ಕ್ಷಣತೋರಿ ಇಲ್ಲದಂತಾಗುವ ವಿಷಮ ಮಹ
ಕನಸಿನ ಮೋಹದಿಂ ಕೆಡಬೇಡ ಮನುಜ ಪ
ಹಲವು ಜನಮದಿ ಬಿದ್ದು ತಿಳಿಯದೆ ಇಹ್ಯಪರಕೆ
ತೊಳಲುತ ಬಳಲುತ ತಿರುತಿರುಗಿ
ಗಳಿಸಿದ ನರಜನುಮ ವಿವರಿಸಿ ನೋಡದೆ
ಕಳಕೊಂಡು ಬಳಿಕಿನ್ನು ಸುಲಭವಲ್ಲೆಲೆ ಖೋಡಿ 1
ನೀರಮೇಲಣ ಗುರುಳೆಯಂತೆ ಕಾಂಬುವ ಈ
ನರಕ ಮೂತ್ರದ ತನುಭಾಂಡವಿದು
ಅರಿಯದೆ ಮೋಹಿಸಿ ಪರಿಪರಿ ಕುಣಿಕುಣಿದು
ಪರಮ ರೌರವ ನರಕಕ್ಹೋಗ ಬೇಡೆಲೆ ಖೋಡಿ 2
ಜವನÀದೂತರು ಬಂದು ಕವಿದುಕೊಳ್ಳಲು ಆಗ
ಕಾಯುವರಾರಿಲ್ಲ ಕೈಪಿಡಿದು
ದಿವನಿಶೆಯೆನ್ನದೆ ಭವಹರ ಶ್ರೀರಾಮ
ದೇವನ ನೆರೆನಂಬಿ ಭವಮಾಲೆ ಗೆಲಿಯೊ 3