ಎಲ್ಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀಎಲ್ಲ್ಯಾಡಿ ಬಂದ್ಯೋ ಎನ್ನ ಕಣ್ಣಮುಂದಾಡದೆ ಪ
ಆಲಯದೊಳಗೆ ನೀನಾಡದೆ ಚಿನಿ-ಪಾಲು ಸಕ್ಕರೆ ನೀನೊಲ್ಲದೆ ಚಿಕ್ಕಬಾಲರೊಡನೆ ಕೂಡ್ಯಾಡದೆ ಮುದ್ದುಬಾಲಯ್ಯ ನೀ ಎನ್ನ ಕಣ್ಣ ಮುಂದಾಡದೆ1
ಬಟ್ಟ್ಟಮುತ್ತಿನ ಬೊಗಸೆ ಕಂಗಳು ಪಣಿಯೊ-ಳಿಟ್ಟ ಕಸ್ತೂರಿ ತಿಲಕದಂದವುದಿಟ್ಟತನದಿ ಕೂಡ್ಯಾಡಲುಪುಟ್ಟ ಕೃಷ್ಣಯ್ಯ ನೀ ಎನ್ನ ಕಣ್ಣ ಮುಂದಾಡದೆ2
ಅಷ್ಟ ದಿಕ್ಕಲಿ ಅರಸಿ ಕಾಣದೆ ಬಹಳದೃಷ್ಟಿಗೆಟ್ಟೆನು ನಿನ್ನ ನೋಡದೆ ಇ-ನ್ನೆಷ್ಟು ಹೇಳಲಿ ಕೇಳಬಾರದೆ ರಂಗ-ವಿಠಲ ನೀ ಎನ್ನ ಕಣ್ಣ ಮುಂದಾಡದೆ3