ಒಟ್ಟು 8 ಕಡೆಗಳಲ್ಲಿ , 2 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಎಂಥ ಸವಿ ಇಹ್ಯದು ಶ್ರೀಹರಿ ನಾಮ ಮಧುಗಿಂತ ಮಧುವಿಹ್ಯದು ಪ ಅಧಮ ಮನಸೇ ನೀನು ಸ್ವಾದ ಸವಿದುನೋಡೋ ಅಧಿಕ ಅಮೃತಕಿಂತ ಮಾಧುರ್ಯ ತುಂಬಿಹ್ಯದು ಅ.ಪ ಸುಧೆಗಿಂತ ಸುಧೆಯಿಹ್ಯದು ಮೃಷ್ಟಾನ್ನದ ಮೃದುಗಿಂತ ಮೃದುವಿಹ್ಯದು ವದನದೊಳಿಟ್ಟರೆ ವಿಧವಿಧದ್ಹಸುತೃಷೆ ಸದೆದು ಸದಮಲಸುಖ ಒದಗಿಸಿ ಕೊಡುವುದು 1 ಶುಚಿಗಿಂತ ಶುಚಿಯಿಹ್ಯದು ಹೆಚ್ಚಿಗೆ ಹೆಚ್ಚು ರುಚಿಗಿಂತ ರುಚಿಯಿದ್ಯದೋ ಉಚ್ಚಿಷ್ಟರಾಗದೆ ಬಚ್ಚಿಟ್ಟು ಸುರಿವರ್ಗೆ ನಿಶ್ಚಲಸುಖಪದ ಮೆಚ್ಚಿ ತಾ ಕೊಡುವುದು 2 ಶಾಶ್ವತಸುಖವೀಯ್ವುದೋ ಭವರೋಗ ಕೌಷಧ ಮಾಗಿಹ್ಯದೋ ದಾಸಜನರಿಗನುಮೇಷ ಸವಿಯುದೋರಿ ಪೋಷಿಸುತಿರುವುದು ಶ್ರೀಶ ಶ್ರೀರಾಮನಾಮ 3
--------------
ರಾಮದಾಸರು
ಗೆಲವ ನೀಡೆನಗೆ ಇಹ್ಯದ ಗೆಲವ ನೀಡೆನಗೆ ಪ ಗೆಲವ ನೀಡಿಯೆನ್ನ ಮಲಿನಬಿಡಿಸಿ ನಿನ್ನ ವರ ದಿವ್ಯಪಾದನಳಿನದೊಲುಮೆಯಿತ್ತು ಅ.ಪ ಎಡರು ಆವರಿಸಿದ ಕಾಲದಿ ದೈರ್ಯವ ದಯಮಾಡೊ ಸಡಗರಸಿರಿ ಬಂದ ಕಾಲದಿ ಶಾಂತಿ ವಿನಯ ಕೊಡೊ ಕಡುಜವ್ವನದಲಿ ದುಡುಕನುಕೊಡದಿರು ಪಿಡಿದು ನೇಮವನು ಬಿಡದ ಛಲವನಿತ್ತು 1 ಧರಣಿಯ ಸುಖಕಾಗಿ ಎನ್ನಿಂ ಪುಸಿಯ ನುಡಿಸದಿರೋ ಹರಣಪೋದರು ಪರರಿಗೆ ದೇಹಿಯೆನಿಸದಿರೋ ಪರಮಹರುಷದಿಂದ ಹರಿಶರಣರು ಮೆಚ್ಚಿ ಶಿರವದೂಗುವಂಥ ನಿರುತವರ್ತನೆಯಿತ್ತು 2 ಸತತದಿ ಕರ್ಣಕ್ಕೆ ಹರಿಕಥೆ ಕೀರ್ತನೆ ಕರುಣಿಸೊ ಪತಿತಪಾವನವೆನಿಪ ಭಜನಾನಂದವ ಪಾಲಿಸೊ ಕ್ಷಿತಿಯೋಳಧಿಕ ಸದುಗತಿ ಮೋಕ್ಷಾಧಿ ಪತಿ ಶ್ರೀರಾಮ ನಿಮ್ಮ ಪಾದಭಕ್ತಿಯಿತ್ತು 3
--------------
ರಾಮದಾಸರು
ಧನವಂತನಾದವನೆ ಘನವಂತ ಜಗದಿ ಧನವಂತನಾಗದವ ಹೆಣಕೆ ಕಡೆ ಇಹ್ಯದಿ ಪ ಧನಿಕನ ಮನೆಮುಂದೆ ದಿನಕರನ ಪ್ರಭೆಯಂತೆ ಜನಸಮೂಹ ನೆರೆಯುತಿಹ್ಯದನುದಿನವು ಬಿಡದೆ ಮಣಿದು ಅವನಿಗೆ ತಮ್ಮ ಮನೆಯ ಪರಿವ್ಯಿಲ್ಲದೇ ಮನ್ನಿಪರು ಅವನೊಚನ ಘನಭಕುತಿಲಿಂದ 1 ಸಿರಿಯಿಲ್ಲದವ ಬಂದು ಶರಣೆಂದು ಕರಮುಗಿಯೆ ಗರುವದಿಂ ಕೂಡ್ರುವರು ಶಿರವೆತ್ತಿ ನೋಡದೆ ತಿರುಕುದೆ ಇವನು ಹೆರಕೊಂಡು ತಿನಲಿಕ್ಕೆ ತಿರುಗುವನು ಎಂದೆನುತ ತಿರಿಸುವರು ಹೀನ 2 ಬಂಧುಬಳಗವುಯೆಂದು ಬಂದು ಕರೆಯಲವನ ಮುಂದೆ ನುಡಿಯುವರು ನಿನ್ನ ಮಂದಿರಕೆ ಬಂದು ಚಂದದಿಂದುಂಡೇವೇನೆಂದು ಜರೆವರು ಮನಕೆ ಬಂದ ತೆರದವನ ಮನನೊಂದಳಲುವಂತೆ 3 ಹತ್ತಿರದವರಾರು ಹತ್ತಿರಕೆ ಬಾರರು ಸತ್ತ್ಹೆಣನ ಕಂಡಂತೆ ಮತ್ತಿವನ ಕಂಡು ಅತ್ತಿತ್ತ ಪೋಗುವರು ಸುತ್ತಿ ಪಥಸೇರುವರು ಆರ್ಥಿಲ್ಲದವನಿರವು ವ್ಯರ್ಥ ಮತ್ರ್ಯದೊಳು 4 ಹರಿದ್ಹೋಗ ಸಿರಿಯೆಂದು ಅರಿಯದೆ ಗರುವದಿ ಚರಿಸುವ ಅಧಮಜನರಿರವೇನು ಜಗದಿ ಗರುವಿಕರ ಸಿರಿಗಿಂತ ಶರಣರ ಬಡತನವೇ ಪಿರಿದೆಲೋ ಶ್ರೀರಾಮ ಅರಿದು ನಾನು ಬೇಡ್ವೆ 5
--------------
ರಾಮದಾಸರು
ಪಡಕೋ ನೀನ್ಹಿಡಕೋ ರಂಗ ಶಾಯಿನಾಮವ ಕಡಕೋ ನೀ ದುಡಕೋ ನಿಖಿಲೇಶನ ಪ್ರೇಮ ಪ ಜನಮೆಚ್ಚಿ ವಂದಿಸಲು ನಿನಗೆ ಬಂದದ್ದೇನೋ ಜನದೂಷಿಸಳಿದರೆ ನಿನಗೆ ಕುಂದೇನೋ ಮನಮೆಚ್ಚಿ ನಡೆದು ಬಿಡದನುದಿನದಿ ಗಳಿಸುವಿ ನೀ ಚಿನುಮಯ ಮನುಮುನಿವಿನಮಿತರ ಧ್ಯಾನ 1 ಅಹುದೆಂದು ಇಹ್ಯದವರು ಭವಬಂಧ ತೊಲಗಿಪರೆ ಸಹಿಸದೆ ಅಲ್ಲೆಂದು ಭವಕೆ ನೂಕುವರೆ ಕುಹುಕಿಗಳ ಎದೆಮೆಟ್ಟೆ ಸಹಿಸಿಬಂದ ನಿಂದೆಗಳ ಪಡಿ ದೃಢದಿ ಅಹಿಶಾಯೆ ಅಡಿಭಕ್ತಿ 2 ದೂಷಣ ಭೂಷಣನುಮೇಷ ಸಮಭಾವಿಸಿ ನಾಶನೆನಿಸುವ ಜಗದ ವಾಸನೆಯ ಕಡಿದು ದಾಸಜನರೊಡೆಯ ಮಮಶ್ರೀಶ ಶ್ರೀರಾಮನಡಿ ಧ್ಯಾಸದೊಳಗಿಟ್ಟುಪಡಿ ಲೇಸೆನಿಪ ಮುಕ್ತಿ 3
--------------
ರಾಮದಾಸರು
ಮರುಳೆ ಸುಖ ನೀನೆನು ಪಡೆದಿ ನರಜನುಮ ತಾಳಿ ಇಹ್ಯದಿ ಪ ಪರಿಪರಿ ಜನುಮ ತಾಳಿ ಪರಮ ಬಂಧದೊಳೊರಲ ಉರುಳಿ ವರಮುಕ್ತಿ ದೊರೆವ ಕೀಲಿ ಸ್ಮರಿಸಿ ಬಂದಿ ಹರಿಯ ಬಳಲಿ 1 ಅರಿಯದೆ ಮತ್ತು ಭವಮಾಲೆ ಕೊರಳಿಗ್ಹಾಕಿಕೊಂಡಿ ದುರುಳ ಮರೆಯಮೋಸ ಕಾಂಬೋದೆಲ್ಲ ಹರಿದು ಪೋಗ್ವುದು ಸ್ಥಿರವಲ್ಲ 2 ಸಮಯ ಮಿಂಚಿಪೋದ ಬಳಿಕ ಕ್ರಮದಿ ಮತ್ತೆ ಸಿಗುವುದೆ ಮೂರ್ಖ ವಿಮಲ ಶ್ರೀರಾಮ ಪಾದಕಮಲ ನಮಿಸಿ ಪಡಕೊ ಮುಕ್ತಿಮಾಲಾ 3
--------------
ರಾಮದಾಸರು
ಹುಚ್ಚನಾಗಬೇಕೋ ಜಗದಿ ಹುಚ್ಚನಾಗಬೇಕೋ ಪ ಅಚ್ಚುತಾನಂತನ ನಿಶ್ಚಲ ಧ್ಯಾನದಿ ಇಚ್ಛೆಯಿಟ್ಟು ಜಗದೆಚ್ಚರ ನೀಗಿ ಅ.ಪ ಮರವೆ ಹರಿಯಬೇಕೋ ಪರಲೋಕ ದರಿವಿನೊಳಿರಬೇಕೊ ಪರಿಪರಿಯಿಂದಲಿ ಸಿರಿಯರಸನ ಪಾದ ಸ್ಮರಿಸಿ ಇಹ್ಯದರಿವು ತೊರೆದಾನಂದದಿ 1 ಪರನೆಲೆ ತಿಳಬೇಕೋ ಕಾಯದ ನರನೊದೆಯ ಬೇಕೊ ದುರಿತಾಕಾರಿಗಳ ಕಿರಿಕಿರಿಯಿಲ್ಲದೆ ಹರಿಹರಿಯೆನ್ನುತ ಪರಮಾನಂದದಿ 2 ಕಾಮ ಕಳೆಯಬೇಕೋ ಕಾಯದ ಪ್ರೇಮ ತೊರೆಯಬೇಕೊ ನೇಮದಿಂದ ಮಮಸ್ವಾಮಿ ಶ್ರೀರಾಮನ ನಾಮ ಭಜಿಸಿ ನಿಸ್ಸೀಮನಾಗಾನಂದದಿ 3
--------------
ರಾಮದಾಸರು
ಹೇಗೆ ಕಳೆಯಬೇಕೋ ಹೊತ್ತು ಹೇಗೆ ಕಳೆಯಬೇಕೋ ಪ ಹೇಗೆ ಕಳಿಲಿ ಭವಸಾಗರದಲಿ ಮನ ನೀಗದು ಚಂಚಲ ಸಾಗರನಿಲಯ ಅ.ಪ ಹುಟ್ಟಬಾರದಿತ್ತು ಇಹ್ಯದಿ ಹುಟ್ಟಿದ್ದೇ ತಪ್ಪಾಯಿತು ನಿಷ್ಠೆಲಿರಗೊಡದೆನ್ನ ದುಷ್ಟಮನಸು ಘಳಿ ಗಿಷ್ಟೆಲ್ಲ ಎಲ್ಲಿತ್ತು ಹುಟ್ಟದಿದ್ದರೆ ನಾನು 1 ಕ್ಷಣಕ್ಷಣಕೊಂದು ರೀತಿ ಮನಸಿನ ಗಣನೆಯಿಲ್ಲದ ಭ್ರಾಂತಿ ಜನಿಸಿದಂದಿನಿಂದ ಘನತರ ಕುಣಿಸ್ಯಾಡಿ ಜನರ ಸೇವೆಯೊಳು ದಣಿಸಿತು ಪಾಪಿ 2 ಅನುಗಾಲವು ಚಿಂತೆ ಜೀವಕೆ ಇನಿತು ಇಲ್ಲ ಸ್ವಸ್ಥ ತನುಮನಧನ ನಿನಗರ್ಪಿಸಿ ಬೇಡುವೆ ಘನ ಬೇಸತ್ತೆ ಪೊರೆ ಚಿನುಮಯ ಶ್ರೀರಾಮ 3
--------------
ರಾಮದಾಸರು
ಶ್ರೀ ಪ್ರಾಣೇಶ ದಾಸರ ತಾತ್ವಿಕಹಿನ್ನೆಲೆಯ ರಚನೆಗಳು219ಶ್ರೀಪೂರ್ಣಬೋಧಮತವಾ ನಂಬಿ |ಶ್ರೀ ಪತಿಯ ಒಲಿಸುವವರು ಕೇಳೀ ಪಆದಿಯಲಿಯಾದ ಚರಿತೆಯನ್ನುಪರ|ಮಾದರದಿಕೇಳಿಸುಜನಾ ||ರಾದವರು ಭಕುತಿಯಿಂದಾ ಮಹ ಪ್ರಳಯ |ವಾದ ತರುವಾಯ ಸೃಷ್ಟಿಯಾಗೇ 1ಸುರರೆಲ್ಲ ತಮ್ಮ ತಮ್ಮಾ ಸ್ಥಾನದಲಿ |ಸ್ಥಿರರಾಗಿ ಯುವರಾಜ್ಯಕೇ ||ಅರುಹನಾರೆನಲು ಅದಕೇ ಪೇಳಿದನು |ಹರಿಯು ಇಂತುಪಾಯವ ಕೇಳೀ 2ಒಂದು ದೇಹದಿ ಸರ್ವರೂ ಕ್ರಮನುಸಾರ- |ದಿಂದ ತೆರಳಿರಿ ಚೇತನಾ ||ಕುಂದುವದು ಆವನಿಂದಾ ಅವ ಶ್ರೇಷ್ಠ |ನೆಂದರಿವದೆಂದು ಸರಿದಾ ಕೇಳೀ 3ಹರಿಆಜÕದಂತೆ ತ್ಯಜಿಸೇ | ಕುಂಟನೂ |ಕುರುಡ ಮೂಕನು ಯನಿಸಿತೂ ||ಹಿರಿಯ ಪವಮಾನ ಬಿಡಲೂ ಎಲ್ಲರೂ |ಅರಿತರೂ ಕುಣುಪವೆಂದೂ ಕೇಳೀ 4ಮತ್ತೆ ಮೊದಲಂತೆಲ್ಲರೂ ವ್ಯಾಪಿಸಲು |ಬಿತ್ತು ಏಳಲಿಲ್ಲವದೂ ||ಸತ್ಯ ಸಂಕಲ್ಪ ಮರುತಾ ಸೇರಲದು |ತತ್ತಲಿಲ್ಲದೆ ಚಲಿಸಿತೂ ಕೇಳೀ 5ಅಂದಿನಾರಭ್ಯವಾಗೀ ತಿಳಿಸಿದನು |ಇಂದಿರೇಶನು ಈತನಾ ||ವಂದಿಪರಿಗೊಲಿವೆನೆಂದೂ ಇನ್ನಿದಕೆ |ಸಂದೇಹಉಂಟೆ ಬಂದೂ ಕೇಳಿ 6ಸ್ವಾಮಿ ಶ್ರೀ ರಾಮನಾಗೇ ಅವತಾರ |ವಾ ಮಾಡಿದನು ಮಾರುತಾ ||ಭೂಮಿಜೆಯದನುಜಒಯ್ಯಲೂ ಆ ಪುರಕೆ |ಪ್ರೇಮದಿಂದಲಿ ಚಿಗಿದನು ಕೇಳೀ 7ರಾಘವನ ಉಂಗುರವನೂ ವನದೊಳಗೆ |ಬ್ಯಾಗೆ ಇಂದಿರಿಗೆ ಕೊಟ್ಟೂ ||ಆಗಾ ಪೊಳಲನೇ ಸುಟ್ಟೂ ಹಾರಿತ್ವರ|ರಾಗಟಿಯ ಒಡಿಯಗಿತ್ತಾ ಕೇಳೀ 8ಇಂದ್ರಜಿತು ಮೋಹನಾಸ್ತ್ರಾ ಬಿಡಲಾಗಿ |ಅಂದಗೆಟ್ಟಿತು ಕಪಿ ಕುಲಾ ||ಇಂದಿರೇಶನ ಆಜÕದಿಂ ಆಗ ತ್ವರ- |ತಂದ ಸಂಜೀವನವನೂ ಕೇಳೀ 9ಅನಿಮಿಷರುಕಪಿಗಳಾಗೀ ನಿರುತ ರಾ- |ಮನ ಭಜಿಪರೀ ಕೆಲಸಕೇ ||ಅನುಕೂಲರೊಬ್ಬರಲ್ಲಾ ಒಬ್ಬ ಅಂ- |ಜನಿ ಸುತನೆ ಸೇವಿ ಮಾಡ್ದಾ ಕೇಳಿ 10ಉಪಕಾರ ಒಂದಕೆನ್ನಾ ಕೊಟ್ಟ ಮ್ಯಾ- |ಲೆ ಪರಿಮಿತ ಸೇವಿಗುಚಿತಾ ||ಸು ಪರೀಕ್ಷಿಸಿದರು ಕಾಣೇ ಭಳಿರೆ ಯಂ- |ದ ಪರಾಜಿತನು ಮೊಗಳಿದಾ ಕೇಳೀ 11ಈ ವಾಯು ಒಲಿದನೆಂದೂ ಒಲಿದ ಸು- |ಗ್ರೀವ ವಿಭೀಷಣಗೆ ರಘುಜಾ ||ಶ್ರೀವರನೆ ಕೃಷ್ಣನಾಗೀ ಅವತರಿಸೆ |ಐವರೊಳು ಭೀಮನಾದಾ ಕೇಳೀ 12ತರಣಿಮೊಮ್ಮಗನ ಸೇವೀ ಈ ವೃಕೋ- |ದರಮಾಳ್ಪನೆಂದುಶೌರಿ||ನರನ ರಥವನು ನಡಿಸಿದಾ ಇಲ್ಲದಿರೆ |ಥರವೆ ಇದು ಪಾಂಡವರಿಗೇ ಕೇಳೀ 13ಜೀವೇಶರೊಂದೆ ಎಂದೂ ವಾದಿಗಳು |ಭಾವಿಸಿರೆ ಮಧ್ವಮುನಿಯೂ ||ತಾ ವಿರಚಿಸಿ ಸುಗ್ರಂಥವಾ ನಿರ್ದೋಷ |ಗೋವಿಂದನೆಂದರುಹಿದಾ ಕೇಳೀ 14ಈತ ಮಾಡಿದ ಚರಿತೆಯಾ ಕಡೆಯಾಗಿ |ನಾ ತುತಿಸಲಾರೆ ಸ್ವಲ್ಪಾ ||ವಾತಸ್ಮರಣಿಯ ಮಾಡಲೂ ವೈಕುಂಠ |ಆತು ಇಪ್ಪದು ತಪ್ಪದೂ ಕೇಳೀ15ದೇಶದೊಳುತುಂಬಿಇಹ್ಯದೂ ಶ್ರೀ ಭಾರ- |ತೀಶ ಮಾಡಿದ ಮಹಿಮಿಯೂ ||ಲೇಶವಾತನ ಚರಿತ್ರೇ ಸ್ಮರಿಸೆ ಪ್ರಾ- |ಣೇಶ ವಿಠ್ಠಲ ಒಲಿವನೂ ಕೇಳೀ 16ಪ್ರಾಣದೇವರ ಕಥಿಯನು ಕೇಳಿದರೆ |ತಾನೆ ಇಹಪರದಿ ಬಿಡದೇ ||ಪ್ರಾಣೇಶ ವಿಠಲ ಕಾಯ್ವಾ ಇದಕೆ ಅನು- |ಮಾನಲೇಸಿನಿತವಿಲ್ಲವೂ ಕೇಳೀ13
--------------
ಪ್ರಾಣೇಶದಾಸರು