ಶೋಭಾನವೆನ್ನಿರೆ ಶುಭಕರ ಸಾವಿತ್ರೇರು |
ಪ್ರಭುಗುರು ಆತ್ಮಾ ಶ್ರೀರಾಮಗ ಪ
ರಾಮರಾವಣ ಕ್ರೋಧನಿಸ್ಸೀಮ ಕುಂಭಕರ್ಣಾದಿ |
ತಾಮಸದವರಾ ಮದಮುರಿದು |
ತಾಮಸದವರ ಮದಮುರಿದು ಹೃದಯಕ |
ಪ್ರೇಮ ಜಯೋತ್ಸವದಿಂದೈ ತಂದಾ 1
ಒಡನೆ ಶಾಂತಿ ಸೀತೆಯಾ ಬಿಡಿಸಿ ತಂದನು ಸೆರೆಯಾ |
ದೃಢವಿಭೀಷಣನ ಸ್ಥಾಪಿಸಿದನಾ |
ದೃಢವಿಭೀಷಣನ ಸ್ಥಾಪಿಸಿ ಆಶಾಪಾಶ |
ಕಡಲ ಮಧ್ಯ ಪೂರದೊಳು ಈಗ 2
ವಿವೇಕ ಹರಿವಾನದಿ ಭಾವದಾರತಿಯೋಳು |
ತೀವಿದ ಸಮ್ಯಜ್ಞಾನ ಜ್ಯೋತಿ |
ತೀವಿದ ಸಮ್ಯಜ್ಞಾನಜ್ಯೋತಿಯಿಂದ |
ದೇವದೇವೇಶಗ ತಿಂದೀಗ 3
ಅರಿಗಳ ಶಿಕ್ಷಿಸು ಶರಣರ ರಕ್ಷಿಸು |
ಧರೆಯೊಳುಯೆಂದು ಹರಸುತ |
ಧರೆಯೊಳು ಎಂದು ಹರಸುತ ಮುತ್ತಿನ |
ಪರಮಶಾಶಯ ನೊಸಲೊಳಿಟ್ಟು 4
ಇಹಪರಸುಖದಾತಾ ಬಾಹ್ಯಾಂತ್ರ ಸದೋದಿತಾ
ಮಹಿಪತಿಸುತ ಪ್ರಭು ರಘುನಾಥ |
ಮಹಿಪತಿಸುತ ಪ್ರಭು ರಘುನಾಥ ನೆನೆವರ
ಸಹಕಾರಿ ನಮ್ಮ ಸದೋದಿತ 5