ಶರಣು ಕೃಷ್ಣವೇಣಿ ಶರಣು ಪುಣ್ಯಾಭರಣಿ
ಶರಣು ಇಹಪರದಾಯಿನೀ ಪ
ಸರ್ವವ್ಯಾಪಕನಿರಂಜನನೆನಿಪ ಶ್ರೀವಿಷ್ಣು
ಉರ್ವಿಯೊಳು ದ್ರವರೂಪದೀ
ಹರ್ವಿತಿಹಸಂದೇಹವಿಲ್ಲದಕೆ ಭಕುತಿಯಲಿ
ಅರ್ವವನೆ ಗತಿಯ ಪಡದಾ ಮುದದಿ 1
ಅಚ್ಯುತನು ಕೃಷ್ಣನದಿ ಹರಿವುತಿಹನೆಂದು
ಮೆಚ್ಚಿವೇಣಿಯ ನಾಮದಿ
ನಿಚ್ಚ ಸತ್ಸಂಗವೆಂದರಿತು ಕೂಡಿದ ಶಿವನು
ಸಚ್ಚರಿತನಾಮಮಹಿಮಾನೇಮಾ 2
ನಿನ್ನ ಪೂರೆಲುದಿತ ಪವನದಿ ದುರಿತವೋಡಿದವು
ಇನ್ನು ಮಿಂದವನ ಗತಿಯಾ
ಬಣ್ಣಿಸುವ ನಾವನೆಲೆ ಜನನೀತಾರಿಸುಯನ್ನ
ಮನ್ನಿಸು ಗುರುವಿನಾಸುತನಾ 3