ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ತು ಚಿತ್ತಾನಂದ ಭಕ್ತಜನಬೆಂಬಲನೆ ಸತ್ಯಾತ್ಮ ಸರ್ವೋತ್ತಮ ಪ ಮೃತ್ಯುಸಂಹರ ಸರ್ಗಮತ್ರ್ಯಪಾತಾಳತ್ರಯ ಶೌರಿ ಅ.ಪ ಬದ್ಧಕುಲಹರಣ ಗೋವರ್ಧನೋದ್ಧಾರ ಕ್ಷೀ ರಾಬ್ಧಿ ಕನ್ನಿಕಾರಮಣ ಬದ್ಧಸಂಸಾರದೊಳಗೆ ಬಿದ್ದು ಬಳಲುವ ಎನ್ನ ನುದ್ಧರಿಸು ದಯಭೂಷಣ ಬಿದ್ದೆ ನಿಮ್ಮಯಪದಕೆ ಮಧ್ವಮುನಿಪ್ರಿಯನೆ ಪರಿ ಶುದ್ಧನೆಂದೆನಿಸೆನ್ನ ಶುದ್ಧಪದ್ಧತಿಗಳನು ತಿದ್ದು ಎನ್ನೊಳಗಿದ್ದು ಶುದ್ಧಚೈತನ್ಯರೂಪ ಭೂಪ 1 ಕಪಟಬುದ್ಧಿಯ ಕಳೆದು ಅಪರೂಪ ನಿಜಜ್ಞಾನ ಕೃಪೆಮಾಡು ಭಕ್ತಲೋಲ ಅಪರೋಕ್ಷಮತಿ ನೀಡಿ ಅಪಮೃತ್ಯು ಪರಿಹರಿಸು ಅಪರಿಮಿತ ಮಹಿಮ ಜಾಲ ಸುಫಲದಾಯಕ ನಿಮ್ಮ ಜಪವೆನ್ನ ಜಿಹ್ವೆಯೊಳು ಸ್ಥಾಪಿಸೈ ಭಜಕಜನಪಾಲ ಕಪಿವರದ ವನಮಾಲ ಕಪಟಗಳಕುಲಕಾಲ ಕೃಪಾದೃಷ್ಟಿನೀಡೆನ್ನೊಳು ಕೇಳು 2 ಭ್ರಷ್ಟನು ಇವನೆಂದು ಬಿಟ್ಟಿ ಬೇಸರ ಬೇಡ ಮುಟ್ಟಿಭಜಿಪೆ ತವಪಾದವ ಎಷ್ಟು ತಪ್ಪಿರ್ದರು ಸುಟ್ಟು ಸಫಲೆನಿಸೆನ್ನ ಕೆಟ್ಟ ಬವಣೆ ಕಳಿಯಭವ ಹುಟ್ಟಿ ಸಾಯುವ ಮಹಕೆಟ್ಟ ಕಷ್ಟದ ಹಾದಿ ಕಟ್ಟುಮಾಡು ಹೇ ಮಾಧವ ದಿಟ್ಟ ಶ್ರೀರಾಮ ಎನ್ನ ಇಷ್ಟದೇವರು ನೀನೆ ಶಿಷ್ಟ ಸಜ್ಜನರ ಪ್ರೇಮಿ ಸ್ವಾಮಿ 3
--------------
ರಾಮದಾಸರು
ಶ್ರೀವಿಭವಸಂವತ್ಸರ ಸ್ತೋತ್ರ146ರಾಜ ರಾಜೇಶ್ವರ ಉಪೇಂದ್ರನಿಗೆ ನಮೋ ಎಂಬೆಭ್ರಾಜ ಲಕ್ಷ್ಮಿ ಭೂಮ ನಾರಸಿಂಹನಿಗೂ ಆನಮಿಪೆ ಪರಾಜಿಸುವವಿಭವನಾಮ ಸಂವತ್ಸರ ನಿಯಾಮಿಕ ಏಕಾತ್ಮನಲ್ಲಿನಿಜ ಭಕ್ತಿಯಿಂದ ಸ್ತುತಿಪರನ್ನ ಸಂರಕ್ಷಿಪ ಶ್ರೀಹರಿಯು 1ಭಾಸ್ಕರೋದಯದಲ್ಲಿ ಪ್ರಭವಾಸಿತ ಪಕ್ಷ ನಂತರವಿಭವಸಿತ ಪ್ರತಿಸತ್ಊಶನ ಶುಕ್ರಭಾರ್ಗವವಾಸರವು ನಮೋ ಎಂಬೆಶುಕ್ರನಿಗೆ ನಮ್ಮ ಹಿತಕಾಯ್ವಿ 2ದಿನೋದಯದಿವಿಭವಸಂವತ್ಸರಸಿತಪಕ್ಷದ್ವಿತಿಯೇಯು ಸೌರವಾಸರವುರಾಜಶನೈಶ್ಚರಗೂ ಮಂತ್ರಿಬುಧಮೊದಲಾದವರಿಗೂನಮೋ ಎಂಬೆ ದಯವಾಗಲಿ 3ಊದ ಕೊರತೆ ಅತಿ ಉಷ್ಣ ಸಸ್ಯಸಾಂದು ರಾಜರಾಜರಾಜ ಜನ ಮನಸ್ತಾಪಜನಕಾಷ್ಟ ನೀದಯದಿ ಪರಿಹರಿಸಿ ಸಲಹೋಕೃಪಾನಿಧಿಯೇ ನರಹರಿಯೇ 4ಧವಳಗಂಗೆಗೆ ಅಪ್ರಸಿದ್ಧ ಹೆಸರು ಕೂರ್ಮತೀರ್ಥವುಎಂದುಂಟು ಅದು ಪ್ರಾಮಾಣಿಕ ಎಂದುತಿಳಿಯುವುದು ವಿಭವದಲಿ ನೀರಿನ ಮಟ್ಟ ಸ್ವಲ್ಪಕಾಲ ತಗ್ಗುವಾಗ 5ಸಂವತ್ಸರ ನಿಯಾಮಕಹರಿರೂಪಗಳ ಸೋಚಿತಆಚರಣೆ ಸಹ ಸಂಸ್ಮರಿಸಿಕುಲ ಇಷ್ಟದೇವರ ಮತ್ತು ಗುರುಗಳ ನೆನೆದು ಭಕ್ತಿಮಾಳ್ಪಜನರಿಗೆ ಸುಖಕಾಲ 6ಕಮಲಸಂಭವ ಪಿತ ಕಮಲಾಲಯಪತಿಅಮಲಪೂರ್ಣಾನಂದಾದಿಗುಣ ನಿಧಿಯುಸುಮನಸರೊಡೆಯ ಶ್ರೀ ಪ್ರಸನ್ನ ಶ್ರೀನಿವಾಸನುತನ್ನ ಭಕ್ತರಿಗೆಈವಸುಕ್ಷೇಮವನು ಸರ್ವದಾ7
--------------
ಪ್ರಸನ್ನ ಶ್ರೀನಿವಾಸದಾಸರು
ಸೈಸಲಾರೆನೆಗೋಪಿನಿನ್ನ ಮಗನ ಲೂಟಿ |ಏಸೆಂದು ಪೇಳಲಮ್ಮ ||ವಾಸುದೇವನು ಬಂದು ಮೋಸದಿಂದಲಿ ಎನ್ನ |ವಾಸವಸೆಳಕೊಂಡು ಓಡಿ ಪೋದನಮ್ಮಪದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ |ಸಾವಿರ ನುಂಗುವನೆ ||ಭಾವಜನಯ್ಯಇದೇನೆಂದರೆ ನಿಮ್ಮ |ಕಾಮದೇವರು ನಾನು ಕೇಳಿಕೊ ಎಂಬನೆ 1ಅಗ್ರೋದಕತಂದು ಜಗುಲಿ ಮೇಲಿಟ್ಟರೆ |ವೆಗ್ಗಳದಲಿ ಕುಡಿವ ||ಮಂಗಳ ಮಹಿಮನ ವಿೂಸಲೆಂದರೆ ನಿಮ್ಮ |ಮಂಗಳಮಹಿಮನ ಅಪ್ಪನಾನೆಂಬುವ 2ಅಟ್ಟಡಿಗೆಯನೆಲ್ಲ ಉಚ್ಛಿಷ್ಟವ ಮಾಡಿ |ಅಷ್ಟು ತಾ ಬಳಿದುಂಬನೆ ||ವಿಷ್ಣು ದೇವರ ನೈವೇದ್ಯವೆಂದರೆ ನಿಮ್ಮ |ಇಷ್ಟದೇವರು ತೃಪ್ತನಾದನೆಂತೆಂಬುವ 3ಋತುವಾದ ಬಾಲೆಯರು ಪತಿಯೆಡೆ ಪೋಪಾಗ |ಕೃತಕದಿಂದಡಗಿಹನೆ ||ಮತಿಗೆಟ್ಟ ಪೆಣ್ಣೆ ಸುಂಕವ ಕೊಡು ಎನುತಲಿ |ಪ್ರತಿಯಾಗಿ ಮಾರನ ಸೂರೆಗೊಂಬುವನೆ 4ಅಚ್ಚಪಾಲು-ಮೊಸರುನವನೀತಮಜ್ಜಿಗೆ |ರಚ್ಚೆಮಾಡಿ ಕುಡಿವ ||ಅಚ್ಚ ಪುರಂದರವಿಠಲರಾಯನ |ಇಚ್ಛೆಯಿಂದಲಿ ನಿಮ್ಮ ಮನೆಗೆ ಕರೆದುಕೊಳ್ಳಿ 5
--------------
ಪುರಂದರದಾಸರು