ಗೋಕುಲದೊಳಗೆಲ್ಲ ಕೊಳಲೂದಲು |ಬೇಕಾದ ಧ್ವನಿಗಳು ಕೂಡಿ ಕೃಷ್ಣ-ಗೋ- ||ಪಿಕಾಸ್ತ್ರೀಯರುತವಕದಿಂದ ನೋಡ- |ಬೇಕೆಂದು ನಡೆಯೆ ನೂಕ್ಯಾಡುತ ಪಎಂತೆಂತು ಪೊರಟರಂತು ನಾರಿಯರು |ಇಂಥ ವಿಪರೀತ ಯಿಂತಿಲ್ಲ ಮುಂದಿಲ್ಲ |ಸಂತೋಷವಹದು ಚಿಂತೆ ಪೋಗುವುದು |ಸಂತರು ಕೇಳಲುತಂತುಮಾತ್ರಾ ||ಭ್ರಾಂತರಾಗಿ ಯೇನು-ಎಂತು ತಿಳಿಯದೆ |ನಿಂತು ನಿಲ್ಲಲಾರದಂತರದಲೆವೆ |ಧ್ವಾಂತಕಿರಣನಂತಾನ ಮುತ್ತೂರು |ಅಂತರವಿಲ್ಲದ ಸಂತೆಯಂತೆ 1ಚಿಕ್ಕಟುಯೆಂದು ಒಬ್ಬಕ್ಕನು ಗಂಡನ |ತೆಕ್ಕೆಲಿ ಪಿಡಿದುಕಕ್ಕಸಬಡುತ |ಪೊಕ್ಕಳಿಗೆ ಬಟ್ಟನಿಕ್ಕಿ ಒಬ್ಬವಳು |ಅಕ್ಕಿಯ ನುಚ್ಚನೆ ಸಕ್ಕರೆಂದು ||ಮಕ್ಕಳಿಗೀವುತ ಮಿಕ್ಕವರೆಲ್ಲರು |ನಕ್ಕು ತಂತಮ್ಮೊಳಗೆ ಗುಕ್ಕುತ ತಲೆಯ |ಹಿಕ್ಕುತ ಬಂದರು ಫಕ್ಕನೆ ಈಕ್ಷಿಸ-ರಕ್ಕಸ ದಲ್ಲಣನಕ್ಕರದಿ 2ತತ್ತರಿಸಿ ಕರವೆತ್ತಿಗೆ ಬಿಟ್ಟರು |ಮುತ್ತಿನ ಕಟ್ಟಾಣಿವೊತ್ತಿ ಮುಡಿಗಿಟ್ಟು |ನೆತ್ತಿಗೆ ಸೀರೆಯ ಸುತ್ತಿಕೊಂಡು ಬರೆ |ಸುತ್ತಲಂಗನೆರು ಬತ್ತಲಾಗಿ ||ತುತ್ತು ಮಾಡಿ ಮಾಡಿ ಹತ್ತಿಸೆ ಎದೆಗೆ |ಹೊಸ್ತಲಿ ದಾಟಲಿ ಗತ್ತಿಡಲಾರದೆ |ಹತ್ತೆಂಟು ಮಂದಿಯು ಚಿತ್ತಪಲ್ಲಟಾಗಿ |ಉತ್ತಮಾಂಗನಿಗೆ ಸುತ್ತಿದರೊ 3ಹಾಲಿಗೆ ಪಿಲ್ಲೆಯು ಫಾಲವಿದೇಯೆಂದು |ಕಾಲಿಗೆ ಕುಂಕುಮ ವಾಲಿಟ್ಟು ಮೂಗಿಗೆ |ಮೇಲಾದ ಹೂವಿನ ಮಾಲಿಕೆ ಕಟಿಗೆ |ತೋಲಾದ ಸರಿಗೆ ಬಾಳಿಗಿಟ್ಟು ||ಹೇಳುವ ಮಾತನುಕೇಳಿಕೇಳದಂತೆ |ಇಳೆಗೆ ಅಗಾಧ ಧೂಳಿಯ ಮುಚ್ಚುತ |ಜಾಲಸಂಭ್ರಮದಿ ವಾಲಯ ಬಂದರು |ಜಾಲಜಾನಾಭನ ವಾಲಗಕ್ಕೆ 4ಭೋರೆಂಬ ಶಬ್ದವ ಮರೆತಳೆಮುನೆ |ಗಿರಿಯು ಬ್ಯಾವಿಯೆ ? ತುರುವು ಮೇವನು |ತೊರೆಯೆ, ಫಣಿಯು ಶಿರವ ತೂಗಿತು |ತೆರೆಯ ಕಟ್ಟಿತು ಶರಧಿಯು ||ಸುರರುನಭದಿ ನೆರೆದು ಪೂಮಳೆ |ಗರೆಯೆದುಂದುಭಿಮೊರೆಯೆ ಸುಖವ |ಸುರಿಯೆ ಪ್ರಾಣೇಶ ವಿಠಲ ಕೊಳಲ |ತ್ವರನುಡಿಸುವ ಸ್ವರಗೇಳಿ 5