ಗುರುರಾಜ ನುತ ವಿಠಲ | ಪೊರೆಯ ಬೇಕಿವಳಾ ಪ
ಕರುಣ ಪಯೋ ನಿಧಿಯೆ | ಶರಣು ಬಂದವಳಾ ಅ.ಪ.
ಮರುತ ಮತದಲ್ಲಿದ್ದು ಗುರು ಹಿರಿಯರಾ ಸೇವೆನಿರುತ ಗೈಯುವ ಮನವ | ಉಳ್ಳವಳೊ ಈಕೇಕರುಣಾ ಪಯೋ ನಿಧಿಯೇ | ಮರುತಾಂತರಾತ್ಮಕನೆಕರಪಿಡಿದು ಪೊರೆಯೋ | ಪ್ರಾರ್ಥಿಸುವೆ ಹರಿಯೇ 1
ಕಂಸಾರಿ ತವನಾಮ | ಅಮೃತವನೆ ಉಣಿಸುತ್ತಸಂಸಾರ ಶರಧಿಗೆ | ಪ್ಲವವೆನಿಸೊ ದೇವಸಂಶಯವು ರಹಿತಾಗಿ | ಹರಿಯೆ ಸರ್ವೋತ್ತಮನೆಶಂಸನದಿ ಮತಿಕೊಟ್ಟು | ಕಾಯೊ ಕಮಲಾಕ್ಷ 2
ಕೋವಿದೋತ್ತಂಸ ಹರಿ | ಗೋವರ್ಧನೋದ್ಧರನೆಗೋವಿದಾಂಪತಿಯೆ ಗುರು | ಗೋವಿಂದ ವಿಠಲಾನೀವೊಲಿಯದಿನ್ನಿಲ್ಲ | ತ್ರೈಭುವನದಿ ದೇವಭಾವುಕಳ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 3