ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನು ಎಂಬೊದೆ ದೊಡ್ಡದು ನೀನೆಲ್ಲಿಹೆಯೊ ನಾನೆಲ್ಲಿ ಕಾಣಲಿ ಪ. ನಾನೆಂಬೊ ವ್ಯಾಪಾರ ನೀನೆ ಮಾಡಿಹೆ ಗಾನಲೋಲ ಸರ್ವರಂಗಲಿ ನಾನೇ ಇಹೆನೆಂದು ಅ.ಪ. ಸರ್ವರೊಳಗೆ ನಾನೆಂಬೊದೇ ಇರಲಾಗಿ ಸಾರ್ವಜನಿಕ ನೀನೆಲ್ಲಿಹೆಯೊ ಸರ್ವಧಿಕಾರಿ ನೀನೇ ಎಂಬ ವಿಬುಧರ ಸರ್ವಕಾಲದಿ ಸರ್ವ ಸುರರ ಸಹಿತಿಹೆ ನಾನು 1 ಮಿಂಚಿದ ಪಾಪವ ಮಾಡುವ ಮನುಜರ ವಂಚಕತನದಲಿ ದೇಹದೊಳಿಹೆ ನೀನು ಸಂಚಿತಾರ್ಥದ ಪುಣ್ಯವ ಗಳಿಸಿದ ಭಕ್ತರ ಮಿಂಚಿನ ಹುಳದಂತೆ ಕಂಚಿ ವರದ ಇಹೆ 2 ರಘುಪತೆ ರಾಘವನೆನುತ ಶ್ರೀ ಶ್ರೀನಿವಾಸನ ಬಗೆ ಬಗೆ ಸ್ತುತಿಸದೆ ಅಧಮರಿಗಿಲ್ಲ ಅಘಹರ ಗೋಪಿಗೆ ಮಿಗೆಯಾಟ ತೋರಿಹೆ ನಗಧರ ಅಳಗಿರಿ ಸೊಗಸಿನ ಚೆನ್ನಿಗ ನಾನು 3
--------------
ಸರಸ್ವತಿ ಬಾಯಿ
ಶ್ರೀ ಧೀರೇಂದ್ರರು ಚಾರು ನಿಮ್ಮಯ ಚರಣತೋರಿಸುದ್ಧರಿಸಬೇಕೊ ಪ. ಆರು ಇವನೆಂದು ನೀವ್ ಗಾರುಮಾಡದಲೆನ್ನ ಸಾನುರಾಗದಿ ಪೊರೆಯಬೇಕೊ ಸ್ವಾಮಿ ಅ.ಪ. ವರದಾ ತೀರದಿ ನಿಂದು ವರ ಕೊಡಿವೀಯೆಂದು ಘನಗರ್ವ ನಿನಗ್ಯಾತಕೊಸುರಪತಿಯ ಬಲದಲ್ಲಿ ಇಹೆನೆಂದು ನೀ ಬಲು ಜರಿದು ನೋಡಲಿ ಬ್ಯಾಡವೊಆರುಗತಿಯಿಲ್ಲವೆಂದೀರ ನಿನ್ನೆಡೆ ಬರಲು ಏರಿ ಕೂಡ್ರುವುದುಚಿತವೇಸಾರಿ ಹೇಳುವೆ ನಿನಗೆ ಚೋರದಾಸನು ನಾನು ಘೋರರೂಪದಿ ಬಂದು ತೋರೋ ಸ್ವಾಮಿ 1 ರಘುಕುಲತಿಲಕನ ಭಕ್ತಿಪಾಶದಿ ಕಟ್ಟಿಚಕ್ರವರ್ತಿಯೆನಿಸಿ ಗೋಕುಲದ ಗೊಲ್ಲನ ಯುಕುತಿಯಲಿ ನೀನೊಲಿಸಿದ್ಯೊಶಕ್ತಿಯಿಂ ಕಲಿಯುಗದಿ ಧೀರೇಂದ್ರ ಪೆಸರಿನಿಂ ದುರಿತಗಳ ಕಳೆಯುವಿಯೊಧಿಃಕರಿಸಿ ವಾದಿಗಳ ದೇಶದೊಳ್ ಚರಿಸಿದ ವಸುಧೀಂದ್ರ ಸಂಜಾತ ಪೊರೆಯೆ ಸ್ವಾಮೀ 2 ಹೆಣ್ಣಿನಾಶೆಗೆ ಬಿದ್ದು ಹೊನ್ನು ಸ್ಥಿರವೆಂದು ನಾ ಮಣ್ಣುಪಾಲಾದೆನೊತನುವು ತನ್ನದು ಎಂಬ ಭಿನ್ನ ಜ್ಞಾನವನೇ ಹೊಡೆದೋಡಿಸೆಮಾನ್ಯವಂತರ ಸಂಗ ಇನ್ನು ಮೇಲಾದರೂ ದಯಪಾಲಿಸೊಘನ್ನ ಮಹಿಮಾ ತಂದೆವರದವಿಠಲನಲ್ಲಿ ಜ್ಞಾನದಿಂ ಭಕ್ತಿ ವ್ಯೆರಾಗ್ಯವನೆ ಈಯೋಸ್ವಾಮಿ 3
--------------
ಸಿರಿಗುರುತಂದೆವರದವಿಠಲರು