ವಾಸುದೇವ ಸಾಮಾನ್ಯ ನೀನಲ್ಲವೊ ಪ
ನವನೀತ ಇಷ್ಟು ತಿನ್ನುವಿ
ಭೂತಗಳಿರುವುವೇನೊ ಉದರದೊಳು 1
ಕುದಿಯುವ ಪಾಲನು ಮುದದಿಂದ ಕುಡಿಯುವೆ
ಉದಕದ ರಾಶಿ ಜಿಹ್ವೆಯೊಳಿಹುದೇನೊ 2
ರಾತ್ರಿ ವೇಳೆಯಲಿ ನೀ ಸುತ್ತುವಿ ಮನೆ ಮನೆ
ನೇತ್ರದೊಳ್ ಸೂರ್ಯಚಂದ್ರರು ಇಹರೇನೊ 3
ಶಿಕ್ಷೆಮಾಡಲು ಬೆನ್ನು ಪಾಶ್ರ್ವದಲ್ಲಿಹ ನಮ್ಮ
ಈಕ್ಷಿಸುವುದಕೆ ವಿಶ್ವತ ಚಕ್ಷುವೇನೊ 4
ನಿನ್ನ ಚರಿತೆ ಎಮಗೆ ಚೆನ್ನಾಗಿ ತಿಳಿಸಿ ಪ್ರ
ಸನ್ನನಾಗದಿರೆ ಮನ್ನಿಸೆವೋ ನಿನ್ನ 5