ಕೇಳಲೊಲ್ಲನೆ ಎನ್ನ ಮಾತನು ರಂಗ ಪ.
ಕಾಳೀಮರ್ದನ ಕೃಷ್ಣಗೆ ಹೇಳೆ ಗೋಪ್ಯಮ್ಮ ಬುದ್ಧಿಅ. ಪ.ಬಿಟ್ಟ ಕಣ್ಣನು ಮುಚ್ಚಲೊಲ್ಲನೆ ದೊಡ್ಡ
ಬೆಟ್ಟಕ್ಕೆ ಬೆನ್ನೊತ್ತಿ ನಿಂದನೆ ಬಲುಸಿಟ್ಟಲಿ ಕೋರೆ ಹಲ್ಲ ಕಿರಿದನೆ ಈಗಗಟ್ಟಿ ಉಕ್ಕಿನ ಕಂಬವೊಡೆದು ಬಂದನೆ ರಂಗ1
ಮೂರಡಿ ಭೂಮಿ ಬೇಡಿ ಬಂದನೆ ತಾಯ- ಶಿರವ ಕಡಿಯಲಿಕೆ ಕೊಡಲಿ ತಂದನೆನಾರಸೀರೆಯನುಟ್ಟುಕೊಂಡನೆ ಬಲುಚೋರತನÀದಲಿ ಹರವಿಹಾಲ ಕುಡಿದನೆÉ ರಂಗ 2
ಬತ್ತಲೆ ನಾರಿಯರ ಅಪ್ಪಿದ ಹೋಗಿಉತ್ತಮ ಅಶ್ವವ ಹತ್ತಿದಹತ್ತವತಾರವ ತೋರಿದ ದಿಟ್ಟಮೂರ್ತಿ ನಮ್ಮ ಚೆಲುವ ಶ್ರೀ ಹಯದವನ 3