ಕೇಳೈ ಈಗಾ ಈ ಕರ್ಮಯೋಗಾ ಕಳೆವುದು ಸಂಸಾರರೋಗಾ
ಬಂಧಕ್ಕೆ ಈ ಕರ್ಮವೇ ಕಾರಣಾಗಿ
ಬಂದಿತು ಜನುಮಾ ಅನಿವಾರ್ಯವಾಗಿ
ಈ ಬಂಧವ ನೀಗಿ ಚಿರಶಾಂತಿಗಾಗಿ
ಈ ಯೋಗ ಬೆರಸಿ ಇದೆ ಕರ್ಮವೆಸಗಿ
ಅರ್ವಿನಿ ಫಲವಾ ಪರಮಾತ್ಮಭಾವಾ
ತಳೆಯುವದೆ ಈ ಕರ್ಮಯೋಗಾ ಕಳೆವುದು 1
ವಿಷಯಾಭಿಲಾಷಾ ನೀಗಿಸಿ ಆಶಾ
ಹರಿಸುವದಿದುವೇ ನಿಷ್ಕಾಮ ಕರ್ಮ
ಮನಸಿನ ಮಲಿನಾ ಕಳೆದೆಲ್ಲ ಹಸನಾ
ಮಾಳ್ಪುದು ಇಹುವೇ ಜಿಜ್ಞಾಸೆಯೆನ್ನಾ
ಹುಟ್ಟಿಸಿ ಜ್ಞಾನಾ ಕೇಳ್ವ ಭಾನಾ
ಉದಿಸುವುದು ವೈರಾಗ್ಯಭಾಗ್ಯ ಕಳೆವುದು 2
ವಿಷಧಾತುಗಳ ತಂದು ಪುಟಹಾಕಿಕೊಂಡು
ಹೆಸರಾದ ಸಿದ್ಧೌಷಧಿ ಮಾಡಿಕೊಂಡು
ಉಪಯೋಗ ಕಂಡು
ಜಡದೇಹಗಳ ಬೇನೆ ನೀಗಿಪತೆರದಿ
ಈ ಕರ್ಮವಿಷವಾ ಪುಟಹಾಕುತಿಹುದೀ
ನಿಷ್ಕಾಮತನದೀ
ಈ ಸೂಕ್ಷ್ಮದೇಹಾ ರೋಗ ಕಳೆವಾ
ಘನವಾದ ಪರಮೋಪಾಯಾ
ಇದೇ ಪೇಳ್ದೆ ಗುರುಶಂಕರಾರ್ಯ3