ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನ ಘನ ತನ್ನೊಳಗೆ ತುಂಬಿಹದು ನಿನ್ನೊಳಗೆ ದ್ರುವ ಓದಿ ಕೇಳಿ ಮರುಳಾದ್ಯೊ ಮನವೆ ಸಾಧಿಸಲಿಲ್ಲ ಸ್ವರೂಪ ವೇದವೋದಿ ವಿವದಕೆ ನೀನು ಸಾಧಿಸಿದೊ ಬಲುಕೋಪ ಭೇದವಿಡಿದು ಬಾಧೆಗೆ ಗುರಿಯಾಗಿ ಆದಿ ನಿನಗೆ ನೀ ಪಾಪ ಘನಗುರು ಕುಲದೀಪ 1 ದೇಹದ ಒಳಗಿನ ದೇವರ ತಿಳಿಯದೆ ಬಾಹ್ಯ ರಂಜನಗೆದೆರದ್ಯೊ ಸೋಹ್ಯವರಿಯದೆ ಶ್ರೀಹರಿ ಭಕ್ತಿಯ ಅಹಂಭಾವದಿ ಮೆರೆದ್ಯೊ ದೇಹಾಭಿಮಾನದಲಿ ಸೋಹಂಭಾವದ ವಾರ್ತೆಯ ಜರಿದ್ಯೊ ಸವಿ ಸುಖವನು ಮರೆದ್ಯೊ 2 ಕನಸುದೋರುವ ಜನ ಪ್ರಪಂಚವ ನೆನೆಸಿ ಬಯಸುವದ್ಯಾಕೆ ಖೂನ ತಿಳಿಯದೆ ಸತ್ತು ಹುಟ್ಟಿ ಜನಿಸಿ ಬಾಹುದು ಯಾಕೆÉ ಹೀನಯೋನಿಯ ಮುಖದಲಿ ಬೀಳುವ ದಣುವಿಕಿ ನಿನಗಿದು ಬೇಕೆ ಅನುದಿನ ನಿನಗಿದು ತಾ ಸಾಕೆ 3 ಹಾದಿತಪ್ಪಿ ನಡೆವದು ವೇದಾಂತದ ಇದು ನಿನಗುಚಿತೆ ಸಾಧು ಸಜ್ಜನರನುಸರಿಸದೆ ತಾ ಇಹುದೊಂದು ಸ್ವಹಿತೆ ಗಾದಿಯ ಮಾತೆ ಬಂದುದು ಪುರುಷಾರ್ಥೆ 4 ಶರಣ್ಹೊಕ್ಕರ ಕರುಣಿಸಿ ನೋಡುವ ಎರಡಿಲ್ಲದೆ ಗುರುನಾಥ ಕರವಿಡಿದು ಪಾರನೆ ದಾಟಿಸುವಾ ಸುರಮುನಿಜನ ಸೇವಿತ ತರಣೋಪಾಯದ ಸಾಧನದೋರುವ ತರಳ ಮಹಿಪತಿ ದಾತ ಮನವೆ ನಿನಗಿದು ಸುಪಥ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇತ್ತೆ ಏತಕ್ಕೆ ಈ ನರಜನ್ಮವ ಸತ್ಯ ಸಂಕಲ್ಪ ಹರಿ ಎನ್ನ ಬಳಲಿಸುವುದಕೆ ಪ. ಬಂಧುಬಳಗವ ಕಾಣೆ ಇಂದಿರೇಶನೆ ಭವದಿ ಬೆಂದು ನೊಂದೆನೊ ನಾನು ಸಿಂಧುಶಯನ ಬಂದ ಭಯಗಳ ಬಿಡಿಸಿ ನೀನೆ ಪಾಲಿಸದಿರಲು ಮಂದಮತಿಗೆ ಇನ್ನು ಮುಂದೆ ಗತಿ ಏನೊ 1 ಕಾಣದಲೆ ನಿನ್ನನು ಕಾತರಿಸುತಿದೆ ಮನವು ತ್ರಾಣಗೆಡÀುತಲಿ ಇಹುದೊ ಇಂದ್ರಿಯಗಳೆಲ್ಲ ಪ್ರಾಣಪದಕನೆ ಸ್ವಾಮಿ ಶ್ರೀನಿವಾಸನೆ ದೇವ ಜಾಣತನವಿದು ಸರಿಯೆ ಫಣಿಶಾಯಿಶಯನ 2 ಸಾಧನದ ಬಗೆಯರಿಯೆ ಸರ್ವಾಂತರ್ಯಾಮಿಯೆ ಮಾಧವನೆ ಕರುಣದಲಿ ಕಾಯಬೇಕೊ ಹಾದಿ ತೋರದೊ ಮುಂದೆ ಮುಂದಿನಾ ಸ್ಥಿತಿಯರಿಯೆ ಛೇದಿಸೊ ಅಜ್ಞಾನ ಹೇ ದಯಾನಿಧಿಯೆ 3 ಸರ್ವನಿಯಾಮಕನೆ ಸರ್ವಾಂತರ್ಯಾಮಿಯೆ ಸರ್ವರನು ಪೊರೆಯುವನೆ ಸರ್ವರಾಧೀಶ ಸರ್ವಕಾಲದಿ ಎನ್ನ ಹೃದಯದಲಿ ನೀ ತೋರೊ ಸರ್ವ ಸಾಕ್ಷಿಯೆ ಸತತ ಆನಂದವೀಯೊ 4 ಆನಂದಗಿರಿನಿಲಯ ಆನಂದಕಂದನೆ ಆನಂದ ಗೋಪಾಲಕೃಷ್ಣವಿಠ್ಠಲಾ ಆನಂದನಿಲಯ ಶ್ರೀ ಗುರುಗಳಂತರ್ಯಾಮಿ ನೀನಿಂದು ಸರ್ವತ್ರ ಕಾಯಬೇಕಯ್ಯ 5
--------------
ಅಂಬಾಬಾಯಿ
ಗುಬ್ಬಿಯಾಳೊ ಗೋವಿಂದ ಗೋವಿಂದಾ ಗೋವಿಂದ ಗೋವಿಂದಾನೆಂದು ನೆನಯಿರೊ ಗುಬ್ಬಿಯಾಳೊ ಪ. ಕ್ಲೇಶ ಪರಿಹಾರವು ಗುಬ್ಬಿಯಾಳೊ ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ 1 ಮಾಧವನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ ನಾಶನವು ಗುಬ್ಬಿಯಾಳೊ 2 ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೆ ಗುಬ್ಬಿಯಾಳೊ ಇಹುದೊ ಗುಬ್ಬಿಯಾಳೊ 3 ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ 4 ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ 5 ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ 6 ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ ವಾಸುದೇವನ ದಯದಿಂದ ವಂಶಉದ್ಧಾರವೊ ಗುಬ್ಬಿಯಾಳೊ 7 ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ ಅನಿರುದ್ಧನ [ಸೇವಿಸೆ ಪುನೀತರಹೆವೊ] ಗುಬ್ಬಿಯಾಳೊ 8 ತಿಳಿಯಿರೊ ಗುಬ್ಬಿಯಾಳೊ ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ 9 ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ 10 ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ ಕ್ಷಮಿಸುವನೊ ಗುಬ್ಬಿಯಾಳೊ 11 ಹರಿನಾಮಾಮೃತಕೆ ಸರಿಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ12 ಈ ಗುಬ್ಬಿ ಪಾಡುವರಿಗೆ ಇಹಪರವು ಸಂತತವು ಗುಬ್ಬಿಯಾಳೊ ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ 13 ನಿತ್ಯ ಮರೆಯದೆ ನೀ ನೆನೆಮನವೆ ನಿತ್ಯ ಮನವೆ ಗುಬ್ಬಿಯಾಳೊ 13
--------------
ವಾದಿರಾಜ