ನೋಡೆಲೆ ಸುಮತಿ ಪೆಣ್ಮಣಿಗೊಲಿದ
ಗಾಡಿಗಾರ ಚೋರ ರೂಢಿಗೆ ರಂಗ ಪ.
ಈಡುಂಟೇ ಶತ ಜೋಡಿಶೆ ಶಿಶುಗಳ
ಬೇಡ ಪಂಥ ನಿನ್ನ ಬೇಡಿಕೊಂಬೆನೆ ಕುಮತಿಅ.ಪ.
ಅಪ್ರಾಮೇಯನ ಗುಡಿಯೊಳಗಿದನೆ
ಸುಪ್ರಕಾಶ ಎನ್ನಪ್ಪಾ ಮುಂಗುರುಳುಗಳೊ
ಳೊಪ್ಪುತಲಿಹನೆ ಬೆಡಗಿಂದೊಡನೆ
ಅಪ್ಪನ ಬ್ರಹ್ಮಗಂಟುಡಿದಾರ ಉಡುಗೆಜ್ಜೆ ಬೊಮ್ಮ
ನಪ್ಪ ಅಂಬೆಗಾಲಿಕ್ಕಿ ನೆಲಸಿಹನೆ ಕಂ
ದರ್ಪ ಕೋಟಿ ತೇಜದಿ ಮೆರೆವನ 1
ಅರವಿಂದದಳ ವೆಂಕಟನಿರುವಲ್ಲೆ
ತಿರುಮಲ ನಾರಾಯಣ
ಚರಿತಾಪ್ರಮೇಯ ಚೆÉನ್ನಪಟ್ಟಣ ತೀರ ಮುಳೂರಲ್ಲೆ
ಸರಸ ಸಂಚರಿಸುವ ವರ ಚೈತ್ರದ ರಥ
ಅರಿವಿಲ್ಲವೆ ಕಣ್ತೆರೆದು ನೋಳ್ಪರಿಗೆ
ದುರಿತ ದೂರ ಕಣಿ ವರಪ್ರದ ದೇವ
ಅರಿದವರಿಗೆ ಕಣ್ ತೆರೆವನು ದೇವ ನೋಡೆ 2
ಅಪ್ಪ ಕೃಷ್ಣಗೆ ಬೆಣ್ಣೆ ಹಣ್ಣನುಗೊಡಲು
ಇಪ್ಪನೆ ತನಯರನು
ಸುತ್ತೇಳು ಲೋಕದಿ ನೋಡಲು ಇಲ್ಲೆಲ್ಲೆಲ್ಲೂ
ಶಿಶು ಇಹನಲ್ಲೇ ಅಪ್ಪ ಶ್ರೀ ಶ್ರೀನಿವಾಸ ಒಪ್ಪನೋ
ತಪ್ಪನೆಲ್ಲವಪ್ಪಿಪ್ಪನೊ ಕರುಣವ
ಸರ್ಪಶಯನ ತಿಮ್ಮಪ್ಪನ ಕರುಣ
ಒಪ್ಪ ತೆರದಿ ಸ್ತುತಿ ಮಾಡುವ ಬಾರೆ 3