ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟೇಕೆ ಎನ್ನ ಮೇಲೆ ಈ ಸಿಟ್ಟು ಹರಿಯೆ ಸೃಷ್ಟಿಗೆ ನೀ ಕರ್ತನಾಗಿ ಶ್ರೀನಿವಾಸಧೊರಿಯೆ ಪ ಇನ್ಯಾರು ಹರಿ ಎನಗಿನ್ನು ಈ ಜಗದೊಳಗೆ ಎನ್ನ ದೂರು ಯಾರಿಗೆ ಮೊರೆಯಿಡಲಿ ಎನಗೆ ಮನ್ನಿಸಿ ದಯಮಾಡಿ ಸುಮತಿಯ ನೀ ತಂದು ಕೈಯನ್ನೇ ಹಿಡಿದು ಇನ್ನು ಈಗ ರಕ್ಷಿಸದಲೆ 1 ಸಕಲ ಜೀವ ರಕ್ಷಕÀನು ಸಾಧುಜನ ಪೋ- ಷಕನು ಸಕಲ ಲೋಕಗಳೆಲ್ಲ ಸಲಹುತಿಹನೊ ಅಕಳಂಕ ಮಹಿಮ ಶ್ರೀ ಆದಿದೇವರ ದೇವ ಭಕುತ ವತ್ಸಲನೆಂಬ ಬಿರುದು ನಿನ್ನಲ್ಲಿ 2 ಇಂದು ಮಾಡಿದ ಪಾಪಗಳು ಇಂದು ಪರಿಹಾರ ಮಾಡಿ ಎನ್ನ ಮುಂದೆ ಧನ್ಯನ ಮಾಡಿ ಮುಕ್ತಾನಂತೆನಿಸಿ ತಂದೆ ' ಹೊನ್ನಯ ವಿಠಲ’ ದಯಮಾಡಿ ಸಲಹದಲೆ 3
--------------
ಹೆನ್ನೆರಂಗದಾಸರು
ಇಷ್ಟೇಕೆ ನಿರ್ದಯ ಶ್ರೀಹರಿಯೇ ಸೃಷ್ಟೀಪತಿಯೆ ಪ. ಮುಟ್ಟಿ ಭಜಿಪರ ನಿಟ್ಟಿಸಿ ನೋಡದೆ ನಿಷ್ಠುರವಾಗಿಹುದಿಷ್ಟವೆ ನಿನಗಿದು ಅ.ಪ. ಸಣ್ಣ ಮಾತುಗಳಾಡಿದೆನೇನೊ ದೆನ್ನ ತಲೆಯ ಮೇಲಿನ್ನೊಗೆಯದಿರು 1 ಕೋರೆಯ ತೋರುತ ಕೊಸರುವುದೇಕೋ ಶ್ರೀಹರಿ ನೀ ನೀರೀತಿ ಮಾಡುವ ಬಗೆಯಿನ್ನೇಕೋ ನೀರಜಭವಪಿತ ನೀನೇನಗೈದರು ಸೇರಿದೆ ನಿನ್ನನು ಸಾರೆನದಾರನು 2 ಸಿಂಗನ್ನ ಪೋಲುವ ಮುಖ ಧರಿಸಿ ಕಂಗೆಡೆ ಭಯದಿ ಜಗಂಗಳ ನಡುಗಿಪ ನುಂಗಲು ಬರುವಾಸಿಂಗನ ಬಗೆ ಸಾಕೋ 3 ಮುನ್ನಾ ಶುಕ್ರನ ಕಣ್ಣನು ತಿವಿದಾ ಪುಲ್ಲಿನತುದಿಯಿಂ ಎನ್ನೀ ಕಣ್ಣನ್ನು ತಿವಿಯದಿರಣ್ಣಾ ನಿನ್ನೀಕರದೊಳಿಹ ಘನ ಕೊಡಲಿಗೆ ನೀ ನಿನ್ನಾರನು ಗುರಿಗೈಯದಿರೆಂಬೆನು 4 ಶಿಲೆಯಾಗಿದ್ದವಳ ಕಲುಷವ ಕಳೆದು ಪಾವನೆಯೆನಿ ಕಾಳಿಂಗನ ಫಣೆಯೊಳು ಕುಣಿಕುಣಿದೇ ಭಳಿರೆನೆ ಬಾಲ ಗೋಕುಲ ಬಾಲೆಯರೆಲ್ಲರ ಜಾಲವಿದ್ಯೆಯಿಂ ಮರುಳುಗೊಳಿಸಿದೆ 5 ತುರುಗವನೇರುತ ತರುಬಲು ಬೇಡೈ ಧರೆಯೊಳು ನೀನೆತ್ತಿದ ಪರಿಪರಿ ರೂಪವ ಸ್ಮರಿಸಿ ಸ್ಮರಿಸಿ ಮನಬೆರಗಾಗಿದೆ ಹರಿ6 ಶರಣಾಭರಣನೇ ನೀನೆಂದು ಮನದೆಂದು ಮರೆಬೇಡುವೆನೈ ಬಳಿಸಂದು ವರಶೇಷಗಿರಿ ದೊರೆನೀನಿಂದು 7
--------------
ನಂಜನಗೂಡು ತಿರುಮಲಾಂಬಾ