ಶೇಷ ಗಿರಿಯ ವಾಸಈಶ ಜಗತ್ರಯ
ಪೋಷಕ ಸರ್ವೇಶ ಭಾಸುರ ಕೀರ್ತಿ
ಶೇಷ ಎನ್ನ ನೀ ಪೋಷಿಸುವುದು ಈಶ ಪ
ವಕ್ಷಸ್ಥಳದಲಿ ವಾಸವಾಗಿಹ ಶ್ರೀ ಪರಬ್ರಹ್ಮ ನಾ
ಪಕ್ಷಿವಾಹನ ಪರಮಪರುಷ
ಅಕ್ಷಯ ಫಲದಾಯಕನಾ
ರಕ್ಷಕ ದೀನ ಜನರ ಸರ್ವೋತ್ತಮನ ರಾಜೀವದಳನಯನ
ಈಕ್ಷಣದಲೆನ್ನ ನಿನ್ನ ಕುಕ್ಷಿಯೊಳಗೆ ಇಟ್ಟು
ರಕ್ಷಿಸೊ ಸಂಪನ್ನ 1
ವೇಣುನಾದ ವಿನೋದನಾದ
ಸುಗಾನಲೋಲ ಹರಿಯೆ
ದಾನವಾಂತಕ ದಜನುರಕ್ಷಕ
ಸುಜ್ಞಾನಿಗಳ ಧೊರಿಯೆ
ಮಾನವಾಧಿ ಪ ಮದನವಿಲಾಸ
ಮಾಧವ ಮುಕುಂದಾ
ನೀನೆ ದಯಮಾಡಿ ಸಲಹೊ
ಆನಂದಾ ನಿಜನಿತ್ಯ ಗೋವಿಂದಾ 2
ವಾರಿಧಿ ಬಂಧಿಸಿ ದೈತ್ಯರ
ಬಲವನೆಲ್ಲ ಮುರಿದಾ ಬಲವಂತಾ
ರಾವಣನ ಭಂಗವ ಬಡಿಸಿ ತಲೆಗಳ ಛೇದಿಸಿದಾ
ಸುಲಭದಿ ಅವನನುಜಗೆ ಪಟ್ಟವನಿತ್ತು
ಸತಿಯನೆ ತಂದಾ ಜಲಧಿಶಯನ
ಅಹೋಬಲ 'ಹೊನ್ನವಿಠ್ಠಲ’
ಚಲುವ ಸದಾನಂದಾ 3