ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಕು ಸಮ್ಮತನಾಗೆಲೋ ನೀ ನದಕುನು ಸಮ್ಮತನಾಗೆಲೊ ಪ ಇದು ಅದು ಎಂಬುದರ್ವಿಧವ ತಿಳಿದು ನೀ ನೆದಕುನು ಸಮ್ಮತನಾಗೆಲೊ ಅ.ಪ ಕಡುಸಿರಿಯೆಂಬುದು ಮರವೆಕುಣಿ ಬಡತನವೆಂಬುದು ಅರಿವಿನಮನೆ ಒಡೆತನವೆಂಬುದು ಪಾಪದ ಗೋಣು ದುಡಿತವೆಂಬುವುದು ಜ್ಞಾನದ ಖನಿ ದೃಢದಿಂದರಿದು ಹುಡುಕಾಡಿದರೋ ಳ್ಹಿಡಕೋ ನಿನಗೆ ಹಿತವಾವುದು ನೋಡಿ1 ಕೆಟ್ಟ ಸಂಸಾರ ಹೇಯಮೂತ್ರ ಕುಣಿ ನಿಷ್ಠೆ ಭಕ್ತಿ ಆನಂದಾಮೃತ ಖಣಿ ದುಷ್ಟಜನರ ಸಂಗ ನರಕಕುಣಿ ಶಿಷ್ಟ ಸಜ್ಜನಸಂಗ ಮುಕ್ತಿಮನೆ ನಿಷ್ಠೆಯಿಂದರಿತು ಇಷ್ಟರೊಳಗೆ ನೀ ಇಷ್ಟಕೆ ಬಂದದ್ದು ಹಿಡಕೋ ನೋಡಿ 2 ನರರ ಸೇವೆ ಮಹ ದುರಿತಬೇರು ಶರಣರ ಸೇವೆ ಸ್ಥಿರಸುಖದ ತವರು ಬರಿದೆ ಕೆಡದೆ ಹರಿಚರಣ ಕೋರು ಮರುಳು ಗುಣಗಳೆಲ್ಲ ತರಿದು ತೂರು ಧೀರ ಶ್ರೀರಾಮನ ಚಾರುಚರಣ ಸೇರಿ ಪರಮಪದವಿಯೊಳು ಲೋಲ್ಯಾಡು 3
--------------
ರಾಮದಾಸರು
ಏನುಕಾರಣ ಯೆನಗೆ ತಿಳಿಯದಿದೇಕೋ ನೀನುದ್ಧರಿಸುವುದಕೋ ಕೆಡಿಸುವುದಕೋ ಕೃಷ್ಣ ಪ ಸುರರು ಹಬ್ಬವ ಕೆಡಿಸೆ ಸುರಪತಿಯು ಕೋಪದಲಿ ಭರದಿಂದ ಕಲ್ಲು ಮಳೆಯನು ಕರೆಯಲಾಗ ಕಿರುವೆರಳ ತುದಿಯಲ್ಲಿ ಗಿರಿಯ ನೀನಾಂತು ಹಗ ಲಿರುಳೇಳು ದಿನ ಬೋವಿಗಳಂತೆ ಕೊಡೆವಿಡಿದ 1 ಭವ ತಿಮಿರ ಶರಧಿಯದಾಂಟಿಸುವ ವೋಲು ಸುರಿವ ಮಳೆಗತ್ತಲೆಗೆ ಬೋವಿಯಾಗಿ ಕರದಲ್ಲಿ ಕೊಡೆ ದೀವಟಿಗೆಯ ಪಿಡಿದೆನ್ನ ಮನೆ ಪರಿಯಂತ ಕಳುಹಿ ಕ್ಷುಧೆಯಾಯಿತೆಂಬುದೇನು 2 ಕೊಟ್ಟ ಕಜ್ಜಾಯಂಗಳಿಗೆ ನೀ ಸೆರಗೊಡ್ಡಿ ಕಟ್ಟಿ ಕೊಂಡೊಯ್ದು ಲಕ್ಷ್ಮಿಯ ಬಳಿಯೊಳು ಇಟ್ಟರ್ಧವನು ಎನ್ನ ಸಂತತಿಗೆ ನೀಕರುಣಿಸಿದೆ ಇಷ್ಟರೊಳಗೆ ವೈಕುಂಠಪತಿ ಚೆನ್ನಿಗರಾಯಾ 3
--------------
ಬೇಲೂರು ವೈಕುಂಠದಾಸರು
ಪುಸಿಬಲು ಆಶ್ಚರ್ಯವೆಲ್ಲ ಪ ಬಲ್ಲದ ಗಂಡುತಾನಲ್ಲ ಬೇಡಿ ಗೋಕುಲಕೆಲ್ಲ 1 ಅಷ್ಟ ವರುಷವಿನ್ನು ತುಂಬಿದುದಿಲ್ಲ ಇಷ್ಟರೊಳಗೆ ಹೆಣ್ಣು ಮಮತೆಗಳಿಲ್ಲ ಸೃಷ್ಟಿಗೆ ಬಲು ಚೋದ್ಯವಾಗಿದೆಯಲ್ಲ ದೃಷ್ಟಿಗೆ ನಮಗೇನು ದಿಟ ಕಾಣೊದಿಲ್ಲ 2 ಬಲರಾಮಗೋವಳರಲ್ಲಿ ಮಂಗಳಮಹಿಮ ಲಕ್ಷ್ಮೀಶನೇಬಲ್ಲ 3
--------------
ಕವಿ ಪರಮದೇವದಾಸರು
ಯಾತರವನೆಂದುಸುರಲಿ - ಜಗನ್ನಾಥ ಮಾಡಿದ ಒಂದು ನರರೂಪವಯ್ಯ ಪ ಮುಟ್ಟು ಹುಟ್ಟಿನೊಳು ನೆಟ್ಟನೆ ನಾ ಬಂದೆತೊಟ್ಟಿದ್ದೆನಾಗ ತೊಗಲಬಕ್ಕಣಇಷ್ಟರೊಳಗೆ ಒಂದು ವಿವರವರಿಯದಂಥಭ್ರಷ್ಟಗೆ ನನಗಿನ್ಯಾತರ ಕುಲವಯ್ಯ 1 ಸೂತಕ ದುರ್ಗಂಧದ ಮಲಮೂತ್ರನಿಂದ ಠಾವಲಿ ತನ್ನ ನಿಜವರಿಯದೆಬಂದದ್ದು ಬಚ್ಚಲ ಗುಣಿ ತಿಂದದ್ದು ಮೊಲೆ ಮಾಂಸ - ಇಂಥಅಂಧಕಗೆ ನನಗಿನ್ಯಾತರ ಕುಲವಯ್ಯ 2 ಒಂಬತ್ತು ಎಜ್ಜದೊಳೊಸರುವ ಹೊಲಸದುತುಂಬಿ ತುಳುಕುವ ಕೊಡವಾಗಿರಲುಇಂಬಿಲ್ಲದೆ ಹೊಲೆಗೊಂಡ ಠಾವಿನಲಿ ಬಂದಂಥಡಂಬಕ ನನಗಿನ್ಯಾತರ ಕುಲವಯ್ಯ3 ಕರುಳು ಖಂಡ ನಾರುವ ಚರ್ಮರೋಹಿತನರಪಂಜರದೀ ಹುರುಳಿಲ್ಲದನರದೇಹ ಹೊತ್ತು ತಿರುಗುವಂಥತಿರುಕ ನನಗಿನ್ಯಾತರ ಕುಲವಯ್ಯ 4 ಹಚ್ಚಡದ ಮೇಲೆ ಲಚ್ಚಿಕೆಯಿಟ್ಟಂತೆಹೆಚ್ಚು ಕಡಮೆ ಎಂದು ಹೆಣಗಾಡುತನಿಚ್ಚ ಕಾಗಿನೆಲೆಯಾದಿಕೇಶವನಹುಚ್ಚಗೆ ನನಗಿನ್ಯಾತರ ಕುಲವಯ್ಯ 5
--------------
ಕನಕದಾಸ