ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣಾ ಎನ್ನ ಕಷ್ಟ ಹರಿಸೊ ಜಿಷ್ಣು ಸಾರಥಿಯೆ ಪ ಪಾದ ಮುಟ್ಟಿ ಭಜಿಸುವರ ಇಷ್ಟಾರ್ಥಗಳನೀವೆ ಸೃಷ್ಟಿಗೊಡೆಯ ದೇವ ಅ.ಪ ಶಿಲೆಯಾದಹಲ್ಯೆಯ ದುರಿತವ ತರಿದೆ ಸಲಿಲ ಮಡುವಿಲಿ ಮಕರದಿ ಕರಿಯ ರಕ್ಷಿಸಿದೆ ಸುಲಭದಿಂದಜಮಿಳನ ದುರಿತವ ತರಿದೆ ಕಲಿ ಸುಯೋಧನನ ಓಲಗದಿ ಗರ್ವ ಮುರಿದೆ 1 ವಿಶ್ವರೂಪನು ನೀನೆ ವಿಶ್ವವ್ಯಾಪಕನೆ ವಿಶ್ವೋದರನೆ ಕೃಷ್ಣಾ ವಿಶ್ವನಾಟಕನೆ ವಿಶ್ವಬಾಯೊಳು ತೋರ್ದ ವಿಶ್ವೋದ್ಧಾರಕನೆ ವಿಶ್ವಮಯನೆ ಸರ್ವ ವಿಶ್ವನು ನೀನೆ2 ಅಗಣಿತ ಮಹಿಮ ಆಶ್ಚರ್ಯನು ನೀನೆ ಬಗೆ ಬಗೆ ನಾಮಗಳಿಂದ ಪೂಜಿತನೆ ಖಗವರವಾಹನ ಕಂಸ ಮರ್ದನನೆ ನಿಗಮಗೋಚರ ನಿತ್ಯತೃಪ್ತನು ನೀನೆ 3 ಕನಕಗರ್ಭನ ಪಿತ ಕರುಣದಿ ಸಲಹೊ ಇನಕುಲ ತಿಲಕ ಸುಂದರ ಮೇಘಶಾಮ ದಿನಕರ ತೇಜ ಶ್ರೀ ಸನಕಾದಿ ಮುನಿನುತ ಹನುಮನಂತರ್ಯಾಮಿ ಮಮತೇಲಿ ಸಲಹೊ 4 ಕಮಲ ಸಂಭವನಯ್ಯ ಕಮಲಜಾತೆಯ ಪ್ರಿಯ ಕಮಲ ಪುಷ್ಪ ಮಾಲಾಲಂಕೃತ ಹರಿಯೆ ಕಮಲಭವೇಂದ್ರಾದಿ ಸುಮನಸರೊಡೆಯ ಶ್ರೀ-ಕಮಲನಾಭ ವಿಠ್ಠಲ ಕರುಣದಿ ಸಲಹೊ 5
--------------
ನಿಡಗುರುಕಿ ಜೀವೂಬಾಯಿ
ವೆಂಕಟರಮಣ ಮಾಂಪಾಹಿ ಸಂಕಟಹರಣ ಸರ್ವಲೋಕಕಾಧಾರ ಪ ಮತ್ಸ್ಯರೂಪವತಾಳಿ ವೇದಗಳ ರಕ್ಷಿಸಿದೆ ಮತ್ತೆ ಬೆಟ್ಟವ ಪೊತ್ತೆ ಕೂರ್ಮನಾಗಿ ಹೊತ್ತು ಭೂಮಿಯ ಪೊರೆದೆ ವರಾಹಾವತಾರದಲಿ ಬತ್ತಿ ಕಂಬದಿ ಬಂದೆ ನರಸಿಂಹನಾಗಿ ನೀ ಇತ್ತೆ ವರವನು ತುಳಿದು ಬಲಿಯು ನೀಡಲು ತಲೆಯ ವಟುರೂಪಿನಿಂದ ವೆಂಕಟರಮಣ ಮಾಂ ಪಾಹಿ 1 ಹೊತ್ತು ಪರಶುವ ಭುವಿಯ ಕ್ಷಾತ್ರಿಯರನೀ ಕೊಂದೆ ಮತ್ತೆ ರಾಮಾವತಾರದಲಿ ರಾವಣನ ಕೊಂದೆ ನಿತ್ತು ಕಾಪಾಡಿದೆಯೋ ಕೃಷ್ಣ ಪಾಂಡವರನ್ನು ಮತ್ತೆ ಬುದ್ದನರೂಪ ತಾಳಿ ಮೆರೆದೆ ತಾಳಿ ದರುಳ ದುರ್ಜನರನ್ನು ಮೆಟ್ಟಿ ಕುಟ್ಟಿದೆಯೋ ವೆಂಕಟರಮಣ ಮಾಂ ಪಾಹಿ 2 ಬೇಡಿದವರ ಇಷ್ಟಾರ್ಥಗಳನೀವ ಕಾಡಿದ ರಕ್ಕಸರ ಜೀವ ಕೊಳುವ ನೋಡಿ ದಯಮಾಡಿ ನೀಸುಜನರನು ಕಾವ ಆಡಿ ಅಡಗಿಸೋ ನೀನೇ ಮನದ ನೋವ ಗಾಢ ರಕ್ಷಿಸು ಕಡು ಬಾಡಿದೆ ಭಯದಲ್ಲಿ ವೆಂಕಟರಮಣ ಮಾಂ ಪಾಹಿ 3 ವರ ಅಜಾಮಿಳಗೆ ವರವಿತ್ತು ಸಲಹಿದೆಯೋ ಕರಿ ರಾಜ ಬರಲಿದಡೆ ಬಂದು ಕಾಯ್ದೆ ದುರುಳ ಕಾಳಿಂಗನನು ಮೆಟ್ಟಿಕುಣಿದಾಡಿದೆಯೋ ಧರಿಸಿ ಗೋವರ್ಧನವ ಕಾಯ್ದೆಗೋವಳರನ್ನು ವೆಂಕಟರಮಣ ಮಾಂ ಪಾಹಿ 4 ಇಳೆಯೊಳಗೆ ಮೂಡಲಗಿರಿವಾಸನಾಗಿ ನೆಲೆಯ ನರಿದು ಭಜಿಪರ ಪಾಪನಾಶ ಸೂರ್ಯ ಕೋಟಿ ಪ್ರಕಾಶ ಕಲಿಯುಗದೊಳು ನಿನ್ನ ಮಹಿಮೆ ವಿಶೇಷ ಸಲಹೋ ಪಾತಳ ಸೇವೆಯ ಗೆಣಸಿನ ಕುಣಿ ವೆಂಕಟರಮಣ ಮಾಂ ಪಾಹಿ 5
--------------
ಕವಿ ಪರಮದೇವದಾಸರು