾಮವನೆನಿಯಲು ಭಕುತಿಲಿ |
ಭವಭಯ ಮೂಲದಿ ನೀಗುವದು |
ಆವಾಗ ಕಂಗಳ ಸಿರಿಸುಖ ದೋರುತ |
ಜೀವನ ಗತಿನೆಲೆ ಹೊಂದುವದು 1
ಸಿಕ್ಕಿತ್ತು ನರದೇಹ ದೊರಿಯಲು ಪುಣ್ಯದಿ |
ಸರ್ಕನೆ ಸಂತರ ಮೊರೆಹೊಕ್ಕು |
ದಕ್ಕಿಸಿಕೊಳ್ಳದೇ ಬೋಧಾಮೃತವನು |
ಪುಕ್ಕಟೆ ದಿನವನು ಗಳೆವರೇ 2
ತನುವಿದು ನೋಡಲು ನೆಚ್ಚಿಕೆ ಇಲ್ಲದ |
ಮನಿಗಂಧರ್ವದ ಪುರದಂತೆ |
ತನುವಿಗೆ ಹತ್ತಿದ ಸಂಸಾರ ಸುಖ |
ಕನಸಿನ ಭಾಗ್ಯವ ತೆರೆದಂತೆ 3
ಇದರೋಳು ನಾ ನನ್ನದು ಎಂದೆನುತಲಿ |
ಮದಮತ್ಸರವಾ ಬಗೆಯಲಿ |
ಕುದಿಕುದಿದೇಳು ತಜ್ಞಾವಿಹೀನದಿ |
ಉದರವ ಹೊರವುತ ತಿರುಗವರೇ 4
ಈಗಾಗಯನ್ನದೇ ಹರಿನಾಮವ | ನಾ |
ಲಿಗೆ ಕೊನಿಯಲಿ ತಂದಿರಿಸೀ |
ಭವ |
ಸಾಗರ ಸುಳಿಯಿಂದಲಿ ತರಸೀ 5