ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೃಷ್ಟಿ ಕಾರಣ ದಯಾ ದೃಷ್ಟಿಯಲಿ ನೋಡೆನ್ನ ಘಟ್ಟಿಗನೆನಬೇಕೊ ಇಷ್ಟಿಲ್ಲ ಅಪರಾಧ ಪ ಇಷ್ಟವರನ ಬಂಧದೋಳೆನ್ನ ಸಿಲುಕಿಸಿ ದುಷ್ಟರೂ ಒಂದಾಗಿ ತಾವೆಲ್ಲ ಎನ್ನನೂ ಲಿಷ್ಟರೊಳು ನೀ ಕೇಳುವಂತೆ ಕೂಗಿದೆನಲ್ಲ 1 ನಿನ್ನ ಮಾತುಗಳಾಡಧ್ಹಾಂಗೆನ್ನ ಮಾಡಿಸಿ ಅನ್ಯವಾರುತಿಗಳು ಚನ್ನಾಗಿ ನುಡಿಸಲು ಅನ್ಯಾಯ ಬಂತೆಂದು ಅವರಂತೆ ನುಡಿದು ನಾ ಮನ್ನದೊಳಗೆ ಮೊರೆ ಇಟ್ಟದನರಿಯಾ 2 ಒಳಗೆ ಹೊರಗೆ ತುಂಬಿಕೊಂಡಿಹರು ಬಹಳ ಖಳರು ಅವರು ದೇಶ ಕಾಲವಯ್ಯ ಬಳಿಯಲಿ ನಿನ್ನವರು ಗೂಢ ವೇಷದಿ ತಾವು ಸುಳಿಯಲು ಅವರನ್ನು ಗುರುತು ಮಾಡಿದೆನಯ್ಯ 3 ಈಗಲೂ ನಿನ್ನ ಬಲಪವನನಾಗಮದಿಂದ ಬ್ಯಾಗನೆ ಖಳರನ್ನ ವರದು ಸವರಿಸೊ ಜಾಗರೂಕನಾಗಿ ಅದೇ ಪದ್ಧತಿ ಪಿಡಿದು ಸಾಗಿ ಬಂದೆನು ಕೇಳು ಎನ್ನಿಂದೇನಪರಾಧ4 ಲೇಸಾಗಿ ಬಲವಿತ್ತು ಎನ್ನನು ಕಳಿಸಲು ಆಸು ಅಸುರರನ್ನು ತರದೊಟ್ಟುವೆಯಾ ವಾಸುದೇವವಿಠಲ ನೀ ಕೈಯ್ಯ ಪಿಡಿದರೆ ಆ ಸುಕಾರ್ಯಕೆ ಬಾಹೆ ನೋಡೆನ್ನ ಶಕುತಿ5
--------------
ವ್ಯಾಸತತ್ವಜ್ಞದಾಸರು
ಸೃಷ್ಟಿಗೊಡೆಯನೇ ನಿನ್ನ ದೃಷ್ಟಿಯಿಂದಲಿ ಎನ್ನ ಕಡೆ ನೋಡವಲ್ಲಿ ಪ ಘಟ್ಯಾಗಿ ನೀ ಗತಿಯೆಂದು ನಾ ನಂಬಿದರೆ ಸೊಟ್ಟಗಿಹ ಮೊಗವಟ್ಟವೇರುತಲಿದೆ ಇಷ್ಟಿಲ್ಲವೆಂದು ನೀ ಬಿಟ್ಟ ರಾಜವನಲ್ಲಾ ಕಟ್ಟುವೆನೋ ಇಟ್ಟು ಮನ ತವ ಪದದಿ ಬಿಡದೆ 1 ಅಷ್ಟ ಸೌಭಾಗ್ಯ ಮದವೆಷ್ಟೋ ಅದರಿಂದ ದಯ ದೃಷ್ಟಿ ಇಲ್ಲದೇ ನಯನ ಮುಚ್ಚಿ ತೆರೆಯುವುದೋ ಭ್ರಷ್ಟನೆಂದು ದೂರ ದೃಷ್ಟೀಲಿ ನೋಡಿದರೆ ಬಿಟ್ಟು ಕೊಡೊ ಭಕುತವತ್ಸಲನೆಂಬೋ ಬಿರುದು 2 ಇಟ್ಟು ನೋಡುವುದು ನಿನಗೆಷ್ಟು ಸುಖವೋ ಅಟ್ಟಿ ಬಹ ದುರಿತಗಳ ಮೆಟ್ಟಿನೀ ತುಳಿಯದಿರೆ ಬಿಟ್ಟು ಕೊಡೊ ಕರುಣಾಸಾಗರನೆಂಬೊ ಬಿರುದು 3 ಕೆಟ್ಟ ಜನ್ಮವ ಕೊಡು ಕನಿಷ್ಟದಿಂದಲಿತು ಹೊಟ್ಟೆಗನ್ನವು ದೊರೆಯದಂತೆ ಮಾಡೋ ಪುಟ್ಟಿ ಭಕುತಿ ಮಾತ್ರ ಥಟ್ಟನೆ ಕೊಟ್ಟು ಮನ- ದಿಷ್ಟ ಪೂರೈಸಿ ತವ ದಾಸನ ಮಾಡೋ 4 ಶ್ರೇಷ್ಠ ಸಾತ್ವೀಕನಾಗಿದ್ದರೆ ಹರಿ ನಿನಗೆ ಇಷ್ಟು ಬಾಯ್ದೆರದು ನಾ ಬೇಡಲ್ಯಾಕೊ ಕೆಟ್ಟ ಪಾಪಿಷ್ಟನಾದುದಕೆ ಶ್ರೀ ಹನುಮೇಶ ವಿಠಲನೇ ತವ ಚರಣ ತೋರಿಸಲಿ ಬೇಕೊ 5
--------------
ಹನುಮೇಶವಿಠಲ