ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(2) ತುಳಸಿರಾಮದಾಸರ ಅಂತಿಮ ಯಾತ್ರೆ ಬೆಂಗಳೂರಿಗೆ ಹೋಗಿ ಬಂದರೂ ಮೈಸೂರಿಂದಾ ಪ ಬೆಂಗಳೂರಿಗೆ ಹೋಗಿಬಂದ ಜಂಗಮನು ತಾನಾಗಿ ನಿಂದಾ ಕಂಗಳೆರಡರ ಮಧ್ಯ ತಾ ನಿಜ ಲಿಂಗನಾಗಿ ಕಾಣಬಂದಾ ಅ.ಪ ಬಿದಿಗೆ ಪಾಡ್ಯವ ಮಾಡಿ ನೋಡೆಂದಾ ಬಂದಾಗ ಬರದಾ ವಿಧಿಯ ಬರಹವ ತೊಡೆದುಕೊಂಡೆಂದ ಕದಿವ ಕಳ್ಳರ ಕಂಡುಹಿಡಿದು ಮದನಪಿತನಾ ಯುಧದಿ ಹೊಡೆದೂ ನದಿಯ ಸ್ನಾನವ ಮಾಡಿ ನಿಜ ಪದವಿ ತೋರಿದ ನಮ್ಮ ದೇಶಿಕ 1 ಸೃಷ್ಟಿ ತದಿಗೆಯೊಳಿರಲು ಬೇಡೆಂದಾ ಅಲ್ಲಾಗ ತನ್ನ ಇಷ್ಟದೈವದ ಪೂಜೆ ಮಾಡೆಂದಾ ದೃಷ್ಟಿಗೋಚರಮಾದ ಗುರುವು ಸೃಷ್ಟಿಗಧಿಕಾ ತುಲಶಿರಾಮನ ಇಷ್ಟದಿಂದಲಿ ಭಜಿಸಿನೋಡಲು ಸ್ಪಷ್ಟನಾಗಿ ಕಾಣುತೈತೆ 2
--------------
ಚನ್ನಪಟ್ಟಣದ ಅಹೋಬಲದಾಸರು
ನೋಡಿದೆನು ಭದ್ರಾಚಲವಾಸನ | ನೋಡಿದೆನು ಜಗದೀಶನಾ ನೋಡಿದೆನು ಶ್ರೀ ಸೀತಾರಮಣನ | ನೋಡಿದೆನು ಸರ್ವೇಶನಾ ಪ ಅಂಗನೇಯರ ಕೂಡಿ ನಾನು ಮಂಗಳಗಿರಿನೋಡಿದೆ ಮಂಗಳಾಂಗಾ ನಾರಸಿಂಹಗೆ ತಂದು ಪಾನಕ ನೀಡಿದೆ 1 ಸಜ್ಜನರಿಂದ ಕೂಡಿ ನಾನು ಬೆಜ್ಜವಾಡವ ನೋಡಿದೆ ಮೂರ್ಜಗ ಪಾವನಿಯ ಕೃಷ್ಣೆಯ ಮಜ್ಜನವು ನಾ ಮಾಡಿದೆ 2 ಮಾಧವನ ದಯದಿಂದ ನಾನು ಗೋದಸ್ನಾನವು ಮಾಡಿದೆ ಮೋದದಿಂದಲಿ ಬಂದು ವಿಮಾನರಾಮನ ನೋಡಿದೆ 3 ನೇಮದಿಂದಲಿ ಬಂದು ನಾನಾ ರಾಮದಾಸನ ನೋಡಿದೆ ವಾಮಭಾಗದಿ ಕುಳಿತ ಲಕ್ಷ್ಮಣ ಸ್ವಾಮಿ ದರುನ ಮಾಡಿದೆ 4 ಸಪ್ತಋಷಿಗಳು ದಶರಥಾದಿ ಉತ್ತಮರ ನಾ ನೋಡಿದೆ ಸುತ್ತು ಮುತ್ತು ದೇವತೆಗಳನಾ ಮತ್ತೆ ಮತ್ತೆನಾ ನೋಡಿದೆ 5 ದೋಷದೂರ ಭದ್ರಾಚಲದಿವಾಸ ರಾಮಚಂದ್ರನ ಸೋಸಿನಿಂದಲಿ ಬಂದು ನಾ ವಿಶೇಷ ದರುಶನ ಮಾಡಿದೆ 6 ಕಡುಹರುಷದಿಂದಲಿ ರಾಮನ ತೊಡೆಯಮ್ಯಾಲೆ ಒಪ್ಪಿದ ಮಡದಿ ಸೀತಾದೇವಿಯನ್ನು ಸಡಗರದಿ ನಾ ನೋಡಿದೆ 7 ಇಷ್ಟದಿಂದಲಿ ಭಜನೆಗೊಳ್ಳುವ ಶ್ರೇಷ್ಠ ರಾಮನ ನೋಡಿದೆ ಉಷ್ಣಕುಂಡದ ಸ್ನಾನವನ್ನು ಥಟ್ಟನೇ ನಾ ಮಾಡಿದೆ8 ಉನ್ನತವಾಗಿರುವ ಸುವರ್ಣಗೋಪುರ ನೋಡಿದೆ ಮುನ್ನ ಮಗ್ನವಾಗಿರುವ ಅನ್ನ ಛತ್ರದ ನೋಡಿದೆ 9 ಪರ್ಣಶಾಲೆಯನ್ನು ನೋಡಿ ಪರಮ ಹರುಷವ ತಾಳಿದೆ ನಿರ್ಮಲ ಚರಿತ್ರ ರಾಮನ ವರ್ಣಿಸಲಳವಲ್ಲವೆ 10 ಲಕ್ಷ್ಮೀವಲ್ಲಭ ರಾಮನ ಪ್ರತ್ಯಕ್ಷಮದಿವೆಯ ನೋಡಿದೆ ನಾ ನೋಡಿದೆ 11 ಚಂದ ಚಂದಾ ಜನರು ಎಲ್ಲಾ ಆನಂದದಿಂದಲಿ ತಂದು ತಂದು ಹಾಕುವಂತಹ ಚಂದವನು ನೋಡಿದೆ 12 ಇಂತಹ ರಾಮನವಮಿ ಉತ್ಸವ ಲೋಕದಲಿ ನಡೆವುದು ಹತ್ತುವದನ ಶೇಷನಿಗೂ ಸಹಾ ತಪ್ಪದೇ ಎಣಿಸಲಾಗದು 13 ನಮ್ಮವಾಯು ಸುತನ ಪಾದಕೆ ಸುಮ್ಮನೇನಾನೆರಗಿದೆ ಘನ್ನ ಮಹಿಮನ ಪ್ರಸನ್ನ ಸೀತಾರಾಮನನು ನಾ ನೋಡಿದೆ 14 ತೇರನೇರಿ ಬರುವ ರಾಮನ ವೈಯಾರವನು ನಾ ನೋಡಿದೆ ಮೇರು ನಂದನ ಭದ್ರಾಚಲದಿ ವಿಚಾರ ಮಾಳ್ಪುದ ನೋಡಿದೆ 15 ಪ್ರಹ್ಲಾದವರದ ನಾರಸಿಂಹ ವಿಠಲನ ಎಲ್ಲ ಉತ್ಸವ ನೋಡಿ ಮನಕೆ ಆಹ್ಲಾದವನೆ ನಾ ಪಾಡಿದೆ 16
--------------
ಓರಬಾಯಿ ಲಕ್ಷ್ಮೀದೇವಮ್ಮ