ಸುಮ್ಮನೆ ಹೋಗುತಾದಲ್ಲೋ ಇಷ್ಟಾರ್ಥಪಡಿದೇ
ಸುಮ್ಮನೆ ಹೋಗುತಾದಲ್ಲೋ ಪ
ಸುಮ್ಮನೆ ಹೋಗುತಾದೆ ಹೆಮ್ಮಾರಿಗೀಡಾಗಿ
ಮರ್ಮವರಿತು ಪರಬ್ರಹ್ಮನ ಕೂಡದೆ ಅ.ಪ
ಎಷ್ಟೋ ಸುಕೃತವಡೆದು ಈ ನರಜನ್ಮ
ತೊಟ್ಟು ಸೃಷ್ಟಿಗೆ ಇಳಿದು
ಹುಟ್ಟಿ ಬಂದಂಥ ಕಾರ್ಯ ಬಿಟ್ಟು ಮರವೆಗೂಡಿ
ಕೆಟ್ಟು ಹೋಗ್ಯಾದೋ ವಯ ಕೃಷ್ಣಾರ್ಪಣೆನದೆ ಸುಟ್ಟು 1
ವಯವೆಂಬ ಧನ ಪಡೆದು ಈ ಮಹದನು
ಭವದ ಸಂತೆಗೆ ಇಳಿದು ಭವದ
ಜಯೆಂಬ ಅನುಭವದ ವ್ಯಾಪಾರ ಮಾಡಿ
ಭವಹರನ ಕಾಣದೆ ಜವನಗೀಡಾಗಿ ತಾನು 2
ಅರಿವಿನಾಲಯ ಪೊಕ್ಕು ಸಂಸಾರವೆಂಬ
ಮರೆವಿನ ಬಲೆಯೊಳ್ ಸಿಕ್ಕು
ಪರಮಪುರುಷ ಸಿರಿಯರಸ ಶ್ರೀರಾಮನ
ಚರಣಕಮಲಕ್ಕೆ ಸಲ್ವ ವರಮೋಕ್ಷ ಪಡೆಯದೆ ಲ