ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ದೇಹ ಬಲು ಸಾಧನ ಭೂದೇವ ಜನ್ಮದಲಿ ಬಂದ ಕಾರಣ ನಮಗೆ ಪ ಶ್ವಸನ ಮತವೆ ಪೊಂದಿ | ನಸು ಚಿತ್ತದಲಿ ಯಿದ್ದು | ವಿಷಯಂಗಳೆಲ್ಲ ನಿರಾಕರಿಸಿ | ಋಷಿಮಾರ್ಗದಲಿ ನಡೆದು ವಿಹಿತಾರ್ಥದ ಸತ್ಯ | ನಿತ್ಯ ಸಜ್ಜನರ ಒಡಗೂಡು1 ಬಾಹುದ್ವಯದಲಿ ಶಂಖ ಚಕ್ರ ಧರಿಸಿ ಉ | ತ್ಸಾಹದಲಿ ದ್ವಾದಶ ಪುಂಡ್ರಗಳನಿಟ್ಟು | ಸ್ನೇಹಭಾವದಲಿ ಸತತ ಭಕುತಿಯ ಮಾಡು | ಇಹಲೋಕದಲಿ ಇಷ್ಟಾರ್ಥ ಬೇಡುತಲಿರು 2 ಅನಿಷಿದ್ದ ಕರ್ಮಗಳು ಆಚರಿಸಿ ಭೂತದಯ | ಅನುಗಾಲ ಇರಲಿ | ಬಂಧುಗಳ ಕೂಡಾ | ಮನಮೆಚ್ಚು ನಡೆದು ನೀ ಮಂದಮತಿಯನು ಕಳೆದು | ಘನಜ್ಞಾನದಲಿ ನಡೆದು ಗುಣವಂತನಾಗು 3 ಧರ್ಮೋಪದೇಶವನೆ ಮಾಡುತಲಿರು ನೀನು | ಪೇರ್ಮೆಯುಳ್ಳವನಾಗು ಪೃಥವಿಯೊಳಗೆ | ನಿರ್ಮತ್ಸರನಾಗು ವೈಷ್ಣವ ಜನರ ಕೂಡ | ದುರ್ಮತವ ಪೊಂದದಿರು ಅನಂತ ಜನ್ಮಕ್ಕೆ 4 ಕರ್ಣ ತುಲಸೀ ದಳ | ಬೆರಳಲ್ಲಿ ಪವಿತ್ರದುಂಗರವನಿಟ್ಟು | ಪರಮ ವಿರಕುತಿಯಲಿ ದೇಹವನು ದಂಡಿಸುವ | ಹಿರಿದಾಗಿ ಭಾಗವತನಾಗು ವ್ಯಾಕುಲವ ಬಿಡೋ 5 ವದನದಲಿ ಹರಿಸ್ಮರಣೆ ಮರೆಯದಿರು ಕಂಡಕಡೆ | ಉದರಕ್ಕೆ ಪೋಗಿ ಚಾಲ್ವಯದಿರು ಅಧಿಕರ ಆಪೇಕ್ಷಗಳ ಮಾಡದಿರು ಹರಿಯಿತ್ತ ದದು ಭುಂಜಿಸಿ | ಬಂದ ಕಾಲವನು ಹಿಂಗಳಿಯೊ 6 ತೀರ್ಥಯಾತ್ರೆಯ ಚರಿಸು ಕಥಾಶ್ರವಣವನು ಕೇಳು | ಅರ್ಥವನೆ ಬಯಸದಿರು ಬಾಕಿ ಬಸಿದು ವ್ಯರ್ಥ ನಿನ್ನಾಯುಷ್ಯ ಪೋಯಿತೆಂದೆನಿಸದೆ | ಪ್ರಾರ್ಥನೆಯ ಮಾಡು ಪ್ರತಿಕ್ಷಣಕೆ ಶ್ರೀ ಹರಿಚರಣ 7 ಪರಿಯಂತ | ಮಿತ ಆಹಾರ ಮಿತ ನಿದ್ರಿ ಮಿತ ಮಾತನು | ಸತತ ಮೀರದಲಿರು ಶೋಕಕ್ಕೊಳಗಾಗದಿರು | ಸತಿ ಸುತರು ಎಲ್ಲ ಶ್ರೀ ಹರಿಗೆ ಸೇವಕರೆನ್ನು 8 ಜಾಗರ ಗಾಯನ | ಮರಳೆ ಮರಳೆ ಮಂತ್ರ ಪಠನೆಯಿಂದ | ಧರೆಯೊಳಗೆ ಪುಣ್ಯವಂತನಾಗಿ ಸರ್ವದ | ಇರಬೇಕು ಇಹಪರಕೆ ಲೇಸು ಎನಿಸಿಕೊಂಡು9 ಸುಖ ದು:ಖ ಸೈರಿಸುತ ಅರಿಗಳಿಗೆ ಭಯಪಡದೆ | ನಖಶಿಖವಾಗಿ ಆನಂದ ವಿಡಿದೂ | ಮುಖದಲ್ಲಿ ಹರಿನಾಮ ಅಮೃತವೆ ಸುರಿಸುತ್ತ | ಸಖರೊಳಗೆ ಲೋಲಾಡು ಹರಿಗುಣವ ಕೊಂಡಾಡು10 ಸಕಲಾಧಿಷ್ಠಾನದಲಿ ಹರಿಯೆ ಲಕುಮಿ ತತ್ವ | ಕರ ಮುಗಿದು ತಿಳಿದು | ಮುಕುತಿ ಕರದೊಳಗಿಡು ವಿಜಯವಿಠ್ಠಲರೇಯನ | ವಿಕಸಿತ ಮನದಲ್ಲಿ ಭಜಿಸು ಬಲು ವಿಧದಿಂದ11
--------------
ವಿಜಯದಾಸ
ಕಾಯ ನೆಚ್ಚಿ ಮಾಯಾ- ಡಂಬರಕೊಳಗಾಗಿ------ದುರ್ಜನರು ಪ ಎಂಬತ್ತು ನಾಲ್ಕು ಲಕ್ಷ ಜೀವರಾಶಿಗಳ ಇಂಬಿನಲ್ಲಿ ಹುಟ್ಟಿ ವ್ಯಥೆಯ ಬಿಟ್ಟು ಸಂಭ್ರಮದಿ ಸುಖದು:ಖ ಸಂಸಾರದೊಳು ಬಿದ್ದು ಕುಂಭಿಣೀ ದೇಹಮರೆತು ಕಡೆಗೆ ಹೋಗ್ವದು ತಿಳಿದು 1 ಈ ಶರೀರದ ಭೋಗ ಎನಗೆ ಶಾಶ್ವತವೆಂದು ಏಸೊ ಪರಿಯಿಂದ ಹಾರೈಸಿ ಇನ್ನೂ ಆಸೆಯಿಂದ ನೀ ಬಹಳ ಕಾಲ ಮೃತರಾಗುವದು ತಿಳಿದು 2 ನಿಶ್ಚಯವಿಲ್ಲದ ದೇಹಗಳು ನಿಜವೆಂದು ಮಂದನಾಗಿ ಅಚ್ಯುತ 'ಹೆನ್ನೆವಿಠ್ಠಲ’ನ ಅರಿಯದಿನ್ನು ಎಚ್ಚರಿಕೆಯನು ತಪ್ಪಿ ಇಹಲೋಕವನು ತ್ಯಜಿಸಿ
--------------
ಹೆನ್ನೆರಂಗದಾಸರು
ಬೇಕಿಲ್ಲ ಬೇಕಿಲ್ಲ ಇಹಲೋಕಾಡಂಬರವು ಸಾಕೀ ನಿನ್ನನು ಧ್ಯಾನಿಪ ಪರಲೋಕ ಜ್ಞಾನವನು ಪ. ಶ್ರೀಪ ಕರುಣಿಸಿ ನಿನ್ನ ಸ್ವಂತ ಜನರನ್ನೂ ಕಾಪಾಡೊ ದೊರೆಯೆ ಅ.ಪ. ನಿನ್ನ ಭಕ್ತರ ಸಂಗವನ್ನು ಕೃಪೆದೋರಿ ಸಲಹೊ ಚನ್ನ ಕೇಶÀವರಾಯ ಇನ್ನು ಕೃಪೆ ಮಾಡೊ 1 ಯನ್ನಪರಾಧಗಳನ್ನು ಎಣಿಸುವರೆ ದೇವ ಸನ್ನುತ ಚರಿತ ಭಕ್ತ ಸನ್ಮಾನಯುತ ನಿನ್ನ ಮಹಿಮೆಗಳನ್ನು ವರ್ಣಿಸಲಳವೆ ಮುನ್ನ ಶೇಷಾನಿಂದ ಸೇವ್ಯವಾಗಿರಲೂ ಯನ್ನಿಂದಾಡಿಶಿ ನೀನು ಸನ್ಮಾನಕೊಂಡು ನಿನ್ನಾ ಭಕ್ತಳೆಂದು ಸ್ತುತಿಗೊಂಡು ನಲಿನಲಿದೆ 2 ಯೆನ್ನಿಂದೇನಹುದೋ ಮನ್ಮನದೊಡೆಯ ಚನ್ನ ಶೇಷಾದ್ರಿನಿವಾಸ ಘನ್ನ ಶ್ರೀ ಶ್ರೀನಿವಾಸ ನೀನೇ ಆಡಿಸುತ ನೀನೇ ಮಾಡಿಸುತ ದಾಸಿ ನೀನಾಗಿರೆ ನಾನೇನ ಬಲ್ಲೆನೊ 3
--------------
ಸರಸ್ವತಿ ಬಾಯಿ
ನಂಬಿ ನೀ ಕೆಡದಿರು ಇಹಲೋಕಸುಖವೆಂಬ ಕಂಬಳಿಯೊಳಬುತ್ತಿ ನಿಂಬೆಲೆಯಾಗಿನೂಟ ಪರಲೋಕ ಸುಖಸಾರವೆಂಬೋದೆ ನಿಜ ಭಕುತಿನ್ಯಾಯವಿಲ್ಲದೆ ನಿನ್ನಕಾಯಪೋಷಣೆಂಬೋದುದಣಿಸಿ ತನ್ನ ದೇಹ ಧನವ ಕೂಡಿಸುವುದುಹರಿಯರ್ಪಣವಿಲ್ಲದವಕರ್ಮಮಾಡಲುಪರಪೀಡಕನಾಗಿ ಇದ್ದವನ ಜನ್ಮಆಸೆ ಅರ್ಥದಲ್ಲಿಟ್ಟು ಹರಿಯ ಸೇವಿಸುವಂಥಹಲವು ಸಾಧನಗಳ ಮಾಡುತಲಿದ್ದರೇನುಎಷ್ಟು ಸಾಧನಗಳು ಕೂಡಿದ್ದರೇನಿನ್ನುಗುಣತ್ರಯಕನುಸಾರ ಮಾಡಿದ ಕರ್ಮಗ-ಗುರುಉಪದೇಶವೆಂಬುದೆ ಮಹಾದುರ್ಲಭ
--------------
ಗೋಪಾಲದಾಸರು
ಸಂತೆ ಮಾಡಿದರೆ ಸಂಸಾರ ಸಂತೆ ಮಾಡಿದನೆಸಂತೆಯವರ ನಂಬಿದರೆ ಕೆಟ್ಟುಹೊಗುವೆ ಕಾಣೆಪತಂದೆತಾಯಿ ನೆವಗಳಿಂದ ಸಂತೆಗೆ ಬಂದೆಬಂದು ಕೂಡಿದನುಗಂಡಜೋಡಾದೆನು ಎಂದೆಬಂದನೀಗ ಮಗೆನೆಂಬುವನು ಸೊಸೆಯು ಆತನ ಹಿಂದೆಬಂಧುಬಳಗ ಬಹಳಾಯಿತು ನೆರೆದುದು ಸಂತೆಯು ಮುಂದೆ1ಸಂತೆ ಮಾಡಿಕೊಂಡು ಗಂಡನೀಗ ತೆರಳಿದನೆಅಂತು ಸಂತೆಯ ಮಾಡಿ ಮಗನೀಗ ಹೋಗಿಹನುಇದಕು ಮೊದಲೇ ಸೊಸೆಯ ಇಹಲೋಕ ಬಿಟ್ಟಿಹಳುಇಂತು ಸಂತೆಯ ಮಾಡಿ ಬಯಲಿಗೆ ಬಿದ್ದೆನೇ2ದಾರಿಕಾರರೆಲ್ಲ ಸರಿದು ಸಂತೆ ಬಯಲಾಗೆಆರಿಗಾರು ಇಲ್ಲವಾಗಿ ನನ್ನ ಬಿಟ್ಟು ಹೋಗೆಧೀರ ಚಿದಾನಂದಗುರುಕೈಯ ಹಿಡಿದ ಬೇಗನೀರೆ ಅಂಜಬೇಡವೆಂದು ಮುಟ್ಟಿಸಿದ ಮನೆಗೆ3
--------------
ಚಿದಾನಂದ ಅವಧೂತರು