ಅಂಕಿತ-ಗಿರಿಧರಸುತ
ಗುರುಮಹೀಪತಿರಾಯಾ |
ಕೊಡು ಎನಗೆ ಸುಮತಿಯಾ ಪ
ಭಕ್ತರ ಸುರಧೇನು |
ಐಗಳಿ ವೃತ್ತಿಯನು |
ಮನಕೆ ತಾರದೆ ಘನ ವ್ಯಾಪರವನು | ಮಾಡುತ ಭಾಗ್ಯವನು |
ಮಾಡಲು ತಿಮ್ಮವ್ವನು 1
ಭಾಸ್ಕರ ಮುನಿ ಬಂದು |
ಧಾರುಣಿ ಜನರುದ್ಧರಿಸಲಲ್ಲೆ ನಿಂದು | ಇರಲು ದಯಾಸಿಂಧು |
ನಾರಿಶಿರೋಮಣಿ ದರುಶನಕ್ಕೆ ತಂದು | ನೀನೆ ಗತಿಯೆಂದು |
ಆರು ತಿಂಗಳಾರಾಧಿಸೆ ಸಲಹೆಂದು | ದೀನಜನ ಬಂಧು | 2
ಸತಿಪತಿಗಳ ಚಿತ್ತಾ |
ಆಗುದು ಎನೆ ವನಿತಾ |
ನಮಿಸಲು ಗುರುತಾತ |
ಆತರಿದನು ತವ ಮುಖವನು ಈಕ್ಷಿಸುತಾ ಪಕ್ವಾಫಲವೆನುತಾ 3
ಮಂದಹಾಸದಿಂ ನುಡಿದನು ನಿಜಗುಟ್ಟು | ವ್ಯಾಪಾರವ ಬಿಟ್ಟು |
ಚಂದದಿ ಯಾಚಕ ವೃತ್ತಿಲಿ ಮನನಟ್ಟು | ಎನೆ ಸಮ್ಮತ ಬಟ್ಟು |
ಮಂದಿ ಕುದುರಿಗೆಲ್ಲರಿಗಪ್ಪಣೆ ಕೊಟ್ಟು | ನಿಲ್ಲದ್ಹರುಷ ತೊಟ್ಟು |
ಉಪದೇಶವ ಕೊಟ್ಟು 4
ಯೋಗಧಾರಣದ ಕೀಲವ ದೋರಿಸಲು | ದೂದಿಯವೋಲ್ |
ನಾನಾ ಬಯಕೆಗಳು |
ತ್ಯಾಗವ ಮಾಡುವ ಅನ್ನ ಉದಕಗಳು | ಕ್ಲಪ್ತಕೆ ನಿಲ್ಲಿಸಲು |
ಮುಗಿದವು ಹಸ್ತಗಳು 5
ಭ್ರೂಮಧ್ಯದ್ವಿದಳದಾ |
ದ್ವಾರವ ತ್ಯಜಿಸುತ್ತಾ |
ತ್ರಿಕುಟ ಶ್ರೀಹಟ ಗೋಲ್ಹಟ ಗೋಪುರದಾ | ನೋಡುತ ಸಂಭ್ರಮದಾ |
ಪಂಕಜದೊಳಗಿದ್ದ 6
ನಿತ್ಯ ಪ್ರಭೆಯು ಅನುದಿನಾ |
ಕಾಣುತ ಸಂಪೂರ್ಣಾ |
ತಿಳಕೊಂಡ್ಯೋ ಪ್ರವೀಣಾ |
ದಿಂದಲೇ ಭಯಹರಣಾ 7
ಅಂತಹದು ಬೇಗ |
ನೋಡೆಂದನು ಅನಘಾ |
ನಿನ್ನಲ್ಲೇ ಈಗಾ |
ದುಷ್ಕøತ ತರುನಾಗಾ 8
ಆಗುದು ನಿರ್ಧಾರಾ |
ನಿನ್ನುದರದಿ ಕುವರಾ |
ಸಂಶಯ ಬಿಡು ಅದರಾ |
ಭಕ್ತರ ಸಹಕಾರಾ 9
ಮುನಿವರನಾಜ್ಞೆದಿ ಸ್ವಸ್ಥಾನಕೆ ಬರುತಾ | ಕೆಲ ದಿವಸಲ್ಲಿರುತಾ |
ಸತ್ಪುರುಷರೆನಿಸುತಾ |
ಇರಲು ದಯವಂತಾ |
ವೇಧಿಯು ಬಂತೆನುತಾ 10
ಅಂತರಂಗದಲಿ ತಿಳಿಯತಲಾಗ್ರಾಮ | ತ್ಯಜಿಸಿದೆ ನಿಸ್ಸೀಮಾ |
ಧಾಮಾ ಮಾಡಿದೆ ನಿಷ್ಕಾಮಾ |
ಬಟ್ಟರು ಬಹುಪ್ರೇಮಾ |
ಗುರುಸಾರ್ವಭೌಮಾ 11
ಅಲ್ಲಿ ಮೂರು ಸಂವತ್ಸರ ಇರಲಾಗಿ | ಶರಣ್ಹಾಳಿಯು ಬಾಗಿ |
ಇಲ್ಲಿ ನೀವು ದಯಮಾಡುವದೊಳಿತಾಗಿ | ಸರಿ ಬಾರದಾಗಿ |
ಬಂದ್ಯೋ ಮಹಾತ್ಯಾಗಿ |
ಬರಲು ವರಯೋಗಿ12
ಕರೆದೊಯ್ದರು ಸ್ತುತಿಸಿ |
ಕರಣಿಕ ತನ್ನಯ ಸ್ಥಳದಲಿ ಗೃಹ ರಚಿಸಿ | ಕೊಡಲಂಗೀಕರಿಸಿ |
ಹರುಷದಿ ವರಭಾಸ್ಕರ ಮುನಿಕರ ಸರಿಸಿ | ರುಹಜಾತನೆನಿಸಿ |
ಇರುತಿರೆ ತೋರಿತು ಸಂತತಿ ಉದ್ಭವಿಸಿ | ಗುರುವಾಕ್ಯಫಲಿಸಿ 13
ಆರಿಂದಾಗದು ನೈರಾಶ್ಯಾಚಾರಾ | ನಡೆಸಿದೆ ಗಂಭೀರಾ |
ಧಾರುಣಿ ಜನರಿಂದಧಿಕೃತ ಸಂಸಾರ | ಜಲ ಪದ್ಮಪ್ರಕಾರಾ |
ಅನುದಿನ ವೈರಾಗ್ಯದಾಗರಾ | ಸಂಪತ್ತು ಅಪಾರಾ |
ತಿಳಿದ್ಯೋ ಸುಕುಮಾರಾ 14
ಕೊಟ್ಟರ್ಹಿಡಿಯಲಿಲ್ಲ ಓರ್ವರ ಧನವು | ಪೂರ್ವದ ಸಂಗ್ರಹವು |
ಸತಿಸುತ ಪರಿವಾರವು |
ಭಕ್ತರ ಸಮುದಾಯವು |
ಮೃಷ್ಟಾನ್ನ ಭೋಜನವು 15
ತುಕ್ಕವ್ವಳು ನಿಮ್ಮತ್ತಿಗೆ ಭಾವಿಕಳು | ಪ್ರೀತಿಯ ಶೇವಕಳು |
ಫಕ್ಕನೆ ವಿನಯದಿ ಮೃದು ಮಾತಾಡಿದಳು |
ಸತ್ಪುರುಷರಿಳೆಯೊಳು |
ಅಕ್ಕರದಲಿ ದೋರುವರು ಶಿದ್ಧಿಗಳು ನೀವೇನಿಲ್ಲೆನಲು |
ಆದೀತೆಂದೆನಲು16
ಸೊಸಿಯೊಳು |
ತುಕ್ಕವ್ವ ತಿಳಿಸಲು |
ಕೈಯ್ಯನೆಳೆಯಲು |
ನೋಡುತ ಬೆರಗಾದಳು 17
ಲೋಕವನುದ್ಧರಿಸಲು ನೀನವತರಿಸಿ | ಜಡದೇಹವ ಧರಿಸಿ |
ಕೊಟ್ಯೋ ಗುಣರಾಶಿ |
ಕೊಂಡ್ಯೋ ಸುಖವಾಸಿ |
ಬಹು ನರಕದ ವಾಸಿ 18
ಜಗದೊಳಗಿಹ ಶಿದ್ಧರ ಮುಕುಟದ ಮಣಿಯೇ |
ಸಾಧಕರೊಳಗೆಣೆಯೆ |
ದುರಿತಾಂಧ ದ್ಯುಮಣಿಯೆ |
ಕುಹಕರಿಗೇನ್ಹೊಣೆಯೆ |
ವರಸತ್ವದ ಗುಣಿಯೆ 19
ಕಾಲ ತಪ್ಪಿಸುವದೇನೈ ನಿಮಗರಿದೆ | ಮನದೊಳು ನೀನರಿದೆ |
ತಾಳಿದ ದೇಹವ ಸಾಕೆನುತಲಿ ಜರಿದೆ | ಚಿದ್ರೂಪವ ಬೆರೆದೆ |
ಬಹು ಭಕ್ತರ ಪೊರೆದೆ |
ತಡಮಾಡಗೊಡದೆ20