ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಶಾಪದಿಂದಡಗಿತೈ ಧರ್ಮ ಪರಿವಾರ ಪ ತಾಪಪಡಿಸುವ ಪರಿಯ ಶ್ರೀಪತಿಯೆ ಬಲ್ಲ ಅ.ಪ ಇಷ್ಟ ಸುಖ ಪಡೆಯುವರ ಪುಣ್ಯ ಫಲವು || ಇಷ್ಟಿದರನರಿಯದವ ನರನೊ ಪಾಮರನೊ 1 ಸ್ಥಿರಚರ ಪ್ರಾಣಿಯೊಳು ಪರಿಕಿಸಲು ಮೇಲಾದ | ನರಜನ್ಮದೊಳು ಬಂದು ಸುಖದುಃಖದ || ಚಾರದಿಂ ನಡೆಯುವವನವ ನರೋತ್ತಮನು 2 ಪುಣ್ಯಫಲದೊಳು ಸದಾನಂದ ಸುಖ ಪಡೆವ 3
--------------
ಸದಾನಂದರು
ಪಾಪಿಯ ನೋಡೆ ಬಡಿಸುವ ಪಾಪಿಯ ನೋಡೆಪಾಪಿಯ ನೋಡೆ ಪಾಪದ ಪಿಶಾಚಿಪಾಪಿಯ ಮೋರೆಯ ನೋಡಬಾರದಕ್ಕೆ ಪ ಅನ್ನವನೀಗ ಇಷ್ಟಿಷ್ಟು ಹಾಕುವಳು ಅತ್ತಲಾಗಿ ಇಡುವಳುಏನು ಇಷ್ಟೆಂದು ಕೇಳಲು ಅರಿಯಿರಿ ಹೊಟ್ಟೆಯೆಂದು ಎದುರಿಗೆ ನಿಂತೆ ಮುಸಿ ಮುಸಿ ನಗುವಳು 1 ಆಜ್ಯವ ಹಾಕೆನೆ ಅಲ್ಲಾಡುತಲಿ ಅರಿಯಿರಿ ಬೇಸಗೆ ಸೆಖೆ ಎಂತೆಂಬಳುಮಜ್ಜಿಗೆ ಹಾಕೆನೆ ಮಂದಮತಿಗಳ ಮಹಾಶೈತ್ಯವು ಬೇಡವು ಎಂತೆಂಬಳು 2 ಉತ್ತಮರೆಂದರೆ ಒಳ್ಳೆಯದಿಕ್ಕಳು ಉಬ್ಬಿಸಹೋದರೆ ಉಬ್ಬದಿಹಳುನಿತ್ಯ ಚಿದಾನಂದ ಸತ್ಪುರುಷರಿಗೆ ನಿಶ್ಚಯವಾಗಿ ಉಣಬಡಿಸುವಳು 3
--------------
ಚಿದಾನಂದ ಅವಧೂತರು
ವಿಕ್ರಮಾ - ಪಾಹಿ - ತ್ರಿವಿಕ್ರಮಾ ಪ ವಿಕ್ರಮ ನಮಿಪೆ ನಾ ನಿನ್ನ | ನೀನುಚಕ್ರವ ಪಿಡಿದೊಂದು ದಿನ್ನ | ಆಹನಕ್ರನುದ್ದರಿಸಿದ | ಪ್ರಕ್ರಯ ನಾನರಿತುರುಕ್ರಮ ಶರಣೆಂಬೆ | ವಕ್ರ ಮನವ ಕಳೆಅ.ಪ. ಪುಟ್ಟ ರೂಪವನೆ ತಾಳುತ್ತಾ | ಬಲಿಯಇಷ್ಟಿಯೊಳವನ ಬೇಡುತ್ತಾ | ದಾನಕೊಟ್ಟೆನೆಂದವನು ಪೇಳುತ್ತಾ | ಬರೆಶಿಷ್ಟ ಶುಕ್ರನು ಬೇಡೆನ್ನುತ್ತಾ | ಆಹಕಟ್ಟಲು ಗಿಂಡೀಯ | ದಿಟ್ಟ ಶುಕ್ರನ ಕಣ್ಣಪುಟ್ಟ ದರ್ಭೆಲಿ ಚುಚ್ಚಿ ಮೆಟ್ಟಿ ನಿಂತೆಯೊ ಬಲಿಯ 1 ಥೋರ ರೂಪದೊಳು ಅಂಬರಾ | ಹಬ್ಬಿಧಾರುಣಿ ಅಳೆದ ಗಂಭೀರ | ಮತ್ತೆಮೂರನೇದಕೆ ಬಲಿಯ ಶಿರ | ವತ್ತಿಭಾರಿ ಪಾತಾಳಕ್ಕೆ ಧೀರಾ | ಆಹಪೌರೋಚನಿಯನ್ವತ್ತಿ | ದ್ವಾರವ ಕಾಯುತ್ತತೋರಿದೆ ಕರುಣವ | ಭೋರಿ ದೈವರ ಗಂಡ3 ಪಾದ ತೊಳೆದೂ | ಬಿಡೆಬ್ರಹ್ಮಾಂಡದೊಳು ತಾನು ಬಂದೂ | ಆಹಸುಮ್ಮನಸರ ಲೋಕ | ಕ್ರಮ್ಮಿಸುತಲಿ ಬರುವಅಮ್ಮಹ ಗಂಗೆ ಪೆ | ತ್ತೆಮ್ಮನುದ್ದರಿಸಿದಾ 3 ಬಾದರಾಯಣ ಬಳಿ ಭವ್ಯಾ | ನಾಗಿಮೋದ ತೀರ್ಥರಿಂದ ಸೇವ್ಯಾ | ನೀನುವಾದಿರಾಜರಿಗೊಲಿದು ತ್ವರ್ಯಾ | ಬಂದುಸ್ವಾದಿ ಪುರದಿ ನಿಂದು ಸ್ತವ್ಯಾ | ಆಹಮೋದದಿ ನೆಲೆಸುತ್ತ | ಕಾದುಕೊಂಡಿಹೆ ನಿನ್ನಪಾದವ ಪೊಗಳೂವ | ಸಾದು ಸಂತತಿಯನ್ನ 4 ಹೀನ ಮಾನವನೆಂದು ಎನ್ನಾ | ಉದಾಸೀನ ಮಾಡುವಿಯೇನೊ ಘನ್ನ | ಕೇಳೊನೀನು ತ್ರೈಭುವದಿ ಪಾವನ್ನಾ | ನೆಂದುಗಾನದೋಳ್ ತವ ಪಾದವನ್ನಾ | ಆಹಆಗಮಿಸುತ ಬಂದ | ಮಾನವನೆನ್ನನುಧೀನನೆಂದೆನಿಸಾರೆ | ಜ್ಞಾನವ ನೀಡೆನಗೇ 5 ಪ್ರತಿ ಪ್ರತಿ ವತ್ಸರದೊಳು | ಮಾಸಹತ್ತೆರಡು ಪೂರ್ಣಿಮದೊಳು | ತವರಥದೊತ್ಸವ ಕಾರ್ಯಗಳೂ | ಬಲುಹಿತದಿ ತವ ದಾಸರುಗಳೂ | ಆಹಅತಿ ವೈಭವದಿಂದ | ವಿತರಣೆಯಿಂದಲಿಪ್ರತಿಯಿಲ್ಲವೆಂದೆನ್ನೆ | ವಿಸ್ತರಿಸುವರಯ್ಯ 6 ಪರಿ ಪೊಗಳುತ ಚೆನ್ನಾ | ಆಹಗುರು ಗೋವಿಂದ ವಿಠ್ಠಲ | ಪರಮ ಪುರುಷನೆಂದಾನರ್ತನಗೈಯುತ | ನರರೇನು ಧನ್ಯರೋ7
--------------
ಗುರುಗೋವಿಂದವಿಠಲರು
ಸೃಷ್ಟಿ ಕಾರಣ ದಯಾ ದೃಷ್ಟಿಯಲಿ ನೋಡೆನ್ನ ಘಟ್ಟಿಗನೆನಬೇಕೊ ಇಷ್ಟಿಲ್ಲ ಅಪರಾಧ ಪ ಇಷ್ಟವರನ ಬಂಧದೋಳೆನ್ನ ಸಿಲುಕಿಸಿ ದುಷ್ಟರೂ ಒಂದಾಗಿ ತಾವೆಲ್ಲ ಎನ್ನನೂ ಲಿಷ್ಟರೊಳು ನೀ ಕೇಳುವಂತೆ ಕೂಗಿದೆನಲ್ಲ 1 ನಿನ್ನ ಮಾತುಗಳಾಡಧ್ಹಾಂಗೆನ್ನ ಮಾಡಿಸಿ ಅನ್ಯವಾರುತಿಗಳು ಚನ್ನಾಗಿ ನುಡಿಸಲು ಅನ್ಯಾಯ ಬಂತೆಂದು ಅವರಂತೆ ನುಡಿದು ನಾ ಮನ್ನದೊಳಗೆ ಮೊರೆ ಇಟ್ಟದನರಿಯಾ 2 ಒಳಗೆ ಹೊರಗೆ ತುಂಬಿಕೊಂಡಿಹರು ಬಹಳ ಖಳರು ಅವರು ದೇಶ ಕಾಲವಯ್ಯ ಬಳಿಯಲಿ ನಿನ್ನವರು ಗೂಢ ವೇಷದಿ ತಾವು ಸುಳಿಯಲು ಅವರನ್ನು ಗುರುತು ಮಾಡಿದೆನಯ್ಯ 3 ಈಗಲೂ ನಿನ್ನ ಬಲಪವನನಾಗಮದಿಂದ ಬ್ಯಾಗನೆ ಖಳರನ್ನ ವರದು ಸವರಿಸೊ ಜಾಗರೂಕನಾಗಿ ಅದೇ ಪದ್ಧತಿ ಪಿಡಿದು ಸಾಗಿ ಬಂದೆನು ಕೇಳು ಎನ್ನಿಂದೇನಪರಾಧ4 ಲೇಸಾಗಿ ಬಲವಿತ್ತು ಎನ್ನನು ಕಳಿಸಲು ಆಸು ಅಸುರರನ್ನು ತರದೊಟ್ಟುವೆಯಾ ವಾಸುದೇವವಿಠಲ ನೀ ಕೈಯ್ಯ ಪಿಡಿದರೆ ಆ ಸುಕಾರ್ಯಕೆ ಬಾಹೆ ನೋಡೆನ್ನ ಶಕುತಿ5
--------------
ವ್ಯಾಸತತ್ವಜ್ಞದಾಸರು
ಸೃಷ್ಟಿಗೊಡೆಯನೇ ನಿನ್ನ ದೃಷ್ಟಿಯಿಂದಲಿ ಎನ್ನ ಕಡೆ ನೋಡವಲ್ಲಿ ಪ ಘಟ್ಯಾಗಿ ನೀ ಗತಿಯೆಂದು ನಾ ನಂಬಿದರೆ ಸೊಟ್ಟಗಿಹ ಮೊಗವಟ್ಟವೇರುತಲಿದೆ ಇಷ್ಟಿಲ್ಲವೆಂದು ನೀ ಬಿಟ್ಟ ರಾಜವನಲ್ಲಾ ಕಟ್ಟುವೆನೋ ಇಟ್ಟು ಮನ ತವ ಪದದಿ ಬಿಡದೆ 1 ಅಷ್ಟ ಸೌಭಾಗ್ಯ ಮದವೆಷ್ಟೋ ಅದರಿಂದ ದಯ ದೃಷ್ಟಿ ಇಲ್ಲದೇ ನಯನ ಮುಚ್ಚಿ ತೆರೆಯುವುದೋ ಭ್ರಷ್ಟನೆಂದು ದೂರ ದೃಷ್ಟೀಲಿ ನೋಡಿದರೆ ಬಿಟ್ಟು ಕೊಡೊ ಭಕುತವತ್ಸಲನೆಂಬೋ ಬಿರುದು 2 ಇಟ್ಟು ನೋಡುವುದು ನಿನಗೆಷ್ಟು ಸುಖವೋ ಅಟ್ಟಿ ಬಹ ದುರಿತಗಳ ಮೆಟ್ಟಿನೀ ತುಳಿಯದಿರೆ ಬಿಟ್ಟು ಕೊಡೊ ಕರುಣಾಸಾಗರನೆಂಬೊ ಬಿರುದು 3 ಕೆಟ್ಟ ಜನ್ಮವ ಕೊಡು ಕನಿಷ್ಟದಿಂದಲಿತು ಹೊಟ್ಟೆಗನ್ನವು ದೊರೆಯದಂತೆ ಮಾಡೋ ಪುಟ್ಟಿ ಭಕುತಿ ಮಾತ್ರ ಥಟ್ಟನೆ ಕೊಟ್ಟು ಮನ- ದಿಷ್ಟ ಪೂರೈಸಿ ತವ ದಾಸನ ಮಾಡೋ 4 ಶ್ರೇಷ್ಠ ಸಾತ್ವೀಕನಾಗಿದ್ದರೆ ಹರಿ ನಿನಗೆ ಇಷ್ಟು ಬಾಯ್ದೆರದು ನಾ ಬೇಡಲ್ಯಾಕೊ ಕೆಟ್ಟ ಪಾಪಿಷ್ಟನಾದುದಕೆ ಶ್ರೀ ಹನುಮೇಶ ವಿಠಲನೇ ತವ ಚರಣ ತೋರಿಸಲಿ ಬೇಕೊ 5
--------------
ಹನುಮೇಶವಿಠಲ
ಪೋಗದಿರಲೊ ರಂಗ-ಬಾಗಿಲಿಂದಾಚೆಗೆ |ಭಾಗವತರು ಕಂಡರೆತ್ತಿಕೊಂಡೊಯ್ವರೊ ಪಸುರಮುನಿಗಳು ತಮ್ಮ ಹೃದಯಗಹ್ವರದಲಿ |ಪರಮಾತ್ಮ ನಿನ್ನ ಕಾಣದರಸುವರೊ ||ದೊರಕದ ವಸ್ತುವು ದೊರೆಕಿತು ತಮಗೆಂದು |ಹರುಷದಿಂದ ನಿನ್ನ ಕೆರೆದೆತ್ತಿಕೊಂಬರೊ 1ಅಗಣಿತಗುಣ ನಿನ್ನ ಜಗದ ನಾರಿಯರೆಲ್ಲ |ಹಗರಣಮಾಳ್ಪರೊ ಗೋಪಾಲನೆ ||ಮಗುಗಳ ಮಾಣಿಕ್ಯ ತಗುಲಿತು ಕರೆತಂದು |ಮಿಗಿಲು ವೇಗದಿ ಬಂದು ಬಿಗಿದಪ್ಪಿಕೊಂಬರೊ 2ದಿಟ್ಟ ನಾರಿಯರು ತಮ್ಮಿಷ್ಟವ ಸಲಿಸೆಂದು |ಅಟ್ಟಟ್ಟಿ ಬೆಂಬತ್ತಿ ತಿರುಗುವರೊ ||ಸೃಷ್ಟೀಶ ಪುರಂದರವಿಠಲ ರಾಯನೆ |ಇಷ್ಟಿಷ್ಟು ಬೆಣ್ಣೆಯ ಕೊಡುವೆನೊ ರಂಗಯ್ಯ 3
--------------
ಪುರಂದರದಾಸರು
ಶ್ರೀದುಂದುಭಿಸಂವತ್ಸರ ಸ್ತೋತ್ರ154ವಂದೇದುಂದುಭಿಸಂವತ್ಸರ ನಿಯಾಮಕಗೆಇಂದಿರಾಪತಿ ಪೂರ್ಣ ಆನಂದ ಚಿನ್ಮಯಗೆಚಂದಕರದಲಿ ವಂಶ ಇಷ್ಟಿ ಕರುಣಾದೃಷ್ಟಿ ನಂದನಂದನವಸುದೇವ ದೇವಕೀ ಸುತಗೆ ಪ.ರಾಜಾ ಶುಕ್ರನುಬುಧಮಂತ್ರಿ ಮೊದಲಾದವರೊಳು ರಾಜಸುತಏಕÀಸ್ಪರಾತ್ಅಂತರ್ಯಾಮಿಈ ಜಗಜ್ಜನರ ಸಾಧು ಸಾಧನಕ್ಕಾಗಿನಿವ್ರ್ಯಾಜ ಕರುಣದಿ ಮಳೆ ಬೆಳೆ ಸೌಖ್ಯಗಳಈವ1ಅಲ್ಲಲ್ಲಿ ಅಗ್ನಿ ಭಯ ಚೋರ ದುಷ್ಟರ ಭಯಸುಳ್ಳುವಾದಿಗಳ ಚಟುವಟಿಕೆ ಆಗಾಗ ಕಳೆದುಸಜ್ಜನರನ್ನು ಕಾಪಾಡಿ ಲೋಕ ಕ್ಷೇಮ ಮಾಲೋಲಮಾಳ್ಪನು ಪಾರ್ಥಸಖಪಾಂಡವೇಯ ಪಾಲ2ಪುತ್ರ ಸಂತಾನ ಬೇಕೆಂಬ ಸಾಧು ಭಕ್ತರಿಗೆವೈರಾಡಿ ವರದನು ವಿಪ್ರನಿಗೆ ಒಲಿದವನುಚಂದ್ರ ಶೇಖರ ನುತನುವನಜಭವತಾತನುಶ್ರೀ ಪ್ರಸನ್ನ ಶ್ರೀನಿವಾಸನ ದಯದಿಈವಸಂತಾನ ಸಂಪತ್ತು3- ಶ್ರೀ ಕೃಷ್ಣಾರ್ಪಣಮಸ್ತು -
--------------
ಪ್ರಸನ್ನ ಶ್ರೀನಿವಾಸದಾಸರು