ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೆ ಎನ್ನ ನಾಮಗಿರಿಯಮ್ಮ ಹರಿಗುರುಗಳ ಕೃಪಾಬಲ ಎನ್ನಲ್ಲಿರುವಂತೆ ಪ ಕರುಣದಿ ನೋಡೆ ನಾಮಗಿರಿಯಮ್ಮ ಇಂದಿರೆ ಎನ್ನ ಸುಖಿಯನ್ನೆ ಮಾಡೆ ವಾರಿಜಮುಖಿ ನರಪಾಲಾಧಮರ ದುರ್ಮುಖವ ನೋಡಿಸದಂತೆ 1 ಸುಖಚಿದಾಕಾರೆ ಎನ್ನ ಮನೆಗೆ ದಯವಿಟ್ಟು ಬಾರೆ ನಾರೆಯರಲ್ಲಿ ಸರಿ ನಿನಗಾರೆ ಪಂಕಜನೇತ್ರೆ ಕಿಂಕರನೆಂದು ಆತಂಕ ಬಿಡಿಸೆ ತಾಯೆ 2 ಚರಣಾರವಿಂದ ಸೇವಕನಲಿ ಕೃಪೆಯಿಟ್ಟು ಮಂದಹಾಸದೆ ಬಂದು ಸುಖಬುದ್ಧಿಯಿಂದ ಇಂದಿರಾದೇವಿ ಚಂದ್ರವದನೆ ಎನ್ನ ಮಂದಿರದೊಳಗಿದ್ದು 3 ಶ್ರಿತ ಸುರಧೇನು ದೇವಿ ನೀನೆಂದು ಇಂದಿರೆ ಇಷ್ಟುಪೇಕ್ಷೆ ನಿಂಗೇನು ಕಷ್ಟಗಳೆಲ್ಲ ನಷ್ಟವಾಗುವ ಪರಿ ದೃಷ್ಟಿ ಎನ್ನೊಳಗಿಟ್ಟು 4 ನರಹರಿ ಜಾಯೆ ನಾಮಗಿರಿಯಮ್ಮ ಬಂದು ನೀ ಕಾಯೇ ಪೇಳುವುದೇನು ಸರ್ವಜ್ಞ ತಾಯೇ ವಾರಿಜಮುಖಿ ನಿಜ ವರ್ಣಾಶ್ರಮಧರ್ಮ ಚ್ಯುತಿ ಎಂದೂ ಬರದಂತೆ 5
--------------
ವಿದ್ಯಾರತ್ನಾಕರತೀರ್ಥರು