ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ
ಮುಕ್ಕಣ್ಣಗೀವರಂತೆ |
ವಿಗಡ ಮುನಿಯ ಮಾತಾ
ಲೆಕ್ಕಿಸಿ ಮದುವೆಯ ಮಾಡಿಕೊಡುವನಂತೆ 1
ತಲೆಯೆಲ್ಲಾಜಡೆಯಂತೆ | ಅದರೋಳಗ ಜಲವಂತೆ |
ತಿಲಕ ಪಣೆಗೆ ಬಾಲಚಂದ್ರನಂತೆ |
ಹೊಳೆವ ಕಿಡಿಗಣ್ಣಂತೆ | ನಂಜುಗೊರಳನಂತೆ |
ಸಲೆರುಂಡ ಮಾಲೆಯಾ | ಸರವ ಹಾಕಿಹನಂತೆ | 2
ಉರಗಾಭೂಷಣನಂತೆ | ಭಸ್ಮಲೇಪನನಂತೆ |
ಕರಿಯ ಚರ್ಮಾರಂಬರದುಡಿಗೆಯಂತೆ |
ನಿರುತ ಡಮರು ಬಾರಿಸುವ ಜೋಗಿಯಂತೆ 3
ಅಡವಿ ಗಿರಿಗಳಲಿ ಇಪ್ಪನಂತೆ |
ಒಡನೆ ಪುಲಿದೊಗಲದ ಹಾಸಿಗೆ ಇಹುದಂತೆ |
ನುಡಿಗೊಮ್ಮೆ ರಾಮ ರಾಮಾಯಂಬ ಸ್ಮರಣೆಯಂತೆ 4
ಆರೊ ಇಲ್ಲದ ಪರದೇಶಿಯಂತೆ |
ಭವ |ತಾರಕ ಶಿವನೆಂದು ಮೊರೆಯ ಹೊಗಬೇಕಂತೆ 5