ದೂರದಿ ನಿಲಿಸಯ್ಯ ರಂಗಯ್ಯ
ದೂರದಿ ನಿಲಿಸಯ್ಯ ನಿನ್ನ ನೀರಜಪಾದವ ಈಕ್ಷಿಸುವಷ್ಟೇ ಪ
ಸಾರಸಭವ ವಾಲ್ಮೀಕಿ ಪುರಂದರ
ನಾರದರೆಲ್ಲ ನಿನ್ನ ಬಳಿಯೊಳೆ ಇರಲೀ ಅ.ಪ
ಹನುಮ ಖಗೇಶ್ವರ ದನುಜ ವೈರಿಗಳೆಲ್ಲ
ನಿತ್ಯ ಸೂರಿಗಳು
ಘನ ವೇದಾಂತ ಸಂಗೀತ ಕೋವಿದರು
ವನಜನಾಭನೆ ನಿನ್ನ ಸೇವಿಸುತಿರಲಿ 1
ಮಣಿದು ಮಣಿದು ನಿನ್ನ ಗುಣಗಳ ಬಣ್ಣಿಸಿ
ಕುಣಿ ಕುಣಿದೆರಗುವ ಭಕ್ತರ ಬಳಿ ನಾ
ತೃಣಕೆ ಸಮ ನಾನಿಣುಕಿ ಬಾಗಿ
ಮಣಿವಂತೆ ಮಾಡೋ ಮಾಂಗಿರಿಯ ರಂಗಯ್ಯ 2