ನಾದಾನಂದದಿ ಮುಳುಗಾಡೋ ಪ
ಇಲ್ಲವೆಂಬುದು ಸಲ್ಲ ಗುರುಎಲ್ಲಾ ಪೂರಿತನಹುದಲ್ಲ ಇದ ಬಲ್ಲವರು ಬಲ್ಲರೆಲ್ಲತಾನೆಲ್ಲ ತಿಳಿಯೆ ನೀ ಸಾಕ್ಷಿಕನಹುದಲ್ಲ 1
ಮತಿಯಿಂದ ತಿಳುಕೋ ವಿಚಾರ ಈಗತಿಯಲ್ಲಿ ಆತ್ಮನು ಪೂರಗತಿಗೆ ಕೇಡಿಲ್ಲ ಇದು ಸ್ಥಿರ ಮಹದತಿ ಸೌಖ್ಯ ಪದಕೆ ರಾಜ ನೀನೆ ಉದಾರ 2
ಭೇದ ಭೇದವು ನಿನಗೇತಕೆ ನೀವಾದ ದೂರನು ಪರಕೆ ಈವಾದ ಸಂವಾದಗಳ್ಯಾತಕೆ ಮಹದಾದಿ ಪುರುಷನು ನೀನಹುದು ಬಿಡು ಜೋಕೆ 3
ಸತ್ಯ ಸಂವಿದ್ರೂಪ ಆತ್ಮ ನೋಡೆಪ್ರತ್ಯಾಗಾತ್ಮ ಪರಕತೀತ ಆರಿಂದಲಾದುದುಖ್ಯಾತ ಸುನಾದವರಿದನೇ ನಿರ್ಭೀತ ಮಹಾನಾದ ಚಿದಾನಂದನ ಕೂಡಿದನಾತ4