ಗೋವಿಂದಾಷ್ಟೋತ್ತರ ನಾಮಾವಳಿ
ಹೃದ್ಗತ ತಮನಾಶ ಗೋವಿಂದ | ಎನ್ನಹೃದ್ಗುಹದೊಳು ತೋರೋ ಗೋವಿಂದ ಪ
ಅಲವ ಮಹಿಮ ಹರಿ ಗೋವಿಂದ | ನಮ್ಮಅಲವ ಭೋದರ ಪ್ರೀಯ ಗೋವಿಂದ ||ಆಲಯದೊಳು ನಿಲ್ಲೊ ಗೋವಿಂದ | ಹೃ-ದಾಲಯದಲಿ ತೋರೊ ಗೋವಿಂದ 1
ಇಕ್ಷುಚಾಪನ ಪಿತನೆ ಗೋವಿಂದ | ನೀನಿಕ್ಷುಧನ್ವಾರಿ ನುತ ಗೋವಿಂದ ||ಈಕ್ಷಿಸೋ ಕರುಣದಿ ಗೋವಿಂದ | ನಿ-ನ್ನೀಕ್ಷಿಸ ಲೋಶವೇನೊ ಗೋವಿಂದ 2
ಉರಗ ಶಯನನೆ ಗೋವಿಂದ | ನಮ್ಮಉರಗಾಯಿ ವೈಕುಂಠ ಗೋವಿಂದ ||ಊರೂರು ಚರಿಸಿದೆ ಗೋವಿಂದ | ನಿ-ಮ್ಮೂರಿಗೆ ಕರೆದೊಯ್ಯೊ ಗೋವಿಂದ 3
ಋಗಾದಿ ತ್ರಯಿಮಯಿ ಗೋವಿಂದ | ಹರಿಋಗ್ವಿನುತನೆ ಗುರು ಗೋವಿಂದ ||Iೂಕ್ಷ ಸದ್ವಿನುತನೆ ಗೋವಿಂದ | ಹರಿIೂಕಾರ ಪ್ರತಿಪಾದ್ಯ ಗೋವಿಂದ 4
ಏತತ್ತೆನಿಸಿಯು ಹೃದ್ಗ ಗೋವಿಂದ | ನೀ ನೇತಕೆ ಕಾಣಿಯಾಗಿಹೆ ಗೋವಿಂದ ||ಐತದಾತ್ಮ್ಯಕ ಸರ್ವ ಗೋವಿಂದ | ನೀನೈತರುವುದು ಮನಕೆ ಗೋವಿಂದ 5
ಸತಿ ಗೋವಿಂದ | ನೀನೌತು ಕೊಂಡಿಹದೇಕೊ ಗೋವಿಂದ 6
ಅಂಗಾಂಗಿ ಭಾವದಿ ಗೋವಿಂದ | ನೀನಂಗಾಂಗದಿ ಕ್ರೀಡಿಪೆ ಗೋವಿಂದ ||ಅಹರರ್ಹಮನದಲಿ ಗೋವಿಂದ | ನೀಅಹರಹರ್ವಿಹರಿಸೋ ಗೋವಿಂದ 7
ಕಪಿಲಾತ್ಮ ಶ್ರೀ ಹರಿ ಗೋವಿಂದ | ನಮ್ಮಕಪಿವರ ಪೂಜ್ಯನೆ ಗೋವಿಂದ ||ಖಪತಿಗಮನ ಗುರು ಗೋವಿಂದ | ಜಗಖರ್ಪರ ಸೀಳಿದ ಗೋವಿಂದ 8
ಗರುಡಧ್ವಜನೆ ಬಾರೋ ಗೋವಿಂದ | ಜಗಂಗರುವವ ಕಳೆಯೊ ಗೋವಿಂದ ||ಘರ್ಮಾಸ ಸಮಂತಾತು ಗೋವಿಂದ | ಸೂಕ್ತಘರ್ಮಕ್ಕೆ ವಿಷಯನೆ ಗೋವಿಂದ 9
ಓಂಕಾರ ಪ್ರತಿಪಾದ್ಯ ಗೋವಿಂದ | ಪಾ-ಙ್ತವು ಜಗವೆಲ್ಲ ಗೋವಿಂದ ||ಚರ್ಮದೊಳುದ್ಗೀಥ ಗೋವಿಂದ | ಇದ್ದುಚರ್ಮ ಲಾವಣ್ಯದ ಗೋವಿಂದ 10
ಛಂದಸ್ಸಿನಿಂಛನ್ನ ಗೋವಿಂದ | ನಾಗಿಛಂದೋಭಿಧನೆನಿಪೆ ಗೋವಿಂದ ||ಜಂಗಮ ಚರವ್ಯಾಪ್ತ ಗೋವಿಂದ | ಎಮ್ಮಜಂಗುಳಿಗಳ ಕಳೆಯೊ ಗೋವಿಂದ 11
ಝಷ ರೂಪಿ ಕಮಠನೆ ಗೋವಿಂದ | ನಮ್ಮಝಷ ಕೇತುಪಿತ ಕಾಯೊ ಗೋವಿಂದ ||ಜ್ಞಾನ ಜ್ಞೇಯ ಜ್ಞಾತೃ ಗೋವಿಂದ | ಪ್ರ-ಜ್ಞಾನ ಘನನೆನಿಪೆ ಗೋವಿಂದ 12
ಟಂಕಿ ಎಂಬುವನೆ ಗೋವಿಂದ | ನಮ್ಮಾಟಂಕವ ಕಳೆಯೋ ಗೋವಿಂದ ||ಠಕ್ಕು ಠವಳಿಗಾರ ಗೋವಿಂದ | ನಮ್ಮಠಕ್ಕಸಿ ಹಾಕದಿರು ಗೋವಿಂದ 13
ಡರಕೊ ಡರ್ಯಾಭಿಧ ಗೋವಿಂದ | ನಮ್ಮೆಡರನು ಪರಿಹರಿಸೊ ಗೋವಿಂದ ||ಢಣ ಢಣ ನಾದದಿ ಗೋವಿಂದ | ಬಲುಢಣಿರೆಂಬೊ ವಾದ್ಯದಿ ಗೋವಿಂದ 14
ಣನಾಮ ವಾಚ್ಯನೆ ಗೋವಿಂದ | ಪ್ರ-ಣಮನ ಮಾಡುವೆನೋ ಗೋವಿಂದ ||ತರುಣಾರ್ಕ ಪ್ರಭೆಯ ಗೋವಿಂದ | ನಮ್ಮತರುಣಿ ದ್ರೌಪದಿ ವರದ ಗೋವಿಂದ 15
ಥರಥರವರ್ಣನೆ ಗೋವಿಂದ | ಬಲ್ಪ್ರಮಥನ ಶೀಲನೆ ಗುರು ಗೋವಿಂದ ||ದರ ಕಂಬುಧರನೆ ಗೋವಿಂದ | ತ್ರಿ-ದಶರ ಪರಿಪಾಲ ಗೋವಿಂದ 16
ಧರ್ಮಸು ಗೋಪ್ತನೆ ಗೋವಿಂದ | ಸ-ಧ್ದರ್ಮ ನಾಮಕ ಗುರು ಗೋವಿಂದ ||ನರೆಯಣಾಭಿಧ ಗುರು ಗೋವಿಂದ | ನಮ್ಮನರಸಖನೆನಿಸಿಹೆ ಗೋವಿಂದ 17
ಪರಮ ಪುರುಷ ಗುರು ಗೋವಿಂದ | ಕಾಯೊಪರಮಾನಂದ ಪ್ರದನೆ ಗೋವಿಂದ ||ಫಲರೂಪನು ನೀನೆ ಗೋವಿಂದ | ಇದೆಫಲಿತಾರ್ಥವೊ ಗುರು ಗೋವಿಂದ 18
ಬಗೆ ಬಗೆ ಕರ್ಮಗಳ್ ಗೋವಿಂದ | ಮಾಡಿಬಗೆ ಬಗೆ ಲೀಲನೆ ಗೋವಿಂದ ||ಭರ್ಗ ರೂಪಿಯೆ ಗುರು ಗೋವಿಂದ | ನಮ್ಮಭರ್ಮ ಗರ್ಭನ ಪಿತ ಗೋವಿಂದ 19
ಮದಜನಕಮಜ್ಜದಿ ಗೋವಿಂದ | ನಮ್ಮಮದನ ಗೋಪಾಲನೆ ಗೋವಿಂದ ||ಯಜ್ಞ ಭುಗ್ಯಜ್ಞನೆ ಗೋವಿಂದ | ಮತ್ತೆಯಜ್ಞ ಸಾಧನ ನೀನೇ ಗೋವಿಂದ 20
ರಣದೊಳರ್ಜುನ ಪಾಲ ಗೋವಿಂದ | ಹಗರಣವನೆ ಕಳೆಯೊ ಗೋವಿಂದ ||ಲವಕುಶ ಪಿತನೆನಿಪೆ ಗೋವಿಂದ | ನೀನಲವಪೂರ್ಣ ಮಹಿಮ ಗೋವಿಂದ 21
ವರ್ಣಗಳ್ಧ್ವನಿಗಳು ಗೋವಿಂದ | ಸರ್ವವರ್ಣಿಪುದು ನಿನ್ನ ಗೋವಿಂದ ||ಶರೊ ಆಭಿಧ ಜೀವನ್ನ ಗೋವಿಂದ | ಮೀಟಿಶರೀರಾಖ್ಯನೆನಿಸುವೆ ಗೋವಿಂದ 22
ಷಡ್ಗುಣ ಪರಿಪೂರ್ಣ ಗೋವಿಂದ | ನೀನೆಷಡ್ವಾದಿ ಸ್ವರ ವ್ಯಾಪಿ ಗೋವಿಂದ ||ಸತ್ತಾದಿ ಪ್ರದ ರೂಪಿ ಗೋವಿಂದ | ನೀನೆಸತ್ತತ್ವ ಪ್ರತಿಪಾದ್ಯ ಗೋವಿಂದ 23
ಹರಿ ಹರಿ ಎಂದರೆ ಗೋವಿಂದ | ಪಾಪಹರಿ ಸೂವಿ ನೀನೇ ಗೋವಿಂದ ||ಳಾಳೂಕ ಆಭಿಧ ಗೋವಿಂದ | ಕಾಯೊಳಕಾರ ಪ್ರತಿಪಾದ್ಯ ಗೋವಿಂದ 24
ಕ್ಷಮಿಸೆನ್ನ ಅಪರಾಧ ಗೋವಿಂದ | ಬಲಿಕ್ಷಮೆಯನಳೆದ ಗುರು ಗೋವಿಂದ ||ಕ್ಷಮಕ್ಷಾಮಾಭಿಧ ಗುರು ಗೋವಿಂದ | ನೀಲಕ್ಷುಮಿ ಸಹ ನೆಲಸೊ ಗೋವಿಂದ 25
ಜ್ಞಾನಗಮ್ಯನೆ ಗುರು ಗೋವಿಂದ | ತತ್ವಜ್ಞಾನವ ಪಾಲಿಸೋ ಗೋವಿಂದ ||ಜ್ಞಾನಿಗೆ ಪ್ರಿಯತಮ ಗೋವಿಂದ | ನಿನಗೆಜ್ಞಾನಿ ಜನರು ಪ್ರಿಯರು ಗೋವಿಂದ 26
ಏಕ ಪಂಚಾಶತು ಗೋವಿಂದ | ವರ್ಣಏಕಾತ್ಮ ಮಾಲೇಯ ಗೋವಿಂದ ||ಲೋಕೈಕನಾಥ ಗುರು ಗೋವಿಂದ | ವಿಠಲಸ್ವೀಕರಿಸೆನ್ನ ಕಾಯೋ ಗೋವಿಂದ 27