ರಂಗಧಾಮ ಭುಜಂಗ ಶಯನ
ಮಂಗಳಾತ್ಮಕನೆ ಶ್ರೀಶನೆ ಪ
ಗಂಗಾಜನಕ ಉತ್ತುಂಗ ಮಹಿಮನೆ
ಸಂಗರಹಿತನೆ ಭಂಗಹರಿಪನೆ ಅ.ಪ
ಶ್ರೀಶ ನಿನ್ನನು ಪ್ರಾರ್ಥಿಪರಘ ಶೋಧಿಸೆನುತ
ಶ್ರೀ ಸಮೇತರಾಗಿ ಭಕ್ತರ ಪೋಷಿಸೆನ್ನುತ
ವಾಸುದೇವ ಅನಂತಮಹಿಮ ಶ್ರೀಶನೆನ್ನುತ
ದಾಸರೆಲ್ಲರು ಘೋಷಿಸುವರು ಶೇಷಶಯನ ರಕ್ಷಿಸೆನುತ 1
ಸಾಧುಜನ ಹೃದಯವಾಸನೆನ್ನುತ ಪೇಳ್ವರೊ
ಸಾಧನ ಜೀವರಿಗೆ ಪರಮಪ್ರಿಯನೆಂಬರೊ
ಮೋದತೀರ್ಥ ಸುಧಾರಸ ಸೇವಿಸಿರೆಂಬರೋ
ಆದಿ ಪುರುಷ ಅನಾದಿ ಅನಂತ ಮಹಿಮನೆಂಬರೊ2
ಅಕ್ಷಯಗುಣ ಪೂರ್ಣಸರ್ವರ ರಕ್ಷಿಸೆನ್ನುತಲಿ
ಲಕ್ಷ್ಮಿಪತಿಯೆ ಪ್ರಾರ್ಥಿಸುವೆನು ಈಕ್ಷಿಸೆನುತಲಿ
ಪಕ್ಷಿವಾಹನವೇರಿ ಮೆರೆವ ಅದೋಕ್ಷಜನೆನುತಲಿ
ನಿತ್ಯ ನಿತ್ಯದಲಿ 3
ಶೋಭಿಪ ನಿನ್ನ ರೂಪ ಹೃದಯದಲಿ ಕಾಣಲು
ಶೋಭಕೃತು ಸಂವತ್ಸರದಲಿ ನಿನ್ನ ಪಾಡಲು
ಶೋಭನಂಗಳನ್ನೆ ಕೊಡುವ ಸ್ವಾಮಿ ಎನ್ನಲು 4
ಕಡಲಶಯನ ಮೃಡನ ಸಖನೆ ಬಿಡದೆ ರಕ್ಷಿಸು
ತಡೆಯದೆ ನಿನ್ನ ಚರಣ ಸ್ಮರಣೆ ಬಿಡದೆ ಕರುಣಿಸು
ಬಿಡದಲೇ ಬಹಮನದ ತಾಪವೆಲ್ಲ ನೀಗಿಸುಕಡಲೊಡೆಯನೆ ಕಮಲನಾಭ ವಿಠ್ಠಲ ಪಾಲಿಸು 5