ವಂದಿಸುವೆ ಭಾರ್ಗವೀಶ ಸುಂದರಾಂಗ ಲೋಕಾಧೀಶ ಪ
ವಂದ್ಯಮಾನ ಪಾದಕಮಲ ಇಂದಿರಾ ಮನೋವಿಹಾರ ಅ ಪ.
ಅಷ್ಟಮೂರ್ತಿ ಕಷ್ಟಹರಣ ಕೃಷ್ಣಮೂರ್ತಿ ಶ್ರೀ ಕೇಶವ
ದುಷ್ಟದನುಜ ಕುಲವಿನಾಶ ಸೃಷ್ಟಿಪಾಲದೇವಾಧೀಶ 1
ನಿನ್ನ ಪಾದವನ್ನು ಭಜಿಪೆ ಚೆನ್ನಕೇಶವ ಪಾಲಿಸೆನ್ನ
ಇನ್ನೂ ಭವದಿ ಶೋಕಗೊಂಬೆ ನಿನ್ನ ಹೊರತಿನ್ಯಾರ ಕಾಣೆ 2
ಪುಟ್ಟ ಧ್ರುವಗೆ ಪಟ್ಟಗಟ್ಟಿ ದಿಟ್ಟತನದಿ ಪೊರೆದ ನೀನು
ಕಷ್ಟದಿಂದಜಾಮಿಳನು ಕೂಗೆ ಇಷ್ಟವರವ ನಿತ್ತೆ ದೇವ 3
ಕಾನನದಿ ಸ್ನಾನಗೈದು ಜಪವ ಮಾಡಲಾರೆ ನಾನು
ಧೇನುನಗರ ಪತಿಯೆ ನಿನ್ನ ಧ್ಯಾನದಿಂದ ಜ್ಞಾನವೆಂದು 4