ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಜೋ ಜೋ ದೇವರದೇವನೆ ಜೋ ಜೋ ಪ ಶರಣ ಹೃತ್ಕು ಮುದನಿಶಾಮಣ ಜೋ ಜೋ ದುರಿತಾವಳಿತಮದ್ಯುಮಣೀ ಜೋ ಜೋ ಸುರಮುನಿಜನ ಚಿಂತಾಮಣಿ ಜೋ ಜೋ ಚೂಡಾಮಣಿ ಜೋ ಜೋ 1 ಬಾಲಕಲೀಲಾಲೋಲನೆ ಜೋ ಜೋ ಮೂಲೋಕಜೀವನಪಾಲನೆ ಜೋ ಜೋ ಕ್ಷುಲ್ಲಕರಿಪುಕುಲ ಶಾಲನೆ ಜೋ ಜೋ ತಿಲಕಸ್ತೂರಿ ಬಾಲನೆ ಜೋ ಜೋ 2 ಮೋಹನ ಮಾನಸ ಮೂರ್ತಿಯೆ ಜೋ ಜೋ ಮಹಿಮನುಪಮ್ಯದ ಕೀರ್ತಿಯೆ ಜೋ ಜೋ ಇಹಪರದಲಿ ಭಕ್ತ ಸಾರ್ಥಿಯೆ ಜೋ ಜೋ ಮಹಿಪತಿನಂದ ನಿಷ್ಟಾರ್ಥಿಯೆ ಜೋ ಜೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಕೇತಪುರ ವಾಸಿ ಕಪಟವೇಷ | ಶ್ರೀಕಮಲನಾಭನ ನಖದಲಿ ಕಾಶೀ ಪ ವಿಶ್ವತೋಮುಖ ಬ್ರಹ್ಮ ವಿಶ್ವತೋಚಕ್ಷು | ವಿಶ್ವ ವಿಶ್ವಬಾಹು ವಿಶ್ವರೂಪ ರೂಪ || ವಿಶ್ವ ಬ್ರಹ್ಮಾಂಡ ಆಧಾರ ಕಾರಣ | ವಿಶ್ವೇಶ್ವರ ಪ್ರಾಣ ಮಂತ್ರ ರಾಮ ರಾಮ 1 ಪರಿಯಂತ ರೋಮಕೂಪ | ಅಗಣಿತ ಕಮಲಜ | ಹಸ್ತಿ ಚರ್ಮಾಂಬರರು ಇದ್ದು ನೆಲೆಗಾಣರು | ನಾಸ್ತಿ ವಿಷ್ಣು ಪರದೈವ ಇಹಪರದಲಿ2 ಕಷ್ಟವಿಲ್ಲದೆ ಮಕ್ಕಳಾಟಕೆ ತ್ವರದಿಂದ | ಸೃಷ್ಟಿಸುವ ಕಣ್ಣು ಎವೆ ಹಾಕುವ || ಅಷ್ಟರೊಳನೇಕ ಬ್ರಹ್ಮಾಂಡ ನಾಟಕ | ವಿಷ್ಣು ಕರ್ಮಾಣಿ ಪಶ್ಯತೆ ಪಶ್ಯತೆ 3 ನಿತ್ಯ ತೃಪ್ತಿ ನಿರಾಹಾರಿ ನಿತ್ಯಾನಂದ | ಮೃತ್ಯು ಹಾ ಕಾಲಪ್ರಮಾಣ ಪರುಷಾ || ಶರಧಿ | ಸತ್ಯ ಸಂಕಲ್ಪ ನಿಷ್ಠನಾಹಂತೆ 4 ಅಜನಯ್ಯ ಅದ್ಭುತ ಮಹಿಮ ಪುರುಷೋತ್ತಮ | ಭುಜಧರನಯ್ಯಯಾ | ಅಮಿತಕಾಯಾ | ವಿಜಯಸಾರಥಿ ವಿಚಕ್ಷಣ ದೀಪ್ತ ಮೂರುತಿ | ಭುಜಗಂಗಿರಿ ವಿಜಯವಿಠ್ಠಲ ವೆಂಕಟೇಶಾ 5
--------------
ವಿಜಯದಾಸ
ದಯಮಾಡೋ ದಯಮಾಡೋ ದಯಮಾಡೋ ರಂಗ ಪದಯಮಾಡೋ ನಾ ನಿನ್ನ ದಾಸನೆಂತೆಂದು ಅ.ಪಹಲವು ಕಾಲವು ನಿನ್ನ ಹಂಬಲವೆನಗೆಒಲಿದು ಪಾಲಿಸಬೇಕುವಾರಿಜನಾಭ1ಇಹಪರದಲಿ ನೀನೆ ಇಂದಿರೆರಮಣಭಯವೇಕೋ ನೀನಿರಲು ಭಕ್ತರಭಿಮಾನಿ 2ಕರಿರಾಜವರದನೆ ಕಂದರ್ಪನಯ್ಯಪುರಂದರವಿಠಲ ಸದ್ಗುಣ ಸಾರ್ವಭೌಮ 3
--------------
ಪುರಂದರದಾಸರು