ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿನ್ನಪ ಕೇಳಯ್ಯಾ ಬಡವನ ಮನ್ನಿಸು ಮಹರಾಯ ಪ ಎನ್ನ ಭವಗುಣಗಳನ್ನು ಕಳೆದು ಪೊರೆ ಸನ್ನುತಾಂಗ ಹರಿ ಉನ್ನತ ಮಹಿಮ ಅ.ಪ ತೊಳಲಿಬಳಲಿ ಬಂದೆ ಸಂಸಾರದ್ಹೊಲಸಿ ನೊಳಗೆ ನಿಂದೆ ಅಳಿಯುವ ದೇಹಕೆ ಕಳವಳಿಸುವ ಮನ ಮಲಿನತೊಳೆದು ನಿರ್ಮಲ ಮಾಡು ತಂದೆ 1 ಹುಟ್ಟಿ ನೀ ಸಾಯ್ವುದಕೆ ಬಂದಿಲ್ಲ ಗಟ್ಟ್ಯಾಗಿರಲಿಕ್ಕೆ ಸಠೆ ಈ ಲೋಕವು ದಿಟವಲ್ಲೆನಗೆ ಬಟ್ಟೆ ತಪ್ಪಿಸು ತಂದೆ 2 ಇಷ್ಟುದಿನವು ಕಳೆದು ತಿಳಿಯದೆ ಭ್ರಷ್ಟತನದಿ ಬಾಳ್ವೆ ಇಷ್ಟು ದಿನ ದಿನಗಳ್ವ್ಯರ್ಥ ಕೆಟ್ಟಿದ್ದೆ ಸಾಕಯ್ಯ ಶಿಷ್ಟಗುಣವಕೊಟ್ಟು ಸಲಹೊ ಶ್ರೀರಾಮ3
--------------
ರಾಮದಾಸರು
ಸಜ್ಜನರ ಸಂಗ ನಮಗೆಂದಿಗಾಗುವುದೊ |ದುರ್ಜನರ ಸಂಗದಿಂದಲಿ ನೊಂದೆ ಹರಿಯೆ ಪವಾಕು-ವಾಕಿಗೆ ಡೊಂಕನೆಣಿಸುವರು-ಮತ್ತೆ |ಪೋಕರಾಡಿದ ಮಾತು ನಿಜವೆಂಬರು ||ವಾಕ್‍ಶೂಲಗಳಿಂದ ನೆಡುವರು ಪರರ ನೀ |ಪೋಕುಮಾನವರಿಂದ ನೊಂದೆ ಹರಿಯೆ 1ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು |ನ್ಯಾಯವಿಲ್ಲದೆ ನುಡಿವರು ಪರರ ||ಭಾವಿಸಲರಿಯರು ಗುರುಹಿರಿಯರನಿಂಥ |ಹೇಯ ಮನುಜರಿಂದ ನೊಂದೆ ಹರಿಯೆ 2ಒಡಜನರನು ಕೊಂದು ಅಡಗಿಸಿಕೊಂಬರು |ಬಿಡಲೊಲ್ಲರು ಹಿಡಿದನ್ಯಾಯವ ||ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥಕಡು ಮೂರ್ಖರಿಂದ ನಾ ನೊಂದೆನು ಹರಿಯೆ 3ತೊತ್ತಿನೊಡನೆ ತನ್ನ ಸ್ನೇಹ ಸರಸ ಮಾತು |ತೆತ್ತಿಗರೊಡನೆ ಪಂಥವ ನುಡಿವರು ||ಸತ್ತಬಳಿಕ ಸೃಷ್ಟಿ ಸಟೆಯೆಂಬರು ಇಂಥ |ಮತ್ತಮನುಜರಿಂದ ನೊಂದೆ ಶ್ರೀಹರಿಯೆ4ಇಷ್ಟುದಿನವು ನಿನ್ನ ನೆನೆಯದ ಕಾರಣ |ಕಷ್ಟಪಡುವ ಕೈಮೇಲಾಗಿ ||ಸೃಷ್ಟಿಗೊಡೆಯ ಶ್ರೀ ಪುರಂದರವಿಠಲನೆ |ಮುಟ್ಟಿ ಭಜಿಸಬೇಕು ಧೃಷ್ಟಮನವು ನಿನ್ನ 5
--------------
ಪುರಂದರದಾಸರು