ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಆದಿಮೂರುತಿ ಪರಂಜ್ಯೋತಿಪಿತನೇ ದಾಶರಥಿ ಪ. ಕೊಡು ಭಕ್ತಿಶಕ್ತಿ ಸಂಪದಸಿರಿಯ ಕಡು ಬಾಲಕರೊಳು ಕೆಡುಕು ಮಾಡದೆ ನಡು ಕಡೆಗಳಿಲ್ಲದ ಜಗದೊಡೆಯ ಜನಾರ್ದನ 1 ಶತಕೋಟಿ ಬ್ರಹ್ಮಾಂಡಘಟವ ನಿರುತದಿ ಧರಿಸಿರುವ ಪ್ರಥಮಪುರುಷ ನಿನ್ನ ಪದವ ಕ್ಷಿತಿಯೊಳೀಕ್ಷಿಪಗೆ ಚೋದಿಗವೆನೆ ರತಿ- ಪತಿಪಿತನೆ ಬಂದು ನಡೆಸೆನ್ನ ಮುಂದು 2 ಕುಕ್ಷಿಯೊಳೀರೇಳು ಜಗವ ಧರಿಸಿರುವ ಕ್ಷಯ ಗುಣದಿಂದ ಮೆರೆವ ಲಕ್ಷ್ಮೀನಾರಾಯಣ ಲಕ್ಷ ಅವಗುಣಗಳ ಈಕ್ಷಿಸದೆನ್ನನು ರಕ್ಷಿಸಬೇಕೆಂದು 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕರುಣ ಬಾರದೆ ವಿಠ್ಠಲಾ | ಶ್ರೀ ಪಾಂಡುರಂಗ ಪ. ಸ್ಮರಣೆ ಮಾಡುತ ಪೊರೆ ಎಂದೆನ್ನುತ ವರಲುವಾ ಧ್ವನಿ ಕೇಳದೇ ಈ ಪರಿಯ ಗರ್ವವಿದೇನೊ ಹರಿಯೆ ಅ. ದೂರದಿಂದಲಿ ಬಂದೆನೋ | ಇಲ್ಲಿಂದ ಮುಂದೆ ದಾರಿ ಕಾಣದೆ ನಿಂದೆನೋ ದ್ವಾರಕಾಪತಿ ನೀನಲ್ಲದಿ ನ್ನಾರು ಕಾಯುವರೀಗ ಪೇಳು ಸಾರಿದೆನು ನಿನ್ನಂಘ್ರಿ ಕಮಲವ ಚಾರು ಚರಿತನೆ ಮಾರನೈಯ್ಯ 1 ತನುಸುಖ ಬೇಡಲಿಲ್ಲಾ | ನಿನ್ನ ನಾನು ಘನವಾಗಿ ಕಾಡಲಿಲ್ಲ ಮನದ ಹಂಬಲ ನೀನೆ ಬಲ್ಲೆಯೊ ಮನಕೆ ತಾರದೆ ಸುಮ್ಮನಿಪ್ಪೆಯೋ ಎನಗೆ ಪ್ರೇರಕ ನೀನೆ ಅಲ್ಲವೆ ನಿನಗೆ ದಾಸಳು ನಾನು ಅಲ್ಲವೆ 2 ಕರೆಕರೆ ಪಡಿಸುವುದೂ | ಸರಿಯಲ್ಲ ನಿನಗೆ ಕರಿವರದ ಕೇಳು ಇದೂ ನರಸಖನೆ ದಯದಿಂದ ನಿನ್ನ ಚರಣ ದರುಶನವಿತ್ತೆ ಒಲಿದು ಕರಪಿಡಿದು ಸಲಹೆಂದರೀಗ ತೆರೆದು ನೋಡದೆ ನೇತ್ರವಿರುವರೆ 3 ಜ್ಞಾನಿ ಹೃತ್ಕಮಲವಾಸ | ಶ್ರೀ ರುಕ್ಮಿಣೀಶ ಭಾನುಕೋಟಿ ಪ್ರಕಾಶ ನೀನೆ ಗತಿ ಇನ್ನಿಲ್ಲ ಅನ್ಯರು ಸಾನುರಾಗದಿ ಸಲಹೊ ಎನ್ನಲು ಆನನದಿ ಈಕ್ಷಿಸದೆ ನಿಂತರೆ ಮಾನ ಉಳಿವುದೆ ಭಕ್ತವತ್ಸಲ 4 ಇಟ್ಟಿಗೆ ಕೊಟ್ಟವನೊ ಕೊಟ್ಟನಿನ್ನೇನು ಅಷ್ಟು ಭಾಗ್ಯವನೂ ಕೊಟ್ಟೆ ಬಡ ಬ್ರಾಹ್ಮಣನ ಅವಲಿಗೆ ದೃಷ್ಟಿ ಬಿದ್ದರೆ ಕಷ್ಟ ಉಂಟೆ ಕೊಟ್ಟು ಅಭಯ ಪೊರೆ ಗೋಪಾಲ- ಕೃಷ್ಣವಿಠ್ಠಲ ಮನದಿ ತೋರೋ5
--------------
ಅಂಬಾಬಾಯಿ
ನಿನ್ನನಗಲಿ ಪೋಗಲಾರೆವೋ ನೀರಜಾಕ್ಷ ನಿನ್ನ ಸೇರಿ ಸುಖಿಸ ಬಂದೆವೊ ಪ ಮನ್ನಿಸದೆ ಮಮತೆಯಿಂದ ಭಿನ್ನ ನುಡಿಗಳಾಡಿ ನಮಗೆ ಹಣ್ಣು ತೋರಿ ಕಾಳಕೂಟವನ್ನು ಕೊಡುವರೇನೊ ಕೃಷ್ಣ ಅ ಐದುವದಕೆ ಶಕ್ಯವಲ್ಲದ ಅಪ್ರಮೇಯ ಆದಿಪುರುಷ ಅಮರಸನ್ನುತ ಶ್ರೀದ ನಮ್ಮ ಕೈಯ ಬಿಡದೆ ಆದರಿಸಬೇಕು ಪರವ- ರಾದರೇನು ನಿನ್ನ ಶರಣರಾದ ಮೇಲೆ ಬಿಡುವುದುಂಟೆ1 ಬಂಧುವರ್ಗವನ್ನು ಬಿಡುವುದು ಸ್ತ್ರೀಯರಿಗೆ ನಿಂದ್ಯವೆಂದು ಶಾಸ್ತ್ರ ಪೇಳ್ವುದು ಎಂದೆಗೆಂದಿಗೆಮಗೆ ನೀನೆ ಬಂಧುವೆಂದು ಬಂದಿಹೆವೊ ಇಂದು ಹೋಗಿರೆಂಬೆ ನೀನು2 ಶಮದಮಾದಿ ಗುಣಗಳಿಂದಲಿ ಸಜ್ಜನರು ಮೂರ್ತಿ ಮನದಲಿ ಮಮತೆಯಿಂದ ಪೂಜಿಸುತ್ತ ಗಮಿಸುವರೊ ನಿನ್ನ ಪುರಕೆ ನಮಗೆ ಮಾತ್ರ ಪತಿಸುತಾದ್ಯರಮಿತ ಸುಖವ ಕೊಡುವರೇನೊ 3 ಮೋಕ್ಷ ಇಚ್ಛೆಯಿಂದ ನಿನ್ನನು ಭಜಿಪ ಜನರಾ ಪಕ್ಷ ವಹಿಸಿದಂತೆ ನಮ್ಮನು ರಕ್ಷಿಸದೆ ಬಿಡುವರೇ ಕಟಾಕ್ಷದಿಂದ ಈಕ್ಷಿಸದೆ ಲಕ್ಷ್ಮೀದೇವಿ ನಿಮಗೆ ಬಹಳಾಪೇಕ್ಷೆಯಿಂದ ಮೋಹಿಸಿದಳೆ 4 ಅನಘ ನಿನ್ನ ನೋಡಿ ಮೋಹಿಸಿ ಅಂತರಾತ್ಮ ತನುವು ಮನವು ನಿನಗೆ ಅರ್ಪಿಸಿ ಜನನ ಮರಣದಿಂದ ಜನರು ದಣಿವರೇನೂ ಕಾಂತ ನಮ್ಮ ಮನಸಿನಂತೆ ಒಲಿದು ಸಲಹೊ ವನಜನಾಭ ವಿಜಯವಿಠ್ಠಲ 5
--------------
ವಿಜಯದಾಸ